Saturday, May 4, 2024
spot_img
HomeChikballapurಸಾಮಾನ್ಯ ಸೇವಾಕೇಂದ್ರ ಉದ್ಘಾಟನೆ

ಸಾಮಾನ್ಯ ಸೇವಾಕೇಂದ್ರ ಉದ್ಘಾಟನೆ

ಶಿಡ್ಲಘಟ್ಟ: ಧರ್ಮಸ್ಥಳ ಸಂಸ್ಥೆಯ ನೂರಾರು ಜನೋಪಯೋಗಿ ಕಾರ್ಯಕ್ರಮಗಳ ಅತ್ಯುತ್ತಮ ಪಾರದರ್ಶಕ ಅನುಷ್ಟಾನದ ಫಲವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ತರ ಯೋಜನೆಗಳನ್ನು ಗ್ರಾಮ ಮಟ್ಟದಲ್ಲಿ ಅನುಷ್ಟಾನ ಮಾಡುವ ಮಹತ್ತರ ಜವಾಬ್ದಾರಿಯನ್ನು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಕೇಂದ್ರ ಸರ್ಕಾರ ನೀಡಿದೆ ಎಂದು ತಾಲ್ಲೂಕು ದಂಡಾಧಿಕಾರಿ ರಾಜೀವ್ ರವರು ತಿಳಿಸಿದರು.
 ಶಿಡ್ಲಘಟ್ಟದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ಗ್ರಾಮ ಮಟ್ಟದಲ್ಲಿ ಸಾಮಾನ್ಯ ಸೇವಾಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲು ಆಯ್ಕೆಯಾಗಿರುವ 31 VLE ಯವರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ನಂಬಿಕೆಗೆ ಇನ್ನೊಂದು ಹೆಸರೇ ಧರ್ಮಸ್ಥಳ. ಇವರು ಮಾಡದ ಕಾರ್ಯಕ್ರಮಗಳಿಲ್ಲ. ತಾಲ್ಲೂಕಿನಲ್ಲಿ ಹಲವಾರು ಬೇರೆ ಬೇರೆ ರೀತಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಪರ್ಯಾಯ ಸರ್ಕಾರದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇವರ ಕಾರ್ಯ ನಿಜವಾಗಲೂ ಅಭಿನಂದನೀಯ ಎಂದರು.

ಜಿಲ್ಲಾ ನಿರ್ದೆಶಕರಾದ ಪ್ರಶಾಂತ್ ಸಿ ಎಸ್ ರವರು ಮಾತನಾಡುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ತರ ಜನೋಪಯೋಗಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ರಾಜ್ಯಾದಾದ್ಯಂತ 6000 ಸಾಮಾನ್ಯ ಸೇವಾಕೇಂದ್ರಗಳನ್ನು ತೆರೆಯಲಾಗಿದ್ದು ಇದರಲ್ಲಿ ಶಿಡ್ಲಘಟ್ಟ ತಾಲ್ಲೂಕಿನಲ್ಲಿ 31 ಕೇಂದ್ರಗಳನ್ನು ತೆರೆಯುತ್ತಿದ್ದು ಸರ್ಕಾರದ ಸೌಲಭ್ಯಗಳನ್ನು ಜನ ಸಾಮಾನ್ಯರಿಗೆ ತಲುಪಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದ್ದು ಜನಸಾಮಾನ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. 
ನಗರಸಭೆ ಪೌರಾಯುಕ್ತರಾದ ಶ್ರೀಕಾಂತ್ ರವರು ಮಾತನಾಡುತ್ತಾ ತರಬೇತಿ ಪಡೆದುಕೊಂಡ ಸಿಬ್ಬಂದಿಗಳು ಸೇವಾ ಮನೋಭಾವನೆಯಿಂದ ಕರ್ತವ್ಯ ನಿರ್ವಹಿಸುವುದಲ್ಲದೇ ಸರ್ಕಾರದ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವಂತಹ ಸುವರ್ಣ ಅವಕಾಶ ಧರ್ಮಸ್ಥಳ ಸಂಸ್ಥೆ  ನೀಡಿದ್ದು ಈ ಅವಕಾಶವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಿ ಎಂದು ಸಿಬ್ಬಂದಿಗಳಿಗೆ  ಕಿವಿ ಮಾತು ಹೇಳಿದರು.
ಬೆಳ್ತಂಗಡಿ ತರಬೇತಿ ಸಂಸ್ಥೆಯ ಉಪನ್ಯಾಸಕರಾದ ರಾಜೇಶ್  ಸಿ ಎಸ್ ಸಿ ಜಿಲ್ಲಾ ಸಮನ್ವಯಾಧಿಕಾರಿ ಸುನಿಲ್ ರವರು ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ತ್ಯಾಗರಾಜ್ ಹಿತ್ತಲಹಳ್ಳಿ ಸುರೇಶ್ ಜಿಲ್ಲಾ ನೋಡಲ್ ಅಧಿಕಾರಿ ಅರುಣ್ ಸುಮನ್ ಅನಿಲ್ ನವೀನ್ ದಿನೇಶ್ ಶ್ರೀನಿವಾಸ್  ಹಾಗೂ 31 ಮಂದಿ  ಸಿಬ್ಬಂದಿಗಳು ಉಪಸ್ಥತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments