Friday, April 26, 2024
spot_img
HomeChikballapurಸಾದಲಿ ಕ್ರಾಸ್ ನ ರೈತ ಸಂಪರ್ಕ ಕೇಂದ್ರದಲ್ಲಿ ಯುಪಿಎಸ್ ನ 10 ಬ್ಯಾಟರಿಗಳು ಕಳವು

ಸಾದಲಿ ಕ್ರಾಸ್ ನ ರೈತ ಸಂಪರ್ಕ ಕೇಂದ್ರದಲ್ಲಿ ಯುಪಿಎಸ್ ನ 10 ಬ್ಯಾಟರಿಗಳು ಕಳವು

ಶಿಡ್ಲಘಟ್ಟ: ತಾಲ್ಲೂಕಿನ ಸಾದಲಿ ಕ್ರಾಸ್ ನ ರೈತ ಸಂಪರ್ಕ ಕೇಂದ್ರದಲ್ಲಿ ಯುಪಿಎಸ್ 10 ಬ್ಯಾಟರಿಗಳು ಕಳ್ಳತನವಾಗಿರುವ ಘಟನೆ ಸೋಮವಾರ ತಡರಾತ್ರಿ ದಿಬ್ಬುರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ,

ತಾಲೂಕಿನ ಸಾದಲಿ ಕ್ರಾಸ್ ನಲ್ಲಿರುವ ರೈತರ ಸಂಪರ್ಕ ಕಟ್ಟಡದ ಹಿಂಭಾಗದಲ್ಲಿ ಕಿಟಕಿಯನ್ನು ಮಾರಕ ವಸ್ತುಗಳಿಂದ ಕತ್ತರಿಸಿ ಕೊಠಡಿ ಒಳನುಗ್ಗಿರುವ ಕಳ್ಳರು, ಸುಮಾರು ಹತ್ತು ಯುಪಿಎಸ್ ಬ್ಯಾಟರಿಗಳನ್ನು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಮಂಗಳವಾರ ಬೆಳಗ್ಗೆ ಎಂದಿನAತೆ ಕೃಷಿ ಅಧಿಕಾರಿಗಳು ಬಾಗಿಲು ತೆಗೆದಾಗ ಕಳ್ಳತನವಾಗಿರುವುದು ಗೋಚರವಾಗಿದೆ, ಕಳ್ಳತನವಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದಿಬ್ಬೂರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments