Saturday, May 4, 2024
spot_img
HomeChikballapurಭಗವಂತನ ಸಂಕಲ್ಪವಿಲ್ಲದೆ ಹುಲ್ಲು ಕಡ್ಡಿಯೂ ಕದಲಲಾರದು

ಭಗವಂತನ ಸಂಕಲ್ಪವಿಲ್ಲದೆ ಹುಲ್ಲು ಕಡ್ಡಿಯೂ ಕದಲಲಾರದು

ಪಾಲಾರ್ ಪತ್ರಿಕೆ | Palar Patrike
ಮುದ್ದೇನಹಳ್ಳಿ : ಸತ್ಯಸಾಯಿ ಗ್ರಾಮದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ರವರ 97ನೇ ಜನ್ಮದಿನದ ಪ್ರಯುಕ್ತ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ಪುರಸ್ಕಾರ ಸಮಾರಂಭ.

ಎಲ್ಲಿ ಸದಾಚಾರ, ಸತ್ಕರ್ಮಗಳು ಸದಾಕಾಲವೂ ಮಾನವನ ಒಳಿತಿಗಾಗಿ ಎಲ್ಲಿ ನೆರವೇರುತ್ತವೆಯೋ ಅಲ್ಲಿ ಸದಾ ದಿವ್ಯ ಶಕ್ತಿಯ ಪ್ರೇರಣೆ ಇರುತ್ತದೆ. ಪ್ರೇರಣೆಯು ಮಾನವೀಯತೆಗಾಗಿ ಮಿಡಿದಾಗ ಯಶಸ್ಸು ಕಾಣುತ್ತದೆ. ಮಾನವೀಯತೆಗಾಗಿಯೇ ಮಿಡಿದ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ರವರು ಮಾನವತೆಯ ಅಭಿವೃದ್ಧಿಗಾಗಿ ಶ್ರಮಿಸಿದ ಸರ್ವಕಾಲಿಕ ಶಕ್ತಿ. ಅದರ ವಿರಾಟ್ ಸ್ವರೂಪ ಅವರ ಸಮರ್ಥ ಅನುಯಾಯಿಯೂ, ಉತ್ತರಾಧಿಕಾರಿಯೂ ಆದ ಸದ್ಗುರು ಶ್ರೀ ಮಧುಸೂಧನ ಸಾಯಿ ಅವರ ಮೂಲಕ ಮನುಕುಲಕ್ಕೆ   ಸೇವೆಯ ಮೂಲಕ ಸಲ್ಲುತ್ತಿದೆ. ಹೀಗಾಗಿ ಬಾಬಾರವರ ಅದ್ಭುತ ಚೇತನ ಮನುಕುಲದ ದಮನಿ ದಮನಿಗಳಲ್ಲೂ ಉಸಿರಾಡುತ್ತಿದೆ. ಯಾವುದೇ ಸರಕಾರದಿಂದಲೂ ಸಾಧ್ಯವಾಗದ ಅದ್ಭುತ ಕಾರ್ಯ ಬಾಬಾರವರಿಂದ ಸಾಧಿತವಾಗುತ್ತಿದೆ. ಇದು ಮನುಕುಲಕ್ಕೆ ದೊರಕಿದ ಮಹಾಭಾಗ್ಯ. ನಾನು ಕೂಡ ಬಾಬಾ ಅವರ ಅನುಯಾಯಿಯಾಗಿದ್ದು ನನ್ನ ಜೀವನದಲ್ಲೂ ಕೂಡ ಅಂಥದ್ದೇ ಅನೇಕ ಅನುಭವಗಳಾಗಿವೆ. ಇದೆಲ್ಲ ದೈವ ಸಂಕಲ್ಪ. ದೈವ ಸಂಕಲ್ಪವಿಲ್ಲದೆ ಯಾವುದೇ ಕಾರ್ಯವು ನಡೆಯಲಾರದು.

ಮಾನವೀಯತೆಗಾಗಿ ಬಾಬಾ ಅವರು ನೀಡುತ್ತಿರುವ ಉಚಿತ ಉಡುಗೊರೆ ಸರ್ವರಿಗೂ ಸಲ್ಲುತ್ತಿರುವ ಕಾರಣ ಸದ್ಯದಲ್ಲೇ  ಮಾನವ ಕಲ್ಯಾಣವು ಸಾಧಿತವಾಗುವುದರಲ್ಲಿ ಅನುಮಾನವಿಲ್ಲ , ಎಂದು ತೆಲಂಗಾಣ ರಾಜ್ಯದ ರಾಜ್ಯಪಾಲೆ ಮತ್ತು ಪುದುಚೇರಿಯ ಉಪ ರಾಜ್ಯಪಾಲೆಯಾಗಿಯೂ ಸೇವೆ ಸಲ್ಲಿಸುತ್ತಿರುವ  ಡಾಕ್ಟರ್ ತಮಿಳಿಸೈ ಸುಂದರ್ ರಾಜನ್ ತಿಳಿಸಿದರು.


 ಅವರು ತಾಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದ ಶ್ರೀ ಸತ್ಯಸಾಯಿ ಪ್ರೇಮಾಮೃತಂ ಸಭಾಭವನದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ರವರ 97ನೇ ಜನ್ಮದಿನೋತ್ಸವದ ಪ್ರಯುಕ್ತ ಶ್ರೀ ಸತ್ಯಸಾಯಿ ಮಾನವವ ಅಭ್ಯದಯ ವಿಶ್ವವಿದ್ಯಾನಿಲಯವು ಸ್ಥಾಪಿಸಿರುವ ಶ್ರೀ ಸತ್ಯಸಾಯಿ  ಮಾನವ ಅಭ್ಯುದಯ ಪುರಸ್ಕಾರದ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.ಶಿಕ್ಷಣ, ಆರೋಗ್ಯ, ಪರಿಸರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ  ಸರ್ವಧರ್ಮ ಸಮನ್ವಯ ಸಂಗೀತ ಮತ್ತು ಲಲಿತ ಕಲೆ ಹಾಗೂ ಯೋಗ ಮತ್ತು ಕ್ರೀಡಾ ವಿಭಾಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿ ಮನುಕುಲದ ವಿಕಾಸಕ್ಕೆ ಕಾರಣೀಭೂತರಾದ ಮಹನೀಯರನ್ನು ಗುರುತಿಸಿ ಗೌರವಿಸುವ ಪರಿಪಾಠವನ್ನು ಕಳೆದ ಆರು ವರ್ಷಗಳಿಂದ ಸಂಸ್ಥೆಯು ನಡೆಸಿಕೊಂಡು ಬರುತ್ತಿದ್ದು ಅದನ್ನು ಈ ವರ್ಷವೂ ಯಥಾ ಪ್ರಕಾರ ಇದುವೇ ಸಂದರ್ಭದಲ್ಲಿ ನೆರವೇರಿಸಲಾಯಿತು.


ಯಾವುದೇ ಔಪಚಾರಿಕ ಶಿಕ್ಷಣ ಪಡೆಯದಿದ್ದರೂ ಶಿಕ್ಷಣದ ಮಹತ್ವವನ್ನು ಅರಿತು ಶಿಕ್ಷಣ ವಂಚಿತರಿಗೆ ಅದರಲ್ಲೂ ಆದಿವಾಸಿ ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸುತ್ತಾ ತನ್ನ ಜೀವನವನ್ನು ಸವೆಸುತ್ತಿರುವ ಒರಿಸ್ಸಾ ರಾಜ್ಯದ  ಡಾಕ್ಟರ್ ತುಳಸಿ ಮುಂಡ ಅವರಿಗೆ ಶಿಕ್ಷಣ ವಿಭಾಗದ ಪುರಸ್ಕಾರವು ಈ ಸಂದರ್ಭದಲ್ಲಿ ಸಂದಾಯವಾಯಿತು.ಭಾರತದ ಗ್ರಾಮೀಣ ಭಾಗದ ಮಕ್ಕಳ ಪೌಷ್ಟಿಕಾಂಶ ಪರಿಪೂರಕ ಪೌಷ್ಟಿಕಾಂಶ ಆರೋಗ್ಯ, ಸಮುದಾಯಿಕ  ಆರೋಗ್ಯ ಮತ್ತು ಅಭಿವೃದ್ಧಿ ವಿಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಮನುಕುಲಕ್ಕೆ ಅಭೂತಪೂರ್ವ ಸೇವೆ ಸಲ್ಲಿಸುತ್ತಿರುವ ಛತ್ತೀಸ್ಗಡದ ಕೌಶಲ್ಯಾಬಾಯಿಯವರಿಗೆ  ಆರೋಗ್ಯ ವಿಭಾಗದ ಪುರಸ್ಕಾರವು ದೊರೆಯಿತು.ತಮಿಳುನಾಡಿನ ಗ್ರಾಮೀಣ ಭಾಗದಲ್ಲಿ ಪರಿಸರ ಜಾಗೃತಿಯನ್ನು ಮೂಡಿಸುತ್ತಾ, ಸಾವಯವ ಗೊಬ್ಬರ ಮತ್ತು ಸಾವಯವ ಕೃಷಿಗೆ ಆದ್ಯತೆಯನ್ನು ನೀಡಿ ಭಾರತದ ಪಾರಂಪರಿಕ ವ್ಯವಸಾಯ ಪದ್ದತಿಯನ್ನು ಪೋಷಿಸುತ್ತಿರುವ ಶತಾಯುಷಿ  ಆರ್ ರಂಗಮ್ಮಾಲ್ ಪರಿಸರ ವಿಭಾಗದ ಪುರಸ್ಕಾರವನ್ನು ಪಡೆದರು,  ಬಿಹಾರ ರಾಜ್ಯದ ಅಡ್ಡೋಕೇಟ್ ಗೌರಿ ಕುಮಾರಿ ಅವರು, ಪೋಲಿಯೋ ಪೀಡಿತರಿಗಾಗಿನ ಮಾನವೀಯ ನೆರವು, ಸಾಮಾಜಿಕ ನ್ಯಾಯ, ದಲಿತ ಮಹಿಳಾ ಸಬಲೀಕರಣ ಮುಂತಾದ ವಿಚಾರಗಳಿಗಾಗಿ ಮಹಿಳಾ ಮತ್ತು ಶಿಶು ಕಲ್ಯಾಣ ವಿಭಾಗದ ಪುರಸ್ಕಾರವನ್ನು ತನ್ನದಾಗಿಸಿಕೊಂಡರು. ಸರ್ವಧರ್ಮಗಳನ್ನು ಪ್ರೀತಿಸುತ್ತಾ ಅವುಗಳ ಮೌಲ್ಯವನ್ನು  ಯಥಾಪ್ರಕಾರ ಕಾಪಾಡುವಲ್ಲಿ  ತನ್ನನ್ನು ತೊಡಗಿಸಿಕೊಂಡು ಆ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿರುವ ಡಾಕ್ಟರ್ ಬಿರು ಬಾಲ ರಭಾ ಅವರು ಸರ್ವಧರ್ಮ ಸಮನ್ವಯ ಪುರಸ್ಕಾರಕ್ಕೆ ಭಾಜನರಾದರು.


ಏಷ್ಯನ್ ಕ್ರೀಡಾಕೂಟ ಒಲಂಪಿಕ್ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ವಿಜೇತರಾಗುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ವಿಶೇಷ ಚೇತನ ಡಾಕ್ಟರ್ ಮಾಲತಿ ಕೆ ಹೊಳ್ಳ ಯೋಗ ಮತ್ತು ಕ್ರೀಡಾ ವಿಭಾಗದ ಪ್ರಶಸ್ತಿಯನ್ನು ಪಡೆದರು.
ಸಂಗೀತ ಮತ್ತು ಲಲಿತ ಕಲೆಯ ವಿಭಾಗಕ್ಕೆ ಮೀಸಲಾದ  ಪ್ರಶಸ್ತಿಯನ್ನು ಛತ್ತೀಸ್ಗಡದ ಜನಪದ ಕಲಾವಿದೆಯಾದ ಡಾಕ್ಟರ್ ತೇಜೇನ್ ಬಾಯಿ ಪಡೆದರು.


ಸಮಾರಂಭದ ಸಾನ್ನಿಧ್ಯವನ್ನು ವಹಿಸಿದ್ದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಪುರಸ್ಕಾರಗಳನ್ನು ನೀಡಿ ವಿಜೇತರನ್ನು ಹರಸಿ ಮಾತನಾಡುತ್ತಾ, ಮಹಿಳೆಯರು ಮಾತೃ ಸುರೂಪಿಣಿಯರು ಅವರಿಗೆ ಗೌರವಸಂದಲ್ಲಿ  ದೇವತೆಗಳು ನಡೆಯುತ್ತಾರೆ ದೇವತಾ ಪ್ರಿಯರಾದ ಮಹಿಳೆಯರಿಗೆ ಗೌರವವನ್ನು ಸಲ್ಲಿಸುವುದು  ನಮ್ಮ ದೇಶದ ಸಂಸ್ಕೃತಿ, ಮಹಿಳೆಯರು ಶಕ್ತಿ ಸ್ವರೂಪಿಣಿಯರು ಅದಕ್ಕಾಗಿ ಈ ಬಾರಿ  ಪುರಸ್ಕಾರವನ್ನು ಶಕ್ತಿ ಸ್ವರೂಪಿಣಿಯರ ಸನ್ಮಾನ ಎಂಬ ಅಡಿಬರಹದಲ್ಲಿಟ್ಟು ರೂಪಿಸಿದ್ದೇವೆ. ಅರ್ಹರಿಗೆ ಅರ್ಹ ಪುರಸ್ಕಾರವು ಸಂದಾಯವಾದಾಗ ಶ್ರಮಿಸಿದವರಿಗೆ ತೃಪ್ತಿಯುನೋಡಿದವರಿಗೆ ಪ್ರೇರಣೆಯು ದೊರೆಯುತ್ತದೆ. ಮಾನವೀಯತೆಗಾಗಿ ಶ್ರಮಿಸುತ್ತಿರುವ ಸರ್ವರಿಗೂ  ಒಳಿತಾಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ತಮ್ಮ ತಮ್ಮ ಜೀವನವನ್ನು ರೂಪಿಸುವ  ಕಾರ್ಯಕ್ಕೆ  ಬದ್ಧರಾಗಬೇಕೆಂದು ತಿಳಿಸಿದರು.ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾಕ್ಟರ್ ಕೆ ಸುಧಾಕರ್, ಬಿರ್ಲಾ ಪ್ರತಿಷ್ಠಾನದ ಡಾಕ್ಟರ್ ನೀರಜಾ ಬಿರ್ಲಾ, ಕುಲಾಧಿಪತಿಗಳಾದ ಬಿ ಎನ್ ನರಸಿಂಹಮೂರ್ತಿ, ಶ್ರೀ ಸತ್ಯಸಾಯಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾಕ್ಟರ್ ಸಿ  ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments