Friday, April 19, 2024
spot_img
HomeChikballapurBagepalliಬೀದಿ ದೀಪಗಳ ನಿರ್ವಹಣೆಯ ಬಗ್ಗೆ ಪುರಸಭೆ ಅಧಿಕಾರಿಗಳ ಮೇಲೆ ಪುರಸಭೆ ಮಾಜಿ ಅಧ್ಯಕ್ಷ ಬಿ .ಆರ್....

ಬೀದಿ ದೀಪಗಳ ನಿರ್ವಹಣೆಯ ಬಗ್ಗೆ ಪುರಸಭೆ ಅಧಿಕಾರಿಗಳ ಮೇಲೆ ಪುರಸಭೆ ಮಾಜಿ ಅಧ್ಯಕ್ಷ ಬಿ .ಆರ್. ನರಸಿಂಹ ನಾಯ್ಡು ಗರಂ

ಪಾಲಾರ್ ಪತ್ರಿಕೆ | Palar patrike
ಬಾಗೇಪಲ್ಲಿ : ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ದೀಪಗಳ ನಿರ್ವಹಣೆಯನ್ನು ಸರಿಯಾಗಿ ಮಾಡುತ್ತಿಲ್ಲ. ಆದರೆ ಪ್ರತಿ ತಿಂಗಳು ಪುರಸಭೆಯಿಂದ ಬೀದಿ ದೀಪಗಳ ನಿರ್ವಹಣೆಗೆ ಗುತ್ತಿಗೆದಾರ ಒಂದು ಲಕ್ಷ ರೂಪಾಯಿಯನ್ನು ಪಡೆಯುತ್ತಿದ್ದಾನೆ .ಆದರೆ ಬೀದಿ ದೀಪಗಳು ಕೆಟ್ಟ ಹೋದ ಸಂದರ್ಭದಲ್ಲಿ ಅದನ್ನು ಸರಿಪಡಿಸುವಂತೆ ಹಲವಾರು ಬಾರಿ ಗುತ್ತಿಗೆದಾರನಿಗೆ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿರುವುದಿಲ್ಲ ಎಂದು ಪುರಸಭೆಯ ಮಾಜಿ ಅಧ್ಯಕ್ಷರಾದ ಬಿ. ಆರ್ ನರಸಿಂಹ ನಾಯ್ಡು ರವರು ಪುರಸಭೆಯ ಅಧಿಕಾರಿಗಳಿಗೆ ಬೀದಿ ದೀಪಗಳ    ನಿರ್ವಹಣೆ ಕ್ರಮಬದ್ಧವಾಗಿ  ನಿರ್ವಹಿಸುವಂತೆ ಎಚ್ಚರಿಕೆ ನೀಡಿದರು. ಈ ಬಗ್ಗೆ ಅವರು ಮಾತನಾಡಿ, ಗುತ್ತಿಗೆದಾರ ಸರಿಯಾದ ರೀತಿಯಲ್ಲಿ ಬೀದಿ ದೀಪಗಳ ನಿರ್ವಹಣೆ ಮಾಡುವಂತೆ ಸೂಚಿಸಿ, ಇಲ್ಲವಾದಲ್ಲಿ ಗುತ್ತಿಗೆದಾರನಿಗೆ ಪುರಸಭೆ ವತಿಯಿಂದ ಯಾವುದೇ ಬಿಲ್ಲನ್ನು ನೀಡಬೇಡಿ,ಜೊತೆಗೆ  ಪುರಸಭೆಯಲ್ಲಿ ಬೀದಿದೀಪಗಳ ನಿರ್ವಹಣೆಗೆ  ದುಡ್ಡು ಗತಿ ಇಲ್ಲ ಅಂತ ಹೇಳಿಬಿಡಿ, ನಾನೇ ಸ್ವತಃ ಖರ್ಚುನಲ್ಲಿ  ನನ್ನ ವಾರ್ಡಿನಲ್ಲಿ ಬೀದಿ ದೀಪಗಳನ್ನು ಸರಿಪಡಿಸಿಕೊಳ್ಳುತ್ತೆನೆ ಎಂದು ಅಧಿಕಾರಿಗಳ ವಿರುದ್ಧ ಗರಂ ಆದರು. ಈ  ವೇಳೆ ಪುರಸಭೆ ಮುಖ್ಯಾಧಿಕಾರಿ ಮಧುಕರ್ ಮಾತನಾಡಿ ,ತಕ್ಷಣವೇ ವಾರ್ಡ್ ನಲ್ಲಿ ಕೆಟ್ಟು ಹೋದ ಬೀದಿ ದೀಪಗಳನ್ನು ಸರಿಪಡಿಸುವಂತೆ ಗುತ್ತಿಗೆದಾರನಿಗೆ ಸೂಚಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ಸೂರ್ಯನಾರಾಯಣ ರೆಡ್ಡಿ, ಸುಬ್ಬಣ್ಣ, ಸಂದೀಪ್ ನಾಗರೆಡ್ಡಿ, ಕೊತ್ತಪಲ್ಲಿ ನಾರಾಯಣಸ್ವಾಮಿ ,ಲಕ್ಷ್ಮೀಪತಿ ಮತ್ತಿತರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments