Thursday, May 2, 2024
spot_img
HomeTumkurಹಳ್ಳಿಗಾಡಿನ ಜನ ಸಾಂಸ್ಕೃತಿಕ ವಾರಸುದಾರರು

ಹಳ್ಳಿಗಾಡಿನ ಜನ ಸಾಂಸ್ಕೃತಿಕ ವಾರಸುದಾರರು

ಪಾಲಾರ್ ಪತ್ರಿಕೆ | Palar Patrike

ತುಮಕೂರು : ತಾಲೂಕು ವಡ್ಡರಹಳ್ಳಿಯಲ್ಲಿ ಝೆನ್ ಟೀಮ್ ವತಿಯಿಂದ ನಡೆದ ಜನಮನ ಜನಪದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಾಂಶುಪಾಲ ಹೊನ್ನಗಾನಹಳ್ಳಿ ಕರಿಯಣ್ಣ. ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಅಕ್ಕಮ್ಮ ಇತರರಿದ್ದಾರೆ.ಒಂದಲ್ಲಾ ಒಂದು ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಂಡಿರುವ ಹಳ್ಳಿಗಾಡಿನ ಜನ ಸಾಂಸ್ಕೃತಿಕ ವಾರಸುದಾರರು ಎಂದು ತುಮಕೂರು ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಹೊನ್ನಗಾನಹಳ್ಳಿ ಕರಿಯಣ್ಣ ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಝೆನ್ ಟೀಮ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ತುಮಕೂರು ತಾಲೂಕು ಬೆಳಗುಂಬ ಹೋಬಳಿಯ ವಡ್ಡರಹಳ್ಳಿಯಲ್ಲಿ ಆಯೋಜಿಸಿದ್ದ `ಜನಮನ ಜನಪದ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಾದ್ಯಪರಿಕರಗಳು, ಭಜನೆ, ಸೋಬಾನೆಪದಗಳು, ಹೆಜ್ಜೆ ಕುಣಿತ ಹೀಗೆ ಹತ್ತು ಹಲವಾರು ಪ್ರಾಕಾರಗಳಲ್ಲಿ ಪ್ರಾವಿಣ್ಯತೆ ಹೊಂದಿರುವ ಹಳ್ಳಿಗಾಡಿನ ಜನ ತಮ್ಮ ನೆಲದಿಂದಲೇ ನಾಡಿನಾದ್ಯಂತ ಸಾಂಸ್ಕೃತಿಕ ವಾತಾವರಣ ಪಸರಿಸುತ್ತಿದ್ದಾರೆ ಎಂದರು.
ಜಾನಪದ, ಶಾಸ್ತಿçÃಯ, ಬುಡುಕಟ್ಟು ಹೀಗೆ ಎಲ್ಲಾ ಪ್ರಾಕಾರಗಳಲ್ಲೂ ಕಲೆಯನ್ನು ಮೈಗೂಡಿಸಿಕೊಂಡು ಹಬ್ಬ ಹರಿದಿನಗಳು, ಜಾತ್ರೆ ಮುಂತಾದ ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭೆಗಳನ್ನು ಮತ್ತಷ್ಟು ಬೆಳಗುತ್ತಿರುವ ಹಳ್ಳಿಗಾಡಿನ ಜನ ಬೆರಗು ಹುಟ್ಟಿಸುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ಯಾವುದೇ ಕಲಾ ಪ್ರಕಾರಗಳನ್ನು ಶಾಸ್ತಿçÃಯವಾಗಿ ಕಲಿಯದಿದ್ದರೂ ತಮ್ಮ ಪೂರ್ವಿಕರನ್ನು ನೋಡುತ್ತಲೇ ಬಹಳ ವಿಶಿಷ್ಟವಾದ ಕಲೆಯ ಮೂಲಕ ಜನಮನದಲ್ಲಿ ಆಳವಾಗಿ ಬೇರೂರಿದ್ದಾರೆ ಎಂದು ತಿಳಿಸಿದರು.
ನಗರ ಕೇಂದ್ರೀಕೃತ ಕಾರ್ಯಕ್ರಮಗಳನ್ನು ಹಳ್ಳಿ ಕಡೆ ಕೊಂಡೊಯ್ಯುವAತಹ ಕೆಲಸವನ್ನು ಝೆನ್ ಟೀಮ್ ನ ಉಗಮ ಶ್ರೀನಿವಾಸ್ ಮಾಡುತ್ತಿದ್ದಾರೆ ಎಂದ ಅವರು ಆಚಾರ್ಯ ಬಿಎಂ ಶ್ರೀಕಂಠಯ್ಯ ಅವರ ಮಾತೊಂದನ್ನು ಉಲ್ಲೇಖಿಸಿ ಜಾನದಪ ಎಲ್ಲಾ ಸಾಹಿತ್ಯಗಳ ತಾಯಿ ಬೇರು ಎಂದರು.
ಜನಪದದ ಬೇರಿನಿಂದಲೇ ಇಷ್ಟೊಂದು ಮಂದಿ ಕಲಾವಿದರು, ಸಾಹಿತಿಗಳು ಇರುವುದಕ್ಕೆ ಸಾಧ್ಯ ಎಂದ ಅವರು ಈ ನಾಡಿ ಮಿಡಿತ ಅರಿತಿದ್ದರಿಂದಲೇ ಝೆನ್ ಟೀಮ್‌ನ ಉಗಮ ಶ್ರೀನಿವಾಸ್ ಹಳ್ಳಿ ಕಡೆಗೂ ಮುಖ ಮಾಡಿದ್ದಾರೆ ಎಂದರು.
ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಅಕ್ಕಮ್ಮ ಮಾತನಾಡಿ ನೆಲ ಮೂಲ ಸಂಸ್ಕೃತಿಯ ಜೀವನಾಡಿ ಹಳ್ಳಿಗಳು. ಇಂತಹ ಹಳ್ಳಿಯಲ್ಲಿ ಝೆನ್ ಟೀಮ್‌ನ ಉಗಮ ಶ್ರೀನಿವಾಸ್ ಹೊಸ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ನಮ್ಮ ಹಳ್ಳಿಗಾಡಿನ ಸಾಂಸ್ಕೃತಿಕ ಕಲಾಪ್ರಕಾರಗಳನ್ನು ಮುಂದಿನ ತಲೆಮಾರಿಗೂ ತಲುಪಿಸುವ ದೊಡ್ಡ ಜವಾಬ್ದಾರಿ ಇದ್ದು ಈ ಹೊಣೆಯನ್ನು ಉಗಮ ಶ್ರೀನಿವಾಸ್ ಹೊರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಆರ್.ವಿ. ಪುಟ್ಟಕಾಮಣ್ಣ, ಸೋಮಶೇಖರ ಪಡುಕರೆ, ಉಗಮ ಶ್ರೀನಿವಾಸ್, ನರಸಿಂಹಮೂರ್ತಪ್ಪ, ನಾಗರಾಜು, ಚಿಕ್ಕಣ್ಣ ಉಪಸ್ಥಿತರಿದ್ದರು. ಬಳಿಕ ೩ ಗಂಟೆಗಳ ಕಾಲ ತತ್ವಪದ, ಸೋಬಾನೆ ಪದ, ಭಜನೆ, ರಂಗಗೀತೆ ಕಾರ್ಯಕ್ರಮ ನಡೆಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments