Saturday, May 4, 2024
spot_img
HomeChikballapurಅಂಬೇಡ್ಕರ್ ರವರ ಭಾವಚಿತ್ರವನ್ನು ಕಾರ್ಯಕ್ರಮದಿಂದ ತೆರವು ಗೊಳಿಸಿ ಇಡೀ ದೇಶಕ್ಕೆ ಅಪಮಾನ ಮಾಡಿದವರ ಮೇಲೆ ಸೂಕ್ತ...

ಅಂಬೇಡ್ಕರ್ ರವರ ಭಾವಚಿತ್ರವನ್ನು ಕಾರ್ಯಕ್ರಮದಿಂದ ತೆರವು ಗೊಳಿಸಿ ಇಡೀ ದೇಶಕ್ಕೆ ಅಪಮಾನ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ

ಶಿಡ್ಲಘಟ್ಟ:ರಾಯಚೂರು ಜಿಲ್ಲಾ ನ್ಯಾಯಾಧೀಶರು ಡಾ ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಅವಮಾನ ಮಾಡಿರುವುದನ್ನು ಖಂಡಿಸಿ ಇವರ ಮೇಲೆ ದೇಶದ್ರೋಹದ ಕಲಂ ಅಡಿಯಲ್ಲಿ ಪ್ರಕರಣ ದಾಖಲಸಿ ಸೇವೆಯಿಂದ ವಜಾಮಾಡಲು ಒತ್ತಾಯಿಸುವಂತೆ ಶಿಡ್ಲಘಟ್ಟ ನಗರದ ಆಡಳಿತ ಸೌಧದ ಬಳಿ ಕೆಲಕಾಲ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಪ್ರತಿಭಟಿಸಿ ತಹಸಿಲ್ದಾರ್ ರಾಜೀವ್ ರವರಿಗೆ ಮನವಿ ಪತ್ರಸಲ್ಲಿಸಿದರು. 
ಈ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಎನ್. ಎ. ವೆಂಕಟೇಶ್ ಮಾತನಾಡಿ, ಈ ದೇಶದ ಪವಿತ್ರ ಗ್ರಂಥವಾದ ಸಂವಿಧಾನವನ್ನು ಅತ್ಯಂತ ಶ್ರಮವಹಿಸಿ ರಚಿಸಿರುವ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನು ಗೌರವಿಸಬೇಕಾದುದ್ದು, ಈ ದೇಶದ ಪ್ರತಿಯೊಬ್ಬ ನಾಗರೀಕನ ಕರ್ತವ್ಯ. ಆದರೆ ಸಂವಿಧಾನದ ಅಡಿಯಲ್ಲ ಈ ನೆಲದ ನ್ಯಾಯವನ್ನು ರಕ್ಷಣೆ ಮಾಡುತ್ತಿರುವ ಏಕೈಕ ಅಂಗವೇ ನ್ಯಾಯಾಂಗ, ಇಂತಹ ನ್ಯಾಯಾಂಗದ ಪರಮೋನ್ನತ ಅಧಿಕಾರವನ್ನು ಹೊಂದಿರುವ ರಾಯಚೂರು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ರವರು ಗಣರಾಜ್ಯದಿನದಂದು ಸಂವಿಧಾನ ಶಿಲ್ಪ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಕಾರ್ಯಕ್ರಮದಿಂದ  ತೆಲುಗು ಗೊಳಿಸಿ, ಇಡೀ ದೇಶಕ್ಕೆ ಅಪಮಾನ ಮಾಡಿರುತ್ತಾರೆ. ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಈ ದೇಶದ ಪ್ರಜೆಗಳಗೆ ನ್ಯಾಯಾಂಗದ ಮೇಲೆ ಇರುವ ನಂಬಿಕೆಯನ್ನು ಉಳಸಬೇಕೆಂದು ಮತ್ತು ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಘಟನೆಗಳು ಮರುಕಳಿಸುವಂತಹ, ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿಸಿದರು.
ಶಿಡ್ಲಘಟ್ಟ ತಹಸೀಲ್ದಾರ್ ರಾಜೀವ್ ರವರ ಮುಖಾಂತರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರವರಿಗೆ ಮತ್ತು ಸರ್ಕಾರಕ್ಕೆ ಶಿಡ್ಲಘಟ್ಟ ತಾಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ಕ್ರಮಕ್ಕೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಜಿಲ್ಲಾ ಸಂಚಾಲಕ ಎನ್. ಎ.ವೆಂಕಟೇಶ್. ತಾಲೂಕು ಸಂಚಾಲಕ ಟಿಎ ಚಲಪತಿ , ತಾಲೂಕು ಸಂಘಟನಾ ಸಂಚಾಲಕ ಲಕ್ಕೇನಹಳ್ಳಿ ವೆಂಕಟೇಶ್, ಹೂಜಗೂರು ವೆಂಕಟೇಶ್, ಮಳ್ಳೂರು ಶಿವಕುಮಾರ್, ತಾಲೂಕು ಖಾಜಂಜಿ ರಾಜ್ ಕುಮಾರ್.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments