Wednesday, April 24, 2024
spot_img
HomeChikballapurಶಿಡ್ಲಘಟ್ಟ ತಾಲ್ಲೂಕು ಕರ್ನಾಟಕ ಜಾನಪದ ಪರಿಷತ್ತಿನ ನೂತನ ಅಧ್ಯಕ್ಷರಾದ ಎ.ಎಂ.ತ್ಯಾಗರಾಜ ಪದಗ್ರಹಣ

ಶಿಡ್ಲಘಟ್ಟ ತಾಲ್ಲೂಕು ಕರ್ನಾಟಕ ಜಾನಪದ ಪರಿಷತ್ತಿನ ನೂತನ ಅಧ್ಯಕ್ಷರಾದ ಎ.ಎಂ.ತ್ಯಾಗರಾಜ ಪದಗ್ರಹಣ

ಶಿಡ್ಲಘಟ್ಟ: ಶಿಡ್ಲಘಟ್ಟ ತಾಲ್ಲೂಕು ಕರ್ನಾಟಕ ಜಾನಪದ ಪರಿಷತ್ತಿನ ನೂತನ ಅಧ್ಯಕ್ಷರಾದ ಎ.ಎಂ.ತ್ಯಾಗರಾಜ ಪದಗ್ರಹಣ ಕಾರ್ಯಕ್ರಮ ಅಪ್ಪೇಗೌಡನಹಳ್ಳಿ ಗೇಟ್ ಶ್ರೀ ಬಯಲಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿತ್ತು.

ಕರ್ನಾಟಕ ಜಾನಪದ ಪರಿಷತ್ತಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಾನಪದ ಗಾಯಕರಾದ ದೇವರಮಳ್ಳೂರು ಮಹೇಶ್ ಮತ್ತು ಚಿ.ಮು.ಹರೀಶ್ ಜಾನಪದ ಗೀತೆಗಳನ್ನು ಹಾಡಿದರು.

ಪ್ರಾಸ್ತಾವಿಕವಾಗಿ ಮಾತಾಡಿದ ಕಜಾಪ ಜಿಲ್ಲಾ ಗೌರವ ಅಧ್ಯಕ್ಷ ವೈ.ಎಲ್.ಹನುಮಂತ ರಾವ್ ಜಾನಪದ ಕಲೆಗಳಿಗೆ ಮತ್ತು ಸಾಹಿತ್ಯ ಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಅದನ್ನು ಉಳಿಸಿ ಬೆಳಸುವ ಕೆಲಸ ಆಗಬೇಕಿದೆ ಎಂದರು. ಜಿಲ್ಲೆಯ ಎಲ್ಲಾ ಕಲಾವಿದರ ಸಮಗ್ರ ಮಾಹಿತಿಯನ್ನು ಸಂಗ್ರಹಿಸುವ ಕೆಲಸ ಕಜಾಪ ವತಿಯಿಂದ ನಡೆಯಲಿದೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ  ಕಜಾಪ ಜಿಲ್ಲಾಧಕ್ಷೆ  ಉಷಾ ಶ್ರೀನಿವಾಸ್ ಬಾಬು ಮಾತನಾಡಿ ಮನುಷ್ಯ ನಷ್ಟೆ ಪ್ರಾಚೀನವಾದದು ಜನಪದ ಕಲೆಗಳು ಮತ್ತು ಸಾಹಿತ್ಯ , ಪರಿಸರ ವೀಕ್ಷಣೆಯಿಂದ, ಅನುಕರಣೆ ಯಿಂದ ಅಂತದನ್ನು ಒಂದು ಕಡೆ ದಾಖಲಿಸುವ  ಕೆಲಸ ಆಗಬೇಕು.ಮನುಷ್ಯ ಸಹಜ ಗುಣಗಳಿಂದ ಇಂತಹ ಕಲೆಗಳು ಅಸ್ತಿತ್ವಕ್ಕೆ ಬಂದಿದೆ.

ಜಾನಪದ ಕಲಾವಿದರು ಗ್ರಾಮೀಣ ಭಾಗದ ತಾಯಿ ಬೇರುಗಳಿದ್ದಂತೆ. ಜಾನಪದ ಮತ್ತು ಉನ್ನತ ಸಾಂಸ್ಕೃತಿಕ  ಪರಂಪರೆಯನ್ನು ಬಿಂಬಿಸುವ ಜನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳವಾಗಿದೆ ಎಂದರು.

ನೂತನ ತಾಲ್ಲೂಕು ಕಜಾಪ ಅಧ್ಯಕ್ಷ ಎ.ಎಂತ್ಯಾಗಾಜ್ ಮಾತಾಡಿ ಶಿಡ್ಲಘಟ್ಟ ತಾಲೂಕಿನ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು, ಪ್ರತಿಯೊಬ್ಬ ರಲ್ಲಿ ಇರುವ ಕಲೆಯನ್ನು ಹೊರತರುವ ಪ್ರಯತ್ನ ಮಾಡಬೇಕು. ಶಿಡ್ಲಘಟ್ಟ ತಾಲ್ಲೂಕು ಕಜಾಪ ಈ ನಿಟ್ಟಿನಲ್ಲಿ ಎಲ್ಲಾ ಕಲಾವಿದರಿಗೂ ಅವರ ಕಲೆಯನ್ನು ಪ್ರದರ್ಶನ ಮಾಡಲಿಕ್ಕೆ ಅವಕಾಶ ಕಲ್ಪಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಿದೆ ಎಂದರು.

ಕಜಾಪ ಜಿಲ್ಲಾ ಮಟ್ಟದ ಕಾರ್ಯಕ್ರಮ ವನ್ನು ಶಿಡ್ಲಘಟ್ಟ ತಾಲ್ಲೂಕಿಗೆ ನೀಡಬೇಕೆಂದು ಜಿಲ್ಲಾಧ್ಯಕ್ಷರ ಬಳಿ ಮನವಿ ಮಾಡಿದರು.

ಜಿಲ್ಲಾ ಕಜಾಪ ಮತ್ತು ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ನೂತನ ಅಧ್ಯಕ್ಷ ಎ.ಎಂ.ತ್ಯಾಗರಾಜ್ ರವರನ್ನು ಸನ್ಮಾನಿಸಲಾಯಿತು.

ಶಿಡ್ಲಘಟ್ಟ ತಾಲ್ಲೂಕು ಕಜಾಪ ವತಿಯಿಂದ ಹಿರಿಯ ಕಲಾವಿದ ನಾಡೋಜ ಮುನಿವೆಂಕಟಪ್ಪ, ಜಾನಪದ ಗಾಯಕ ಮಹೇಶ್ ಕುಮಾರ್ ಮತ್ತು ಕಲಾವಿದ ರಾಘವಯ್ಯ ರವರನ್ನು ಸನ್ಮಾನಿಸಲಾಯಿತು.

ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ,  ಕಾರ್ಯದರ್ಶಿ ಸತೀಶ್, ಚಿಂತಾಮಣಿ ಕಜಾಪ ಅಧ್ಯಕ್ಷೆ ಲೀಲಾ ಲಕ್ಷ್ಮೀ ನಾರಾಯಣ, ಜಿಲ್ಲಾ ಖಜಾಂಚಿ ಮಂಜುನಾಥ ಗೌಡ, ಮಂಜುಳ ಕಲಾವಿದರಾದ ಲಕ್ಷ್ಮೀ ನಾರಾಯಣ, ಭಕ್ತರಹಳ್ಳಿ ನಾಗೇಶ್, ನಾಮದೇವ್, ಮುನಿಆಂಜಿನಪ್ಪ, ಎಂ.ಎಂ.ಸ್ವಾಮಿ, ರಾಮಾಂಜಿನಪ್ಪ, ವೀರಪ್ಪ ರೋಹಿಣಿಕುಮಾರ್  ಮತ್ತು ತಾಲ್ಲೂಕಿನ ವಿವಿದ ಕಲಾವಿದರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments