Tuesday, September 26, 2023
spot_img
HomeChikballapurBagepalliಪಂಜಾಬ್ ಸರ್ಕಾರದ ಭದ್ರತಾ ವೈಪಲ್ಯವನ್ನು ಖಂಡಿಸಿ ಬಿಜೆಪಿ ಪಕ್ಷದಿಂದ ಕಪ್ಪುಪಟ್ಟಿ ಪ್ರದರ್ಶನ

ಪಂಜಾಬ್ ಸರ್ಕಾರದ ಭದ್ರತಾ ವೈಪಲ್ಯವನ್ನು ಖಂಡಿಸಿ ಬಿಜೆಪಿ ಪಕ್ಷದಿಂದ ಕಪ್ಪುಪಟ್ಟಿ ಪ್ರದರ್ಶನ

ಬಾಗೇಪಲ್ಲಿ: ರಕ್ಷಣಾ ವೈಪಲ್ಯವನ್ನು ಎಸಗಿದ ಪಂಜಾಬ್ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಪಟ್ಟಣದ ಅಂಬೇಡ್ಕರ್ ಪುತ್ಥಳಿಯ ಮುಂದೆ ಬಿಜೆಪಿ ಮಂಡಲಾಧ್ಯಕ್ಷ ಆರ್.ಪ್ರತಾಪ್ ನೇತೃತ್ವದಲ್ಲಿ  ಮೌನ ಪ್ರತಿಭಟನೆಯನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಮುಖಂಡ ಹಾಗೂ ಮಂಡಲಾಧ್ಯಕ್ಷ ಆರ್. ಪ್ರತಾಪ್ ಮಾತನಾಡುತ್ತಾ, ಈ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರಮೋದಿ ರವರಿಗೆ ರಕ್ಷಣೆ ಕೊಡುವಲ್ಲಿ ಪಂಜಾಬ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ವಿಫಲವಾಗಿರುವುದು ಒಂದು ಕಡೆಯಾದರೆ ಅದನ್ನು ಬಿಂಬಿಸುತ್ತಿರುವ ರೀತಿ ಬೇರೆ. ಹಾಗಾಗಿ ಪಂಜಾಬ್ ರಾಜ್ಯ ಸರ್ಕಾರವನ್ನು ಕಿತ್ತೊಗೆಯುಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಎಸ್.ಟಿ. ಮೋರ್ಚಾ ಅಧ್ಯಕ್ಷ ಹಾಗೂ ಕೆ.ಡಿ.ಪಿ. ಸದಸ್ಯ ವೆಂಕಟೇಶ್ ಮಾತನಾಡುತ್ತಾ, ಪ್ರಧಾನ ಮಂತ್ರಿಗಳ ವಿಚಾರದಲ್ಲಿ ಆಗಿರುವ ಭದ್ರತಾ ವೈಪಲ್ಯವನ್ನು ಖಂಡಿಸಿ  ಎಸ್.ಸಿ. ಬಿಜೆಪಿ ಮಾರ್ಚಾದಿಂದ ಮೌನ ಪ್ರತಿಭಟನೆ ಮಾಡಲಾಗುತ್ತಿದ್ದು,

ನಮ್ಮ ದೇಶದಲ್ಲಿ ವಿವಿಧ ರಾಜ್ಯಗಳು ವಿವಿಧ ಸಂಸ್ಕೃತಿಗಳು, ವಿಭಿನ್ನವಾದಂತಹ ಜನಜೀವನವಿದ್ದರೂ, ವಿಭಿನತೆಯಲ್ಲಿ ಏಕತೆಯನ್ನು ಹೊಂದಿರುವ ಹಾಗೂ ಅಖಂಡತೆಯನ್ನು ಹೊಂದಿರುವ ರಾಷ್ಟ್ರ ನಮ್ಮದು, ಯಾವುದೇ

ಪಕ್ಷದಿಂದ ಈ ದೇಶದ ಪ್ರಧಾನ ಮಂತ್ರಿಗಳ ಸ್ಥಾನಕ್ಕೆ ಹೋದರು ಅವರು ಇಡೀ ದೇಶಕ್ಕೆ ಪ್ರಧಾನ ಮಂತ್ರಿಗಳು, ಹಾಗಾಗಿ ಈ ದೇಶದ ಯಾರೇ ವ್ಯಕ್ತಿಯಾಗಿರಲಿ ಯಾವುದೇ ಪಕ್ಷವಾಗಿರಲಿ, ಈ ದೇಶದ ಪ್ರಧಾನಮಂತ್ರಿಗೆ ಗೌರವ ನೀಡುವುದು ಆದ್ಯ ಕರ್ತವ್ಯ ಎಂದರು.

ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಭೆಯ ಸದಸ್ಯೆ ನಿರ್ಮಲಮ್ಮ, ತಾಲ್ಲೂಕು ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಬಿ.ಎ. ಬಾಬಾಜಾನ್, ಮಹಿಳಾ ಮುಖಂಡರಾದ ರೂಪಾ,  ಮಂಜುಳ, ಗುಳೂರು ಯುವ ಮುಖಂಡ ರಂಗಾರೆಡ್ಡಿ, ಮಲ್ಲಿಕಾರ್ಜುನರೆಡ್ಡಿ, ಪ್ರಭಾಕರ್ ರೆಡ್ಡಿ, ಮತ್ತಿತರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments