Friday, April 26, 2024
spot_img
HomeTumkurನ.೨೫ಕ್ಕೆ ಕನ್ನಡ ಭವನದಲ್ಲಿ ಗ್ರಾಮೀಣ ಕಲಾವಿದರಿಂದ “ಸಂಗಮ” ವಿನೂತನ ನಾಟಕ ಪ್ರಯೋಗ

ನ.೨೫ಕ್ಕೆ ಕನ್ನಡ ಭವನದಲ್ಲಿ ಗ್ರಾಮೀಣ ಕಲಾವಿದರಿಂದ “ಸಂಗಮ” ವಿನೂತನ ನಾಟಕ ಪ್ರಯೋಗ

ತುಮಕೂರು:ಗ್ರಾಮೀಣ ಕ್ರಿಯಾತ್ಮಕ ರಂಗತAಡ(ರಿ)ತುಮಕೂರು ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ವಚನ ಸಾಹಿತ್ಯವನ್ನು ಮೂಲವಾಗಿಸಿಕೊಂಡು ಸಂಗಮ ಎಂಬ ನಾಟಕ ಪ್ರಯೋಗಕ್ಕೆ ಮುಂದಾಗಿದ್ದು, ನವೆಂಬರ್ ೨೫ರ ಶುಕ್ರವಾರ ಸಂಜೆ ೬:೩೦ ಗಂಟೆಗೆ ಅಮಾನಿಕೆರೆ ರಸ್ತೆಯ ಕನ್ನಡಭವನದಲ್ಲಿ ಹೊಸ ರಂಗಪ್ರಯೋಗ ನಡೆಯಲಿದೆ. ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಕಲಾವಿದರು ನಾಟಕವನ್ನು ಪ್ರದರ್ಶಿಸಲಿದ್ದಾರೆ.

ಗ್ರಾಮೀಣ ಭಾಗದಲ್ಲಿ ರಂಗಭೂಮಿ ಕುರಿತ ವಿಚಾರ ಸಂಕಿರಣ, ಕಾರ್ಯಾಗಾರ,ರಂಗ ಪ್ರಾತಕ್ಷಿಕೆಗಳು ಹಾಗು ಹೊಸ ಕಲಾವಿದರಿಗೆ ತರಬೇತಿ ಹೀಗೆ, ರಂಗಭೂಮಿಯ ಉಳಿವಿಗಾಗಿ ನಿರಂತರ ಪ್ರಯತ್ನ ನಡೆಸುತ್ತಿರುವ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಶಿವಕುಮಾರ್ ತಿಮ್ಮಾಲಾಪುರ ಅವರ ನಿರ್ದೇಶನದಲ್ಲಿ,ಕಾಂತರಾಜು ಕೌತುಮಾರನಹಳ್ಳಿ ಅವರ ರಂಗ ವಿನ್ಯಾಸ ಹಾಗೂ ರಂಗರೂಪದಲ್ಲಿ ವಚನ ಸಾಹಿತ್ಯವನ್ನೇ ಕಥಾ ವಸ್ತುವಾಗಿಸಿಕೊಂಡು ಸಿದ್ದಪಡಿಸಿರುವ ಸಂಗಮ ನಾಟಕ ಪ್ರದರ್ಶನಗೊಳ್ಳಲಿದೆ.

ನವೆಂಬರ್ ೨೫ರ ಶುಕ್ರವಾರ ಸಂಜೆ ೬:೩೦ಕ್ಕೆ ಆರಂಭವಾಗುವ ಸಂಗಮ ನಾಟಕ ಪ್ರದರ್ಶನದ ಪ್ರೇಕ್ಷಕ ಗಣ್ಯರಾಗಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹರಿಕಥಾ ವಿದ್ವಾನ್ ಡಾ.ಲಕ್ಷö್ಮಣದಾಸ್,ತುಮಕೂರು ವೀರಶೈವ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಟಿ.ಬಿ.ಶೇಖರ್,ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್.ಡಿ.ಎಂ., ಸಾಹಿತಿ ಶ್ರೀಮತಿ ಶೈಲಾ ನಾಗರಾಜು, ಕನ್ನಡ ಪ್ರಾಧ್ಯಾಪಕರಾದ ಡಾ.ಶಿವಣ್ಣ ತಿಮ್ಮಲಾಪುರ, ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಯುವ ಘಟಕದ ಅಧ್ಯಕ್ಷ ಮನೋಹರ್ ಅಬ್ಬಿಗೆರೆ ಅವರುಗಳು ಭಾಗವಹಿಸಲಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿರುವ ಸಂಗಮ ವಿನೂತನ ನಾಟಕದ ಪ್ರಯೋಗಕ್ಕೆ ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಕಲಾವಿದರನ್ನು ಪ್ರೋತ್ಸಾಹಿಸುವಂತೆ ಶಿವಕುಮಾರ್ ತಿಮ್ಮಲಾಪುರ ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments