Friday, May 3, 2024
spot_img
HomeChikballapurದಿನದ 24 ಘಂಟೆಯು ಶಿಡ್ಲಘಟ್ಟ ನಗರದ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸವ ಯೋಜನೆ- ಅದ್ಯಕ್ಷೆ...

ದಿನದ 24 ಘಂಟೆಯು ಶಿಡ್ಲಘಟ್ಟ ನಗರದ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸವ ಯೋಜನೆ- ಅದ್ಯಕ್ಷೆ ಸುಮಿತ್ರಾ ರಮೇಶ್

ಶಿಡ್ಲಘಟ್ಟ: ದಿನದ 24 ಘಂಟೆಯು ಶಿಡ್ಲಘಟ್ಟ ನಗರದ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸವ ಯೋಜನೆಗೆ ನಗರಸಭೆ ಅಧ್ಯಕ್ಷರಾದ ಸಿ.ಎಂ.ಸುಮೀತ್ರಾರಮೇಶ್   ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು
ನಗರದ ಹೊರವಲಯದ ಹನುಮಂತಪುರದ ಬಳಿ ನಗರ ಸಭೆಯ ನಗರೋತ್ಥಾನ 3 ನೇ ಹಂತದ ಸುಮಾರು 05 ಕೋಟಿ ರೂಪಾಯಿಗಳ ಅನುದಾನ ವೆಚ್ಚದಲ್ಲಿ ನಗರದ ಜನತೆಗೆ ಕುಡಿಯುವ ನೀರು ಸರಬರಾಜಿಗೆ ಮೀಸಲಿಟ್ಟಿದ್ದು ಈ ಅನುದಾನದ ಯೋಜನೆಯಡಿಯಲ್ಲಿ 02 (GSLR) ನೀರು ಸಂಸ್ಕರಣಾ ಘಟಕಗಳು ಹಾಗೂ 40 ಕೊಳವೆಬಾವಿಗಳು ಮತ್ತು ನಗರ ವ್ಯಾಪ್ತಿಯಲ್ಲಿ ಸುಮಾರು 10 ಕಿಲೋಮೀಟರ್ ಗಳಷ್ಟು ಪೈಪ್ ಲೈನ್ ವ್ಯವಸ್ಥೆ ಕಲ್ಪಿಸಲು ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ನಗರ ಸಭೆ ಅಧ್ಯಕ್ಷೆ ಸಿ.ಎಂ.ಸುಮೀತ್ರಾರಮೇಶ್ ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಸಭೆ ಪೌರಾಯುಕ್ತ ಆರ್.ಶ್ರೀಕಾಂತ್,ನಗರಸಭೆ ಸದಸ್ಯರುಗಳಾದ ಎಂ.ವಿ.ವೆಂಕಟಸ್ವಾಮಿ , ಎಸ್.ರಾಘವೇಂದ್ರ (ರಘು) , ವಸಂತ ಬಾಲಕೃಷ್ಣ ,ಎಲ್. ಅನಿಲ್ ಕುಮಾರ್ , ಕೆ.ಸುರೇಶ್ , ನಗರಸಭೆ ಪಿ.ಮುರಳಿ , ಮುಖಂಡರುಗಳಾದ ಎಸ್.ಎಂ.ರಮೇಶ್ , ನಂದ(ಕಿಶನ್) , ಗುತ್ತಿಗೆದಾರರಾದ ವೀರಭದ್ರಪ್ಪ, ಸೇರಿದಂತೆ ಮುಂತಾದವರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments