Friday, April 19, 2024
spot_img
HomeChikballapurನಗರಸಭೆ ಅಧ್ಯಕ್ಷೆ ವಿರುದ್ದ ಅವಿಶ್ವಾಸ ಮಂಡಿಸಲು ವಿಶೇಷ ಸಾಮಾನ್ಯ ಸಭೆ ಕರೆಯುವಂತೆ ಮನವಿ

ನಗರಸಭೆ ಅಧ್ಯಕ್ಷೆ ವಿರುದ್ದ ಅವಿಶ್ವಾಸ ಮಂಡಿಸಲು ವಿಶೇಷ ಸಾಮಾನ್ಯ ಸಭೆ ಕರೆಯುವಂತೆ ಮನವಿ

ಶಿಡ್ಲಘಟ್ಟ: ನಗರಸಭೆ ಅಧ್ಯಕ್ಷೆ ಸುಮಿತ್ರರಮೇಶ್ ವಿರುದ್ದ ಅವಿಶ್ವಾಸ ಮಂಡಿಸಲು ನಗರಸಭೆಯ 19 ಮಂದಿ ಸದಸ್ಯರು ಸಹಿ ಹಾಕಿರುವ ಪತ್ರವನ್ನು ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್ ಗೆ ಸಲ್ಲಿಸಿದ್ದಾರೆ.

ನಿಯಮದಂತೆ ವಿಶೇಷ ಸಾಮಾನ್ಯ ಸಭೆ ಕರೆಯುವಂತೆ ಮನವಿ ಮಾಡಿದ್ದಾರೆ.

ಕಾಂಗ್ರೆಸ್ನ 13, ಬಿಎಸ್ಪಿ ಪಕ್ಷದ 2, ಬಿಜೆಪಿ 1 ಹಾಗೂ ಪಕ್ಷೇತರ 3 ಸದಸ್ಯರು ಅಧ್ಯಕ್ಷರ ವಿರುದ್ದ ಅವಿಶ್ವಾಸ ಮಂಡನೆಗೆ ಸಹಿ ಹಾಕಿದ್ದಾರೆ.

ಒಟ್ಟು 31 ಸದಸ್ಯರ ಸಂಖ್ಯಾಬಲವಿರುವ ಇಲ್ಲಿನ ನಗರಸಭೆಯಲ್ಲಿ ಕಾಂಗ್ರೆಸ್ನ 13, ಜೆಡಿಎಸ್ನ 10, ಬಿಜೆಪಿ ಹಾಗೂ ಬಿಎಸ್ಪಿಯ ತಲಾ 2 ಹಾಗೂ ಪಕ್ಷೇತರ 4 ಸದಸ್ಯರಿದ್ದಾರೆ.

ಜೆಡಿಎಸ್ನ 10 ಸದಸ್ಯರಷ್ಟೆ ಇದ್ದರೂ ಕಾಂಗ್ರೆಸ್ನ 1, ಬಿಜೆಪಿಯ 2, ಬಿಎಸ್ಪಿಯ 2 ಹಾಗೂ ಪಕ್ಷೇತರ 4 ಸದಸ್ಯರ ಬೆಂಬಲ ಪಡೆದು ಅಧ್ಯಕ್ಷಗಾದಿಯಲ್ಲಿ ಜೆಡಿಎಸ್ನ ಸುಮಿತ್ರರಮೇಶ್ ಆಸೀನರಾಗಿದ್ದರು.

ಅವಿಶ್ವಾಸಕ್ಕೆ ಕೊಟ್ಟ ಕಾರಣಗಳಿವು

ಪ್ರತಿ ತಿಂಗಳೂ ಸಭೆ ನಡೆಸುತ್ತಿಲ್ಲ,

2020-21ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಅನುದಾನ ಬಿಡುಗಡೆಯಾಗಿ ಕ್ರಿಯಾಯೋಜನೆಗೆ ಡಿಸಿ ಅನುಮೋಧನೆ ನೀಡಿದ್ದರೂ ಬಹುತೇಕ ಕಾಮಗಾರಿಗಳು ಆರಂಭಿಸಿಲ್ಲ.

2021-22ನೇ ಸಾಲಿನ 15 ನೇ ಹಣಕಾಸು ಯೋಜನೆಯಡಿ 180 ಲಕ್ಷ ಬಿಡುಗಡೆಯಾಗಿದ್ದು ಕೌನ್ಸಿಲ್ ಸಭೆ ನಡೆಸಿ ಕ್ರೀಯಾ ಯೋಜನೆ ಸಿದ್ದಪಡಿಸಿಲ್ಲ.

ಎಸ್ಸಿಪಿ, ಎಸ್ಟಿಪಿ ಯೋಜನೆ ಅನುಷ್ಠಾನಗೊಳಿಸಿಲ್ಲ.

ಹಿತ್ತಲಹಳ್ಳಿ ಬಳಿಯ ಕಸ ವಿಲೇವಾರಿ ಘಟಕದಲ್ಲಿ ಲಕ್ಷಾಂತರ ರೂ ವೆಚ್ಚದಲ್ಲಿ ಅಳವಡಿಸಿರುವ ಯಂತ್ರೋಪಕರಣಗಳು ತುಕ್ಕುಹಿಡಿಯುತ್ತಿದ್ದು ಈ ಬಗ್ಗೆ ಯಾವುದೇ ಕ್ರಮ ಜರುಗಿಸಿಲ್ಲ.

ನಗರೋತ್ಥಾನ 3ನೇ ಹಂತದ ಯೋಜನೆಯಲ್ಲಿ ಉಳಿಕೆ ಮೊತ್ತ 1.25 ಕೋಟಿ ಬಾಕಿ ಇದ್ದು ಇದಕ್ಕೆ ಕ್ರಿಯಾಯೋಜನೆ ಸಿದ್ದಪಡಿಸಿಲ್ಲ.

ನಗರಸಭೆ ಕಚೇರಿಗೆ ಅಧ್ಯಕ್ಷರು ನಿತ್ಯವೂ ಬರುವುದಿಲ್ಲ. ಬದಲಿಗೆ ಅಧ್ಯಕ್ಷೆ ಸುಮಿತ್ರ ಅವರ ಪತಿ ರಮೇಶ್ ಅವರು ಆಗಮಿಸಿ ಅಧ್ಯಕ್ಷೆಗೆ ಮೀಸಲಾದ ಸೀಟಿನ ಪಕ್ಕ ಮತ್ತೊಂದು ಚೇರ್ ಹಾಕಿಕೊಂಡು ಅಲ್ಲಿ ಅವರು ಕುಳಿತು ಕಡತಗಳ ವಿಲೇವಾರಿ ಮಾಡಿ ಮಹಿಳಾ ಮೀಸಲು ಹಕ್ಕನ್ನು ದಿಕ್ಕರಿಸುತ್ತಿದ್ದಾರೆ.

ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾನವಾಗಿ ನೋಡದೆ ತನಗೆ ಬೇಕಾದವರಿಗೆ ಮಾತ್ರ ಹೆಚ್ಚು ಅನುದಾನ ನೀಡಿ ಪಕ್ಷಪಾತ ಮಾಡುತ್ತಿದ್ದಾರೆ.

ಹೀಗೆ ಹತ್ತು ಹಲವು ಆರೋಪಗಳನ್ನು ಮಾಡಿ ಅವಿಶ್ವಾಸ ಮಂಡಿಸಲು ಅವಕಾಶ ಕೋರಿ ಪತ್ರ ಬರೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments