Thursday, March 28, 2024
spot_img
HomeMandyaಕಿಕ್ಕೇರಿ ಜನ ಸಂಪರ್ಕ ಕಾರ್ಯಕ್ರಮಕ್ಕೆ ವ್ಯಾಪಕ ಬೆಂಬಲ: ಸಚಿವ ಡಾ.ನಾರಾಯಣಗೌಡ ಹತ್ತಾರು ಯೋಜನೆಯ ಹಕ್ಕು ಪತ್ರಗಳನ್ನು...

ಕಿಕ್ಕೇರಿ ಜನ ಸಂಪರ್ಕ ಕಾರ್ಯಕ್ರಮಕ್ಕೆ ವ್ಯಾಪಕ ಬೆಂಬಲ: ಸಚಿವ ಡಾ.ನಾರಾಯಣಗೌಡ ಹತ್ತಾರು ಯೋಜನೆಯ ಹಕ್ಕು ಪತ್ರಗಳನ್ನು ಪಡೆದ ಸಾವಿರಾರು ಫಲಾನುಭವಿಗಳು

ಮಂಡ್ಯ: ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಜನ ಸಂಪರ್ಕ ಸಭೆ ಮತ್ತು ಲೋಕ ಅದಾಲತ್‍ನಲ್ಲಿ ಸ್ಥಳೀಯ ಶಾಸಕರಾದÀ ರೇμÉ್ಮ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ರವರು ಚಾಲನೆ ನೀಡಿದರು.

ಕಿಕ್ಕೇರಿಯಲ್ಲಿ ಹಮ್ಮಿಕೊಂಡಿದ್ದ ಜನ ಸಂಪರ್ಕ ಮತ್ತು ಲೋಕ ಅದಾಲತ್ ಕಾರ್ಯಕ್ರಮಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಬಂದಿದ್ದ ಹಿನ್ನೆಲೆಯಲ್ಲಿ ಹೋಬಳಿಯಾದ್ಯಂತ ಎಲ್ಲಾ ಗ್ರಾಮದಿಂದ ಸಾವಿರಾರು ಜನರು ಆಗಮಿಸಿ ಜನ ಸಂಪರ್ಕ ಸಭೆಯ ಲಾಭ ಪಡೆದುಕೊಂಡರು.

ಕಿಕ್ಕೇರಿ ಹೋಬಳಿ ವ್ಯಾಪ್ತಿಯಲ್ಲಿ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ, ಆಯುμÁ್ಮನ್ ಕಾರ್ಡ್, ಮನಸ್ವಿನಿ ಸೇರಿದಂತೆ ವಿವಿಧ ಯೋಜನೆಗಳ ಸುಮಾರು 2200 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಪಿಂಚಣಿ ಆದೇಶ ಪತ್ರಗಳನ್ನು ಸಚಿವ ಡಾ.ನಾರಾಯಣಗೌಡ ಅವರು ವಿತರಿಸಿದರು. ಇದರ ಜೊತೆಗೆ ವಿವಿಧ ಇಲಾಖೆಗಳಿಂದ ಆಯ್ಕೆಯಾಗಿರುವ ನೂರಾರು ಫಲಾನುಭವಿಗಳಿಗೆ ಟ್ರ್ಯಾಕ್ಟರ್, ಮಿನಿ ಟ್ರ್ಯಾಕ್ಟರ್, ಟಿಲ್ಲರ್, ಸ್ಪಿಂಕ್ಲರ್, ಹಾಲು ಕರೆಯುವ ಯಂತ್ರ ಸೇರಿದಂತೆ ಹಲವು ಉಪಕರಣಗಳನ್ನು ವಿತರಿಸಿದರು.

ಆಶ್ರಯ ಯೋಜನೆಯಲ್ಲಿ ಮನೆಗಳನ್ನು ನಿರ್ಮಿಸಲು 20 ಎಕರೆ ಭೂಮಿ ಮಂಜೂರಾಗಿದ್ದು, ಇನ್ನೂ  29 ಎಕರೆ ಹೆಚ್ಚುವರಿ ಜಮೀನು ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ಜೊತೆಗೆ  ಕಿಕ್ಕೇರಿ ಹೋಬಳಿಯ 54 ಗ್ರಾಮಗಳಲ್ಲಿ 101 ಎಕರೆ ಭೂಮಿಯನ್ನು ಸ್ಮಶಾನಕ್ಕೆ ಮೀಸಲಿಡಲಾಗಿದೆ ಎಂದು ಸಚಿವ ತಿಳಿಸಿದರು.

ಸರ್ಕಾರದ ಯೋಜನೆಗಳನ್ನು ಮುಟ್ಟಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ವವಾದದ್ದು. ಹಿರಿಯ ಹಂತದ ಅಧಿಕಾರಿಗಳು ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಕೆಳಮಟ್ಟದ ಅಧಿಕಾರಿಗಳೇ ಕೈಗೆ ಸಿಗದ ರೀತಿ ಓಡಾಡುತ್ತಿದ್ದಾರೆ. ಅಂತಹ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.
ಮಾರ್ಚ್ 5 ರಂದು ಕೆ ಆರ್ ಪೇಟೆಯಲ್ಲಿ ಬೃಹತ್ ಆರೋಗ್ಯ ಮೇಳ ಮತ್ತು ಮಾರ್ಚ್ 19 ರಂದು ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಕೆ ಆರ್ ಪೇಟೆ ತಾಲ್ಲೂಕಿನ ಎಲ್ಲಾ ಜನರು ಇದರ ಸದುಪಯೋಗ ಪಡೆದುಕೊಳ್ಳ ಬೇಕೆಂದು ತಿಳಿಸಿದರು.

ಜನ ಸಂಪರ್ಕ ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್ ಅಶ್ವತಿ, ಸಿಇಒ ಜಿ.ಆರ್. ಜೆ ದಿವ್ಯಾ ಪ್ರಭು, ಎಡಿಸಿ ವಿ. ಆರ್ ಶೈಲಜಾ, ಉಪ ವಿಭಾಗಾಧಿಕಾರಿ ಶಿವಾನಂದ ಮೂರ್ತಿ, ತಹಶಿಲ್ದಾರ್ ರೂಪ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಕಿಕ್ಕೇರಿ ಪ್ರಭಾಕರ್, ಕಿಕ್ಕೇರಿ ತಮ್ಮಣ್ಣ ಸೇರಿದಂತೆ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments