Thursday, May 2, 2024
spot_img
HomeTumkurಸಾವಿತ್ರಿ ಬಾಯಿ ಪುಲೆ ರವರ ಹುಟ್ಟು ಹಬ್ಬ ಆಚರಣೆ

ಸಾವಿತ್ರಿ ಬಾಯಿ ಪುಲೆ ರವರ ಹುಟ್ಟು ಹಬ್ಬ ಆಚರಣೆ

ತುಮಕೂರು: ತಾಲ್ಲೂಕು ಹೊಸಹಳ್ಳಿ ಗ್ರಾಮದಲ್ಲಿ ಸಾವಿತ್ರಿ ಬಾಯಿ ಪುಲೆ ರವರ 190ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಲಾಯಿತು. ಸಂಘದ ಎಲ್ಲಾ ಮಹಿಳೆಯರು ಒಗ್ಗಟ್ಟಾಗಿ ಸೇರಿ ಮಾತಾನಾಡಿ ಸಾವಿತ್ರಿ ಬಾಯಿ ಪುಲೆ ರವರು ನಡೆದು ಬಂದ ದಾರಿ ಈ ದೇಶದ ಮನುವಾದಿಗಳು ಅಕ್ಷರದ ಜ್ಞಾನವನ್ನು ಅಕ್ಷರವನ್ನು ಬಿತ್ತಿದ ಪ್ರಪ್ರಥಮ ಶಿಕ್ಷಕಿಯಾದರು. ಅದರ ಜೊತೆಯಲ್ಲಿ ಮನುವಾದಿಗಳು ಸಾವಿತ್ರಿ ಬಾಯಿ ಪುಲೆ ರವರು ನಡೆದು ಹೋಗುವ ದಾರಿಯಲ್ಲಿ ಶಿಕ್ಷಣವನ್ನು ನೀಡುವ ಸಂದರ್ಭದಲ್ಲಿ ಸಗಣಿ ಮ್ತು ಕೆಸರಿನಿಂದ ಹೊಡೆದ ಅಂತಹ ಕಾಲ ಘಟ್ಟದಲಿಲ ಹೆದರದೇ ಶೋಷಿತರಿಗೆ ಅಕ್ಷರದ ಜ್ಞಾನವನ್ನು ನೀಡಿ ಮಹಾಮಾತೆಯಾದರು. ಈ ದೇಶದ ಮೂಲ  ವಾಸಿಗಳಾದ ದಲಿತರು ಎಂದೆAದಿಗೂ ಇವರನ್ನು ಮರೆಯಬಾರದೆಂದು ಹೇಳಿದರು.

ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ರಾಜಣ್ಣಯಲದಬಾಗಿ ರವರು ಮಾತನಾಡಿ, ಸಾವಿತ್ರಿ ಬಾಯಿ ಪುಲೆ ರವರ ಹುಟ್ಟುಹಬ್ವನ್ನು ಪ್ರತಿಯೊಬ್ಬರ ಮನೆಯಲ್ಲಿ ಆಚರಿಸಿ ಅವರಿಗೆ ಗೌರವ ಸಲ್ಲಿಸಬೇಕೆಂದು ಹಾಗೂ ಇಂದಿನ ಕಾಲದಲ್ಲಿ ಮಹಿಳೆಯರು ಅಕ್ಷರದ ಜ್ಞಾನವನ್ನು ಹೊಂದಿದ್ದಾರೆ ಎಂದರೇ ಅದಕ್ಕೆ ಮೂಲ ಕಾರಣ ಸಾವಿತ್ರಿ ಬಾಯಿ ಪುಲೆ ರವರೇ ಕಾರಣವೆಂದು ಹೇಳಿದರು. ಸರ್ಕಾರವು ಸಾವಿತ್ರಿ ಬಾಯಿ ಪುಲೆ ರವರ ಹುಟ್ಟುಹುಬ್ಬವನ್ನು ಸರ್ಕಾರಿ ಕಛೇರಿ  ಹಾಗೂ ಶಾಲೆಗಳಲ್ಲಿ ಕಡ್ಡಾಯವಾಗಿ ಆಚರಿಸಬೇಕೆಂದು ಆದೇಶ ನೀಡಬೇಕು ಎಂದು ಹೇಳಿದರು. ಈ ಕಾರ್ಯಕ್ರಮವನ್ನು ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯದರ್ಶಿಯಾದ ಜಿ.ಎಲ್.ನಟರಾಜ್ ಭಾಗವಹಿಸಿದರು. ಸಾವಿತ್ರ ಬಾಯಿ ಪುಲೆ ಮಹಿಳಾ ಸ್ವ-ಸಹಾಯ ಸಂಘದ ಅಧ್ಯಕ್ಷರಾದ ಶ್ರೀಮತಿ ಮಂಜುಳ ರವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯದರ್ಶಿಯಾದ ಶ್ರೀಮತಿ ಉಷಾರವರು ವಂದನಾರ್ಪಣೆ ಸಲ್ಲಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments