Sunday, August 14, 2022
spot_img
HomeBangaloreಶ್ರೀ ಅಣ್ಣಮ್ಮ ದೇವಿ ಸಲಕ ಸಿದ್ಧಿ ಕರುಣಿಸಲಿ

ಶ್ರೀ ಅಣ್ಣಮ್ಮ ದೇವಿ ಸಲಕ ಸಿದ್ಧಿ ಕರುಣಿಸಲಿ

ದೇವನಹಳ್ಳಿ: ಬೇಡುವವರ ಕಷ್ಟಗಳಿಗೆ ಸದಾ ಆಶೀರ್ವಾದ ನೀಡುವ ಹಾಗು ಭಕ್ತಾಧಿಗಳ ಇಷ್ಟಾರ್ಥಗಳನ್ನು ಈಡೇರಿಸುವ ಶ್ರೀ ಅಣ್ಣಮ್ಮ ತಾಯಿ ಸಲಕ ಸಿದ್ಧಿ ಕರುಣಿಸಲಿ ಎಂದು ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದ್ಯಾವರಹಳ್ಳಿ ವಿ.ಶಾಂತಕುಮಾರ್ ತಿಳಿಸಿದರು.

ದೇವನಹಳ್ಳಿ ಪಟ್ಟಣದ 6ನೇ ವಾರ್ಡಿನ ಪಾರ್ಕ್ರಸ್ತೆಯಲ್ಲಿ 11ನೇ ವರ್ಷದ ಶ್ರೀ ಅಣ್ಣಮ್ಮದೇವಿ ಜಾತ್ರ ಮಹೋತ್ಸವ ಅಂಗವಾಗಿ ಶ್ರೀ ಅಣ್ಣಮ್ಮದೇವಿಗೆ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಪ್ರತಿ ವರ್ಷದಂತೆ ಈ ವರ್ಷವೂ ಸಹ ಅಣ್ಣಮ್ಮ ತಾಯಿಯನ್ನು ಪಟ್ಟಣಕ್ಕೆ ತರಿಸಿ, ಪಟ್ಟಣದ ವಿವಿಧ ದೇವರುಗಳನ್ನು ಪ್ರತಿಷ್ಠಾಪಿಸುವುದರ ಮೂಲಕ ದೇವನಹಳ್ಳಿ ಪಟ್ಟಣದ ಹಾಗೂ ತಾಲೂಕಿನ ಜನತೆ ದೇವರುಗಳಿಗೆ ವಿಶೇಷ ಪೂಜೆಗಳನ್ನು ಸಲ್ಲಿಸುವ ಪುಣ್ಯದ ಕರ‍್ಯವಾಗುತ್ತಿದೆ. 3ದಿನದ ಜಾತ್ರಾ ಮಹೋತ್ಸವದಲ್ಲಿ ದೇವಿಗೆ ವಿವಿಧ ಬಗೆಯ ಅಲಂಕಾರದೊAದಿಗೆ ವಿಶೇಷ ಪೂಜೆಗಳನ್ನು ನೆರವೇರಿಸುವುದರ ಮೂಲಕ ಬರುವ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳನ್ನು ಅಣ್ಣಮ್ಮದೇವಿ ಯುವಕರ ಬಳಗ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.

ಪೂಜಾಕೈಂಕರ್ಯಗಳಲ್ಲಿ ಭಾಗವಹಿಸಿದ ಬ್ಲಾಕ್ ಕಾಂಗ್ರೆಸ್ ನ ಉಪಾಧ್ಯಕ್ಷ ದ್ಯಾವರಹಳ್ಳಿ ಶಾಂತಕುಮಾರ್ ಅವರನ್ನು ಅಣ್ಣಮ್ಮದೇವಿ ಯುವಕರ ಬಳಗ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಕುಂದಾಣ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ. ನಾರಾಯಣಸ್ವಾಮಿ, ಉಪಾಧ್ಯಕ್ಷೆ ವಿನಾ ರಾಣಿ ನವೀನ್ ಕುಮಾರ್, ಯುವ ಕಾಂಗ್ರೆಸ್ ಮುಖಂಡ ಎಸ್‌ಆರ್ ತ್ಯಾಗರಾಜ್, ಸೊಪುö್ಪ ಮುನಿರಾಜು, ಜಗದೀಶ್, ನಾಗೇಶ್, ಹೇಮಂತ್, ದರ್ಶನ್, ಮೈಕ್ ಸೆಟ್ ಬಾಬಣ್ಣ, ಅಣ್ಣಮ್ಮತಾಯಿ ಸೇವಾ ಸಮಿತಿ ಸದಸ್ಯರು, ಭಕ್ತಾದಿಗಳು, ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments