Tuesday, April 16, 2024
spot_img
HomeChikballapurಗುಡಿಬಂಡೆಯಲ್ಲಿ ಪ್ರಾಥಮಿಕ ಶಾಲೆಗೆ ಡೆಸ್ಕ್, ಕುರ್ಚಿಗಳ ವಿತರಣೆ ಬೆಂಗಳೂರಿನ ರೈನ್ ಬೋ ಸಂಸ್ಥೆ ಹಾಗೂ ಚಿಕ್ಕಬಳ್ಳಾಪುರದ...

ಗುಡಿಬಂಡೆಯಲ್ಲಿ ಪ್ರಾಥಮಿಕ ಶಾಲೆಗೆ ಡೆಸ್ಕ್, ಕುರ್ಚಿಗಳ ವಿತರಣೆ ಬೆಂಗಳೂರಿನ ರೈನ್ ಬೋ ಸಂಸ್ಥೆ ಹಾಗೂ ಚಿಕ್ಕಬಳ್ಳಾಪುರದ ಹಸಿರು ಸ್ವಯಂ ಸೇವಾ ಸಂಸ್ಥೆಯಿಂದ ವಿತರಣೆ. ಬಡ ಶಾಲೆಗಳ ಉಳಿವಿಗೆ ಇನ್ನಷ್ಟು ಸಹಕಾರ : ಸುರೇಶ್ ಬಾಬು

ಗುಡಿಬಂಡೆ: ನೆಲದ ಮೇಲೆ ಕುಳಿತು ಪಾಠ ಕೇಳುತ್ತಿದ್ದ ಹಳ್ಳಿಯ ಸರಕಾರಿ  ಪ್ರಾಥಮಿಕ ಶಾಲೆಯ ಮಕ್ಕಳಿಗೆ  ಡೆಸ್ಕ್‌, ಕುರ್ಚಿಗಳನ್ನು ನೀಡಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಗುರಿಯನ್ನು ಹೊಂದಿದ್ದೇವೆ ಎಂದು ರೈನ್ ಬೋ ಸಂಸ್ಥೆ ಮತ್ತು ಹಸಿರು ಸಂಸ್ಥೆಯಿಂದ ಕೊಡುಗೆ ನೀಡಿದರು.

ತಾಲೂಕಿನ ಬಂದಾರ್ಲಹಳ್ಳಿ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ರೈನ್ ಬೋ ಸಂಸ್ಥೆ ಮತ್ತು ಚಿಕ್ಕಬಳ್ಳಾಪುರ ಹಸಿರು ಸ್ವಯಂ ಸೇವಾ ಸಂಸ್ಥೆಯಿಂದ ನಲಿ-ಕಲಿ ಟೇಬಲ್, ಕುರ್ಚಿ ಹಾಗೂ ನಾಲ್ಕು ಡೆಸ್ಕ್ ಗಳನ್ನು ನೀಡಿ ರೈನ್ ಬೋ ಸಂಸ್ಥೆಯ ಸುರೇಶ್ ಬಾಬು  ಮಾತನಾಡಿದರು.

ಸರಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವ ಮಕ್ಕಳಲ್ಲಿ ಬಹುತೇಕರು ಬಡ ಕುಟುಂಬಗಳಿಂದ ಬಂದವರೇ ಆಗಿರುತ್ತಾರೆ. ಅವರಿಗೆ ಕುಳಿತುಕೊಳ್ಳಲು ಹಾಗೂ ಬರವಣಿಗೆಗೆ ನೆರವಾಗಲು ಡೆಸ್ಕ್‌ಗಳು ಇಲ್ಲವಾಗಿದೆ. ಹೀಗಾಗಿ, ಮಕ್ಕಳ ಓದುವಿಕೆಗೆ ನೆರವಾಗಲಿ ಎನ್ನುವ ಏಕೈಕ ಕಾರಣಕ್ಕೆ ಡೆಸ್ಕ್‌ಗಳನ್ನು ವಿತರಣೆ ಮಾಡಲಾಗಿದೆ. ಮುಂದೆಯೂ ಇನ್ನಷ್ಟು ಶಾಲೆಗಳಿಗೆ ನೆರವಾಗುವ ಯೋಚನೆಯನ್ನು ನಮ್ಮ ಸಂಸ್ಥೆಯ ವತಿಯಿಂದ ಮಾಡುತ್ತೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಾಜಿ ಮಾತನಾಡಿ, ಗಡಿ ತಾಲೂಕಿನ ಪ್ರಾಥಮಿಕ ಶಾಲೆಯನ್ನು ಗುರಿತಿಸಿ  ಪೀಠೋಪಕರಣ ನೀಡುವ ಮೂಲಕ ಮಕ್ಕಳ ಮಾನಸಿಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿರುವುದು ಹಾಗೂ ಸರಕಾರಿ ಶಾಲೆಗಳನ್ನು ಬಲಪಡಿಸಿ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಶಾಲೆಗೆ ಪೀಠೋಪಕರಣಗಳನ್ನು ನೀಡಿರುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ  ಬೆಂಗಳೂರಿನ ರೈನ್ ಬೋ ಸಂಸ್ಥೆಯ  ರಾಘವೇಂದ್ರ, ಹಸಿರು ಸ್ವಯಂ ಸೇವಾ ಸಂಸ್ಥೆಯ ಪ್ರದೀಪ್, ಶಿಕ್ಷಣ ಸಂಯೋಜಕ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಶ್ರೀರಾಮಪ್ಪ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಖಜಾಂಚಿ ಶ್ವೇತಾ, ಸುಮಿತ್ರ, ಸಂಘದ ಪದಾಧಿಕಾರಿಗಳಾದ ಶ್ರೀರಾಮರೆಡ್ಡಿ, ಗೌರವಾಧ್ಯಕ್ಷ ಕೃಷ್ಣಪ್ಪ, ಜನಪದ ರಾಜಪ್ಪ,  ಎಸ್ ಡಿ ಎಂಸಿ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ಬಿ.ಜಿ.ನರಸಿಂಹಮೂರ್ತಿ ಮತ್ತು ಶಾಲೆಯ ಮುಖ್ಯ ಶಿಕ್ಷಕಿ ಎನ್.ಲಕ್ಷ್ಮಿದೇವಮ್ಮ, ಅತಿಥಿ ಶಿಕ್ಷಕಿ ನಾಗಮಣಿ ಸೇರಿದಂತೆ ಮುಂತಾದವರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments