Friday, April 26, 2024
spot_img
HomeChikballapurಪರಿಷತ್ ಚುನಾವಣೆ ಕಾಂಗ್ರೆಸ್ ಜಯಭೇರಿ: ಕಾರ್ಯಕರ್ತರ ಸಂಭ್ರಮಾಚರಣೆ

ಪರಿಷತ್ ಚುನಾವಣೆ ಕಾಂಗ್ರೆಸ್ ಜಯಭೇರಿ: ಕಾರ್ಯಕರ್ತರ ಸಂಭ್ರಮಾಚರಣೆ

ಚಿಕ್ಕಬಳ್ಳಾಪುರ: ಸ್ಥಳೀಯ ಸಂಸ್ಥೆಗಳಿಗೆ ನಡೆದ ವಿಧಾನ ಪರಿಷತ್ ಚುನಾವಣೆಯ ತ್ರಿಕೋನ ಸ್ಪರ್ಧೆಯಲ್ಲಿ ಕಾಂಗ್ರೆಸ್ ಪಕ್ಷದ ಎಂಎಲ್ ಅನಿಲ್‌ಕುಮಾರ್ 441 ಮತಗಳ ಅಂತರದಿAದ ಗೆಲುವನ್ನು ದಾಖಲಿಸಿ ಪಕ್ಷದ ಗೆಲುವಿಗೆ ಶ್ರೀಕಾರ ಹಾಡಿದ್ದಾರೆ.ಇದರಿಂದಾಗಿ ಆಡಳಿತ ಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ಸೋಲಿನ ಕಾರ್ಮೋಡ ಕವಿದಿದ್ದರೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.ಆಣೆ ಪ್ರಮಾಣ ಮಾಡಿ ಅಡ್ಡಮತದಾನ ಮಾಡಿಸುವ ಬಿಜೆಪಿ ಅಕ್ರಮ ಚಟುವಟಿಕೆಗಳ ವಿರುದ್ದ ಮತದಾರ ಮತನೀಡಿದ್ದಾನೆ ಎಂದು ನೂತನ ಎಂ.ಎಲ್.ಸಿ ಅನಿಲ್ ಕುಮಾರ್ ವಿಶ್ಲೇಶಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಯನ್ನು ಬಿಜೆಪಿ ಪಕ್ಷವು ಪ್ರತಿಷ್ಟೆಯಾಗಿ ಪರಿಗಣಿಸಿದ್ದ ಪರಿಣಾಮ ಕೋಲಾರ ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳಲ್ಲಿ ಹೈವೋಲ್ಟೇಜ್ ಸೃಷ್ಟಿಯಾಗಿತ್ತು.ಈ ಚುನಾವಣೆ ಪಕ್ಷದ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವ ಬದಲಿಗೆ ಇವರ ಹಿಂದಿದ್ದ ಘಟಾನುಘಟಿ ನಾಯಕರ ಶಕ್ತಿ ಸಾಮರ್ಥ್ಯ ಸಾಬೀತು ಮಾಡುವ ಅಖಾಡವಾಗಿತ್ತು.ಇದೇ ಕಾರಣಕ್ಕೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸಚಿ ಸುಧಾಕರ್ ಇಬ್ಬರ ನಡುವಿನ ಜಿದ್ದಾಜಿದ್ದಿ ಮಾತಿನ ಸಮರಕ್ಕೆ ನಾಂದಿಹಾಡಿತ್ತು.ಚುನಾವಣಾ ಪ್ರಚಾರ ಸಭೆಯಲ್ಲಿ ರಮೇಶ್‌ಕುಮಾರ್ ಸುಧಾಕರ್ ಹೆಸರು ಹೇಳದೆ ಅನಾಯಾಸವಾಗಿ ಬದುಕುವ ಫಕೀರನಿಗೆ ಹೋಲಿಕೆ ಮಾಡಿದರೆ, ಸುಧಾಕರ್ ಕೊಕ್ಕರೆಗೆ ಹೋಲಿಸಿ ಖಾವಿ ಧರಿಸದ ಬೂಟಾಟಿಕೆಯ ಸ್ವಾಮೀಜಿ ಎಂಬAತೆ ಮಾತನಾಡಿದ್ದರು.ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಡಾ. ವೇಣುಗೋಪಾಲ್ ಆಗಲಿ, ಎಂ ಎಲ್ ಅನಿಲ್‌ಕುಮಾರ್ ಆಗಲಿ ಇಲ್ಲಿ ನೆಪ ಮಾತ್ರವಾಗಿದ್ದರು. ಬದಲಿಗೆ ಅನಿಲ್‌ಕುಮಾರ್ ಹಿಂದಿನ ಶಕ್ತಿಯಾಗಿ ನಿಂತಿದ್ದ ಮಾಜಿ ಸಚಿವ ಶಿವಶಂಕರ್‌ರೆಡ್ಡಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೋಲಾರದ ಶ್ರೀನಿವಾಸ ಗೌಡ ಟಾರ್ಗೆಟ್ ಆಗಿದ್ದರು.ಒಂದು ವೇಳೆ ಕಾಂಗ್ರೆಸ್ ಅಭ್ಯರ್ಥಿ ಸೋತಿದ್ದರೆ ಇವರ ಮುಂದಿನ ರಾಜಕೀಯ ಭವಿಷ್ಯವೇ ಮಸುಕಾಗುತ್ತಿತ್ತು ಎನ್ನುವ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಜೋರಾಗಿಯೇ ಕೇಳಿಬಂದಿದ್ದವು.ಮೇಲಾಗಿ ಬಿಜೆಪಿ ಸರಕಾರದಲ್ಲಿ ಪ್ರಭಾವಿ ಸಚಿವರಾಗಿರುವ ಕೋಲಾರ ಉಸ್ತುವಾರಿ ಮುನಿರತ್ನ, ಆಪರೇಷನ್ ಕಮಲದ ರೂವಾರಿ ಎಂದೇ ಹೆಸರಾದ ರಾಜಕೀಯ ಚಾಣಾಕ್ಷ,. ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ ಸುಧಾಕರ್ ಅವರಿಂದಾಗಿ ಬಿಜೆಪಿಗೆ ಈ ಕ್ಷೇತ್ರ ಪ್ರತಿಷ್ಟೆಯನ್ನು ಪಣಕ್ಕಿಟ್ಟಂತಾಗಿತ್ತು.
ಸುಳ್ಳಾದ ಲೆಕ್ಕಾಚಾರ
ಚುನಾವಣಾ ಪೂರ್ವದಲ್ಲಿ ಜೆಡಿಎಸ್ ಬಿಜೆಪಿ ಒಳೊಪ್ಪಂದ ಮಾಡಿಕೊಂಡಿವೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. ಜೆಡಿಎಸ್ ಮನೆ ಬಾಗಿಲ ಬಳಿ ಕಾಂಗ್ರೆಸ್ ಬಿಜೆಪಿ ಬರುವಂತಹ ಕಾಲ ದೂರವಿಲ್ಲ ಎಂಬ ಮಾತನ್ನು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಆಡಿದ್ದರು.ಕಾಂಗ್ರೆಸ್ ಪದೇ ಪದೇ ಜೆಡಿಎಸ್ ಬಿಜೆಪಿಗೆ ನೆರವಾಗಲೆಂದೇ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಎಂದು ಹೇಳುತ್ತಲೇ ಬಂದಿತ್ತು.ಯಾವಾಗ ದೇವೇಗೌಡರು ಅಖಾಡಕ್ಕೆ ಇಳಿದರೋ ಅಲ್ಲಿಂದ ತ್ರಿಕೋನ ಸ್ಪರ್ಧೆಗೆ ಜೀವ ಬಂದಿತ್ತು.ಚುನಾವಣಾ ಫಲಿತಾಂಶವೂ ಕೂಡ ಇದನ್ನು ಗಟ್ಟಿ ಮಾಡಿದೆ. ಕಾಂಗ್ರೆಸ್ ಪಕ್ಷದ ಎಂ.ಎಲ್ ಅನಿಲ್‌ಕುಮಾರ್-2340 ಬಿಜೆಪಿ ಅಭ್ಯರ್ಥಿ ಡಾ.ವೇಣುಗೋಪಾಲ್-1899 ಜೆಡಿಎಸ್‌ನ ವಕ್ಕಲೇರಿ ರಾಮು-1438 ಅಸಿಂದು ಮತಗಳು- 177 ಮತ್ತೊಬ್ಬ ಅಭ್ಯರ್ಥಿ ಅನಿಲ್‌ಕುಮಾರ್- 10 ಪಡೆದಿದ್ದು 441 ಮತಗಳ ಅಂತರದಿAದ ಗೆಲುವು ಗೆಲುವು ದಾಖಲಿಸಿದ ಕಾರಣ ಮುಗಿಲು ಮುಟ್ಟಿದ ಸಂಭ್ರಮಾಚರಣೆ
ಕೋಲಾರದಲ್ಲಿ ನಡೆದ ಮತ ಎಣಿಕೆಯಲ್ಲಿ ಮೊದಲ ಸುತ್ತಿನಿಂದಲೇ ಮುಂದಿದ್ದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅನಿಲ್ ಕುಮಾರ್ ಕೊನೆಯ ಹಂತದಲ್ಲೂ ಮುನ್ನಡೆ ಸಾದಿಸಿ 414 ಮತಗಳಿಂದ ಗೆಲುವಿನ ನಗೆ ಬೀರಿದ್ದಾರೆ
ಗೆದ್ದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಎಂ.ಎಲ್ ಅನಿಲ್ ಕುಮಾರಗ ಕೋಲಾರದಲ್ಲಿ ವಿಜಯೋತ್ಸವ ನಡೆಸಿ ಚಿಕ್ಕಬಳ್ಳಾಪುರ ಕ್ಕೆ ಆಗಮಿಸಿ ಇಲ್ಲಿನ ಕಾಂಗ್ರೇಸ್ ಕಾರ್ಯಕರ್ತರೊಂದಿಗೆ ಬಿ ಬಿ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಪಟಾಕಿ ಸಿಡಿಸಿ ಸಿಹಿ ಹಂಚಿದ ಸಂಬ್ರಮದಲ್ಲಿ ಪಾಲ್ಗೊಂಡರು
ಈ ವೇಳೆ ಜಿಲ್ಲಾಧ್ಯಕ್ಷ ಕೆ.ಎನ್.ಕೇಶವರೆಡ್ಡಿ,ಯುವ ನಾಯಕ ವಿನಯ್ ಶಾಮ್, ಕೆಪಿಸಿಸಿ ಸದಸ್ಯ ಮುನೇಗೌಡ,ಯಲುವಳ್ಳಿ ರಮೇಶ್ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಯರಾಮ್ ಇತರೆ ಪ್ರಮುಖ ಮುಖಂಡರುಗಳು ಹಾಜರಿದ್ದರು.
ಈ ವೇಳೆ ಮಾತನಾಡಿದ ನೂತನ ಎಂ ಎಲ್ ಸಿ ಅನಿಲ್ ಕುಮಾರ್ ನನ್ನ ಗೆಲುವಿಗೆ ಕಾರಣರಾದ ಪ್ರಮುಖ ಮುಖಂಡರಿಗೆ ಅಭಿನಂದನೆಗಳನ್ಮ ಸಲ್ಲಿಸಿ ಮಾತನಾಡಿ ಎರಡೂ ಜಿಲ್ಲೆಗಳಲ್ಲಿ ಕಾಂಗ್ರೇಸ್ ನಶಿಸಿಹೋಗುತ್ತಿದೆ ಎಂದು ಪ್ರಚಾರ ಮಾಡುತಿದ್ದ ನಾಯಕರಿಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ,ನಮ್ಮಿಂದ ಲಾಭ ಪಡೆದು ಅನ್ಯ ಪಕ್ಷಕ್ಕೆ ಬೆಂಬಲು ಸೂಚಿಸಿದ ಮುಖಂಡರುಗಳಿಗೆ ಮುಖಬಂಗವಾಗಿದೆ ಆಣೆ ಪ್ರಮಾಣ ಮಾಡಿಸಿ ಹೇರಳವಾಗಿ ಹಣ ಹಂಚಿ ಅಡ್ಡಮತದಾನ ಮಾಡಿಸಲು ಹೊರಟಿದ್ದ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಗೂ ಮುಖಭಂಗವಾಗಿದೆ ನನ್ನ ಎಂ ಎಲ್ ಸಿ ಕಾಂಗ್ರೇಸ್ ಗೆಲುವಿನಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ನಮ್ಮ ಗೆಲುವಿಗೆ ಮುನ್ನುಡಿಬರೆದಂತಾಗಿದೆ ಎಂದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments