Tuesday, September 26, 2023
spot_img
HomeBangaloreಕ್ಷುಲ್ಲಕ ಕಾರಣಕ್ಕೆ ಸಧನ ಸಮಯವನ್ನು ಹಾಳುಮಾಡುತ್ತಿರುವ ಕಾಂಗ್ರೇಸ್

ಕ್ಷುಲ್ಲಕ ಕಾರಣಕ್ಕೆ ಸಧನ ಸಮಯವನ್ನು ಹಾಳುಮಾಡುತ್ತಿರುವ ಕಾಂಗ್ರೇಸ್

ದೇವನಹಳ್ಳಿ: ಸದನದಲ್ಲಿ ಜನಪರ ಕೆಲಸಗಳ ಬಗ್ಗೆ ಕಾಳಜಿವಹಿಸಿ ಮಾತನಾಡುವುದನ್ನು ಬಿಟ್ಟು ಸಣ್ಣ ವಿಷಯವನ್ನು ದೊಡ್ಡದುಮಾಡಿ ಸದನದ ಸಮಯವನ್ನು ಹಾಳುಮಾಡುತ್ತಿರುವ ಕಾಂಗ್ರೇಸ್ ಪಕ್ಷ ಶಿವಮೊಗ್ಗದಲ್ಲಿ ಹರ್ಷನ ಕೊಲೆಯ ಬಗ್ಗೆ ಗಮನ ಸೆಳೆಯುವುದನ್ನು ಬಿಟ್ಟು ಸದನದಲ್ಲಿ ಅಹೋರಾತ್ರಿ ಧರಣಿಮಾಡುವುದು ಸರಿಯಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ವಿ.ನಾರಾಯಣಸ್ವಾಮಿ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿ ಮುಂದೆ ದೇವನಹಳ್ಳಿ ವಿಭಾನಸಭಾ ಕ್ಷೇತ್ರ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಸಾರ್ವಜನಿಕರ ಹಣದಿಂದ ಕೋಟ್ಯಾಂತ ರೂಪಾಯಿ ಖರ್ಚುಮಾಡಿ ಸದನ ನಡೆಯುತ್ತದೆ ಸಾರ್ವಜನಿಕರ ಹಣವನ್ನು ಪೋಲುಮಾಡುತ್ತಿದ್ದಾರೆ. ಕಾಂಗ್ರೇಸ್ ಹಿಬ್ಬಗೆಯ ನೀತಿಯನ್ನು, ಸಮಾಜವನ್ನು ಒಡೆದು ಹಾಳುವ ನೀತಿಯನ್ನು ಖಂಡಿಸಿ ಹಾಗು ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾಗಿದ್ದು ಅವರ ಕುಟುಂಬಕ್ಕೆ ನ್ಯಾಯದೊರಕಿಸಬೇಕು. ಸಮಾಜಘಾತುಕ ಸಂಘಟನೆಗಳನ್ನು ಮಟ್ಟಹಾಕಿದಾಗ ಮಾತ್ರ ರಾಜ್ಯ ರಾಮರಾಜ್ಯವಾಗಲು ಸಾಧ್ಯ, ತಹಶಿಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿನ್ನು ಸಲ್ಲಿಸುತ್ತಿದ್ದೇವೆ ಎಂದರು.

ಬಿಜೆಪಿ ರಾಜ್ಯ ಎಸ್ಸಿ ಮೋರ್ಚ ಖಜಾಂಚಿ ಎ.ಕೆ.ಪಿ.ನಾಗೇಶ್ ಮಾತನಾಡಿ ಸದನದ ಸಮಯವನ್ನು ಹಾಳುಮಾಡುತ್ತಿರುವ ಕಾಂಗ್ರೇಸ್ ಪಕ್ಷದ ಶಾಸಕರ ಸ್ಥಾನವನ್ನು ರದ್ದುಮಾಡಬೇಕು. ಸಾರ್ವಜನಿಕರ ಹಣವನ್ನು ವ್ಯರ್ಥಮಾಡುತ್ತಿರುವುದನ್ನು ನಿಲ್ಲಿಸಿ ಸದನದಲ್ಲಿ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಚರ್ಚೆಮಾಡಬೇಕು ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಸುಂದರೇಶ್ ಮಾತನಾಡಿ ಹಿಂದುಪರ ಕೆಲಸಮಾಡುತ್ತಿದ್ದ ಹರ್ಷನನ್ನು ಕೊಲೆಮಾಡಿದವರನ್ನು ಗಲ್ಲಿಗೇರಿಸಬೇಕು. ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು. ಹರ್ಷನನ್ನು ಕೊಲೆಗೈದ ಸಂಘಟನೆಗಳ ಪರವಾಗಿ ನಿಂತಿರುವ ಸಂಘಟನೆಗಳನ್ನು ರದ್ದುಮಾಡಬೇಕು. ಸದನದಲ್ಲಿ ಕಾಂಗ್ರೇಸ್ ಪಕ್ಷ ವಿಧಾನ ಸಭಾ ಕಲಾಪವನ್ನು ಹಾಳುಮಾಡುತ್ತಿರುವ ಕಾಂಗ್ರೇಸ್ ಪಕ್ಷದ ವಿರುದ್ಧ ಪ್ರತಿಭಟನೆ ಮಾಡಿ ತಹಶಿಲ್ದಾರ್‌ಗೆ ಮನವಿ ಪತ್ರವನ್ನು ಸಲ್ಲಿಸುತ್ತಿದ್ದೇವೆ ಎಂದರು.

ಇದೆ ವೆಳೆ ಬಿಜೆಪಿ ಮುಖಂಡರಾರ ಒಬದೇನಹಳ್ಳಿ ಮುನಿಯಪ್ಪ, ಗುರುಸ್ವಾಮಿ, ನಿಲೇರಿ ಮಂಜುನಾಥ್, ರವಿ, ಗಣೇಶ್, ಕೇಶವ ಸೇರಿದಂತೆ ತಾಲೂಕಿನ ಎಲ್ಲಾ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments