Sunday, May 5, 2024
spot_img
HomeTumkurಸಿದ್ಧಗಂಗಾ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆದ ಹಾರ್ಟ್ ವಾಲ್ವ್ ರೀಪ್ಲೇಸ್ಮೆಂಟ್ ಸರ್ಜರಿ

ಸಿದ್ಧಗಂಗಾ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆದ ಹಾರ್ಟ್ ವಾಲ್ವ್ ರೀಪ್ಲೇಸ್ಮೆಂಟ್ ಸರ್ಜರಿ

ತುಮಕೂರು: ರಕ್ತ ಸಂಚಲನೆಗೆ ಸಹಾಯವಾಗುವ ಎದೆಯ ಕವಾಟ(ಹರ‍್ಟ್ ವಾಲ್ವ್) ಸರಿಯಾಗಿ ತೆರೆದುಕೊಳ್ಳದೆ ತೀವ್ರ ಎದೆನೋವು,ಉಬ್ಬಸ,ಸುಸ್ತು ಹಾಗೂ ತಲೆಸುತ್ತಿನಿಂದ ಬಳಲುತ್ತಿದ್ದ ಪಾವಗಡ ಮೂಲದ 60 ರ‍್ಷದ ರಂಗಪ್ಪ ಎನ್ನುವವರಿಗೆ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಯಶಸ್ವಿ ತೆರೆದ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ವಾಲ್ವ್ ರೀಪ್ಲೇಸ್ಮೆಂಟ್ ನಡೆಸಲಾಗಿದೆ.

ಈ ಕುರಿತು ಸಿದ್ಧಗಂಗಾ ಆಸ್ಪತ್ರೆಯಲ್ಲಿ ಸಂತಸ ಹಂಚಿಕೊಂಡ ಸಿದ್ಧಗಂಗಾ ಆಸ್ಪತ್ರೆ ನರ‍್ದೇಶಕ ಡಾ.ಎಸ್.ಪರಮೇಶ್ ಈಗಾಗಲೇ ಹೃದ್ರೋಗ ವಿಭಾಗದಲ್ಲಿ ಸಹಸ್ತ್ರಾರು ಜನರಿಗೆ ತಪಾಸಣೆ, ಶಸ್ತ್ರಚಿಕಿತ್ಸೆ ನಡೆಸಿ ಜನರ ವಿಶ್ವಾಸಕ್ಕೆ ಪಾತ್ರವಾಗಿದ್ದ ನಮ್ಮ ಆಸ್ಪತ್ರೆ ಇದೀಗ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಿ ಹೊಸ ಮೈಲಿಗಲ್ಲು ಸಾಧಿಸಿದ್ದು ಹೆಮ್ಮೆಯನಿಸಿದೆ. ಸಿದ್ಧಗಂಗಾ ಶ್ರೀರ‍್ಯರ ಆಶರ‍್ವಾದದ ಫಲವೇ ಈ ಯಶಸ್ಸಿಗೆ ಕಾರಣ ಎಂದರು.

ನಮ್ಮ ಆಸ್ಪತ್ರೆ ಯಶಸ್ವಿ ಕಿಡ್ನಿ ಕಸಿ ನಡೆಸಿ ರಾಜ್ಯದ ಗಮನ ಸೆಳೆದಿತ್ತು. ಇದೀಗ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮೂಲಕ ಮತ್ತೊಮ್ಮೆ ಹೆಗ್ಗುರುತು ಸ್ಥಾಪಿಸಿದೆ.

ರೋಗಿಗೆ ಬಿಪಿ ಹಾಗೂ ವಯೋಸಹಜ ಅಸ್ವಸ್ಥತೆಗಳು ಹೆಚ್ಚಾಗಿದ್ದವು. ತೆರೆದ ಹೃದಯ ಶಸ್ತ್ರಚಿಕಿತ್ಸೆಗಳಲ್ಲಿ 15 ರ‍್ಷಗಳ ಅನುಭವುಳ್ಳ ಕರ‍್ಡೀಯೋಥೊರಾಸಿಕ್ ರ‍್ಜನ್ ಡಾ.ರವಿಚಂದ್ರರವರ ಕರ‍್ಯದಕ್ಷತೆ ಅನುಭವ, ಸಿದ್ಧಗಂಗಾ ಆಸ್ಪತ್ರೆಯ ಹೃದ್ರೋಗ ವಿಭಾಗದ ಎಲ್ಲಾ ವೈದ್ಯಕೀಯ ಸಿಬ್ಬಂಧಿ ನೆರವಿನಿಂದ ಯಶಸ್ವಿಯಾಗಿ ಹೃದಯದ ಕವಾಟ(ವಾಲ್ವ್) ಬದಲಿಸಲಾಗಿದೆ. ರೋಗಿ ಈಗ ಸಂಪರ‍್ಣ ಚೇತರಿಕೆ ಹೊಂದಿದ್ದು ತಮ್ಮ ಮೊದಲಿನ ಜೀವನಕ್ಕೆ ಮರಳಿದ್ದಾರೆ ಎಂದು ಹೃದ್ರೋಗ ತಜ್ಞ ಡಾ.ಭಾನುಪ್ರಕಾಶ್ ಹೆಚ್.ಎಂ ತಿಳಿಸಿದರು.

ಡಾ.ರವಿಚಂದ್ರ ಮಾತನಾಡಿ ತೆರೆದ ಹೃದ್ರೋಗ ಶಸ್ತ್ರಚಿಕಿತ್ಸೆ ನಡೆಸುವುದು ಬಹಳ ಕಠಿಣವಾಗಿತ್ತು. ರೋಗಿಗೆ ಸತತ ಐದು ಗಂಟೆಗಳ ಕಾಲ ರ‍್ಜರಿ ನಡೆಸಲಾಯಿತು. ಬೈಪಾಸ್ ರ‍್ಜರಿ, ವಾಲ್ವ್ ರಿಪೇರ್ ಸೇರಿದಂತೆ ಜನ್ಮದಾತ ಹೃದಯರೋಗ ಸಮಸ್ಯೆಗಳಿಗೂ ನಮ್ಮಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments