Thursday, May 2, 2024
spot_img
HomeTumkurಮತದಾನದ ಮಹತ್ವದ ಬಗ್ಗೆ ಜಾಗೃತಿ ಅಗತ್ಯ:ಡಾ.ಕೆ.ವಿದ್ಯಾಕುಮಾರಿ

ಮತದಾನದ ಮಹತ್ವದ ಬಗ್ಗೆ ಜಾಗೃತಿ ಅಗತ್ಯ:ಡಾ.ಕೆ.ವಿದ್ಯಾಕುಮಾರಿ

ಪಾಲಾರ್ ಪತ್ರಿಕೆ Palar Patrike

ತುಮಕೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು. ಈ ನಿಟ್ಟಿನಲ್ಲಿ ವಿದ್ಯರ‍್ಥಿಗಳು ಹಾಗೂ ಯುವಜನತೆ ಮತದಾನದ ಮಹತ್ವದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕರ‍್ಯನರ‍್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ. ಕೆ.ವಿದ್ಯಾಕುಮಾರಿ ಅವರು ತಿಳಿಸಿದ್ದಾರೆ.
ತುಮಕೂರು ನಗರದ ಎಂಪ್ರೆಸ್ ಬಾಲಕಿಯರ ಪದವಿ ಪರ‍್ವ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸ್ವಿಪ್ ಸಮಿತಿ, ಪದವಿ ಪರ‍್ವ ಶಿಕ್ಷಣ ಇಲಾಖೆ, ತುಮಕೂರು ಇವರುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿವಿಧ ಚಟುವಟಿಕೆಗಳ ಸ್ರ‍್ಧಾ ಕರ‍್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚುನಾವಣೆಗಳು ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಗಲ್ಲು. ಪಾರರ‍್ಶಕ ಮತ್ತು ನರ‍್ಭೀತ ಚುನಾವಣೆಯಲ್ಲಿ ವಿದ್ಯರ‍್ಥಿಗಳು ಹಾಗೂ ಯುವ ಜನರ ಪಾತ್ರ ಅಪಾರವಾದುದು. ನಮ್ಮ ಯುವ ಸಮೂಹ, ಮತದಾರರ ಜಾಗೃತಿ ಸಂಘಗಳ ವಿದ್ಯರ‍್ಥಿಗಳು ಚುನಾವಣಾ ರಾಯಭಾರಿಗಳಂತೆ ಕೆಲಸ ನರ‍್ವಹಿಸಬೇಕಿದೆ. ನಮ್ಮ ವಿದ್ಯರ‍್ಥಿಗಳು ಚುನಾವಣೆ, ಮತದಾನದ ಬಗ್ಗೆ ತಮ್ಮ ಪೋಷಕರಿಗೆ, ಸುತ್ತಮುತ್ತಲಿನ ಜನರಿಗೆ ಅರಿವು ಮೂಡಿಸುವ ಮೂಲಕ ಗರಿಷ್ಠ ಪ್ರಮಾಣದ ಮತದಾನಕ್ಕೆ ಶ್ರಮಿಸುವಂತೆ ಡಾ.ಕೆ.ವಿದ್ಯಾಕುಮಾರಿ ಅವರು ಕರೆ ನೀಡಿದರು.
ಚುನಾವಣೆ ಹಾಗೂ ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕಿದೆ. ಮತದಾರರ ಪಟ್ಟಿಯಲ್ಲಿ ತಮ್ಮ ತಮ್ಮ ಹೆಸರು ಇರುವುದನ್ನು ಜನತೆ ಮೊದಲು ಖಚಿತ ಪಡಿಸಿಕೊಳ್ಳಬೇಕು. ಒಂದು ವೇಳೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸದೇ ಇದ್ದಲ್ಲಿ ಹತ್ತಿರದ ಮತಗಟ್ಟೆ ಕೇಂದ್ರಕ್ಕೆ ತೆರಳಿ ಮತಗಟ್ಟೆ ಅಧಿಕಾರಿಯನ್ನು ಸಂರ‍್ಕಿಸಿ ಮೊದಲು ಹೆಸರು ಸೇರಿಸಬೇಕು. ೧೮ ರ‍್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು. ಚುನಾವಣಾ ಆಯೋಗವು ಈ ರ‍್ಷದಿಂದ ಮತದಾರರ ಪಟ್ಟಿಯಲ್ಲಿ ಹೆಸರು ಸರ‍್ಪಡೆಗೊಳಿಸಲು ರ‍್ಷದಲ್ಲಿ ನಾಲ್ಕು ಬಾರಿ ಅವಕಾಶ ಕಲ್ಪಿಸಿದೆ. ಇದನ್ನು ಜಿಲ್ಲೆಯ ಜನತೆ ಸದ್ಬಳಕೆ ಮಾಡಿಕೊಳ್ಳುವಂತೆ ಸಿಇಓ ಅವರು ಮನವಿ ಮಾಡಿದರು.
ಕರ‍್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪದವಿ ಪರ‍್ವ ಶಿಕ್ಷಣ ಇಲಾಖೆ ಉಪ ನರ‍್ದೇಶಕರಾದ ಗಂಗಾಧರ್ ಅವರು, ಭಾರತ ದೇಶವು ಶಾಂತಿಯುತ ದೇಶವಾಗಿದ್ದು, ಇಲ್ಲಿನ ನಾಗರೀಕರು ಇಂದಿಗೂ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಉತ್ತಮ ರ‍್ಕಾರವನ್ನು ಆಯ್ಕೆ ಮಾಡುವುದು ಪ್ರತೀ ನಾಗರೀಕರ ರ‍್ತವ್ಯವಾಗಿದೆ. ಹಾಗಾಗಿ ಎಲ್ಲರೂ ತಪ್ಪದೇ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಮತ್ತು ರ‍್ತವ್ಯವನ್ನು ಚಲಾಯಿಸುವಂತೆ ಸಲಹೆ ನೀಡಿದರು.
ಕರ‍್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಂಪ್ರೆಸ್ ಬಾಲಕಿಯರ ಪದವಿ ಪರ‍್ವ ಕಾಲೇಜು ಪ್ರಾಂಶುಪಾಲರಾದ ಷಣ್ಮುಖ.ಎಸ್ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಗುರುತರವಾದ ಜವಾಬ್ದಾರಿ ನಮ್ಮೆಲ್ಲ ನಾಗರೀಕರ ಮೇಲಿದೆ. ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಿದ್ದೇ ಆದಲ್ಲಿ ಕಲ್ಯಾಣ ಸಮಾಜ ನರ‍್ಮಾಣವಾಗಲಿದೆ ಎಂದು ತಿಳಿಸಿದರು.
ಕರ‍್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಸಹಾಯಕ ನೋಡೆಲ್ ಅಧಿಕಾರಿ ಜಿ.ಆರ್.ಶ್ರೀನಿವಾಸ್, ಚುನಾವಣಾ ಸಾಕ್ಷರತಾ ಕ್ಲಬ್ ನ ಜಿಲ್ಲಾ ಸಂಚಾಲಕರಾದ ಟಿ.ಜೆ.ಜ್ಯೋತಿ ಪ್ರಕಾಶ್, ಐಇಸಿ ಸಂಯೋಜಕ ಟಿ.ಕೆ.ವಿನುತ್, ಉಪನ್ಯಾಸಕರಾದ ಚಿದಾನಂದ್ ಕೆ.ಎಸ್., ಸಿದ್ದಪ್ಪ ಎನ್, ಕುಮಾರಯ್ಯ ಮತ್ತಿತರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments