Monday, May 6, 2024
spot_img
HomeChikballapurಸಮತಾ ಸೈನಿಕ ದಳ ವತಿಯಿಂದ ಕೋರೆಗಾಂವ್ ವಿಜಯೋತ್ಸವ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ

ಸಮತಾ ಸೈನಿಕ ದಳ ವತಿಯಿಂದ ಕೋರೆಗಾಂವ್ ವಿಜಯೋತ್ಸವ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ

ಶಿಡ್ಲಘಟ್ಟ: ಹೊಸ ವರ್ಷದಲ್ಲಿ ತಾಲ್ಲೂಕಿನ ಮಳ್ಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಭೀಮಾ ಕೋರೆಗಾಂವ್ 204 ನೇ ವರ್ಷದ ವಿಜಯೋತ್ಸವ ಅಂಗವಾಗಿ ಸಮತಾ ಸೈನಿಕ ದಳ ವತಿಯಿಂದ ಭೀಮಾ ಕೋರೆಗಾಂವ್ ಯುದ್ದದ ವಿಜಯೋತ್ಸವ ಹಾಗೂ 1818 ರಲ್ಲಿ ನಡೆದಿರುವಂತ ಯುದ್ಧದಲ್ಲಿ ವೀರ ಮರಣವನ್ನಪ್ಪಿದ 22 ಜನ ಮಾಹರರ ನೆನೆಪಿಗಾಗಿ ಬುದ್ಧನ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಜ್ಯೋತಿ ಬೆಳಗಿಸಿ ಪುಸ್ತಕ ಮತ್ತು ಲೇಖನಿಗಳು ವಿತರಿಸಿ ಶಾಲಾ ಮಕ್ಕಳಿಗೆ ಸಿಹಿ ಹಂಚಲಾಯಿತು.
ಈ ದೇಶದಲ್ಲಿರುವ ಪ್ರತಿಯೊಬ್ಬ ಶೂದ್ರರಿಗೂ ವಿಧ್ಯಾಭ್ಯಾಸ ನೀಡುವಂತೆ ಯುದ್ಧದ ಮೂಲಕ ಮಾಹರರು ಜಯಗಳಿಸಿದರು. ಆಗಿನ ಈಸ್ಟ್ ಇಂಡಿಯಾ ಬ್ರಿಟೀಷ್ ಸರ್ಕಾರ ಇದ್ದ ಸಂದರ್ಭದಲ್ಲಿ ಸ್ಪೃಶ್ಯತೆಯ ಹೆಸರಿಸಲ್ಲಿ ಶೋಷಣೆ ಮಾಡುತ್ತಿದ್ದ 2 ನೇ ಬಾಜಿರಾಯನ್ನು ವಿರುದ್ಧ ತುಳಿತಕ್ಕೊಳಗಾದ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೋರಾಡಿ 2ನೇ ಬಾಜಿರಾಯನ ಸೈನ್ಯವನ್ನು ಸೋಲಿಸಿ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ಜ್ಞಾಪಕಾರ್ಥದಲ್ಲಿ ಇತಿಹಾಸ ಪುಟಗಳಿಂದ ಮುಚ್ಚಿಟ್ಟ ಸತ್ಯ ಚರಿತ್ರೆಯನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು ಜೊತೆಗೆ ಮುಚ್ಚಿಡಲ್ಪಟ್ಟ ಇತಿಹಾಸವನ್ನು ನಮಗೆಲ್ಲ ತೋರಿಸಿಕೊಟ್ಟ ಡಾ. ಬಿ.ಆರ್ ಅಂಬೇಡ್ಕರ್ ರವರಿಗೆ ಸದಾ ಋಣಿಯಾಗಿರಬೇಕು ಎಂದು ಸಮತಾ ಸೈನಿಕ ದಳ ತಾಲ್ಲೂಕು ಅಧ್ಯಕ್ಷ ಈ ಧರೆ ಪ್ರಕಾಶ್ ಮಾತನಾಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶಂಕುತಲಮ್ಮ, ಎಸ್ ಡಿ ಎಂ ಸಿ ಅಧ್ಯಕ್ಷ ಮುನಿಕೃಷ್ಣಪ್ಪ, ಮಾಜಿ ಅಧ್ಯಕ್ಷ ವೆಂಕಟರಾಮಪ್ಪ, ಸಮತಾ ಸೈನಿಕ ದಳ ತಾಲ್ಲೂಕು ಮಹಿಳಾ ಘಟಕ ಅಧ್ಯಕ್ಷೆ ನಾಗರತ್ನಮ್ಮ, ಗ್ರಾಮ ಪಂಚಾಯಿತಿ ಸದಸ್ಯ ನರಸಿಂಹಮೂರ್ತಿ, ಮಾಜಿ ಗ್ರಾ.ಪಂ ಸದಸ್ಯ ಶ್ರೀನಿವಾಸರೆಡ್ಡಿ, ಕದಿರಪ್ಪ, ಸಮತಾ ಸೈನಿಕ ದಳ ಜಂಗಮಕೋಟೆ ಹೋಬಳಿ ಖಜಾಂಚಿ ಪ್ರಸನ್ನ ಕುಮಾರ್ ಜೆ ವೆಂಕಟಾಪುರ ಗ್ರಾಮ ಶಾಖೆ ಅಧ್ಯಕ್ಷೆ ಲಾವಣ್ಯ ಚನ್ನಹಳ್ಳಿ ನರಸಪ್ಪ, ಮಳ್ಳೂರು ಗ್ರಾಮದ ಶಿವಶಂಕರ್, ಪ್ರಭಾಕರ್ ಹಾಗೂ ಶಾಲಾ ಸಿಬ್ಬಂದಿ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments