Thursday, April 25, 2024
spot_img
HomeChamarajanagarಜಿಲ್ಲೆಯ ವಿವಿಧೆಡೆ ಕೋಟ್ಪಾ ದಾಳಿ : ಒಟ್ಟು 110 ಪ್ರಕರಣಗಳಿಗೆ 11310 ರೂ. ದಂಡ

ಜಿಲ್ಲೆಯ ವಿವಿಧೆಡೆ ಕೋಟ್ಪಾ ದಾಳಿ : ಒಟ್ಟು 110 ಪ್ರಕರಣಗಳಿಗೆ 11310 ರೂ. ದಂಡ

ಚಾಮರಾಜನಗರ: ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ (ಕೋಟ್ಪಾ-2003) ಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಕೋಟ್ಪಾ ತನಿಖಾ ತಂಡದ ಸಹಯೋಗದೊಂದಿಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೋಟ್ಪಾ ದಾಳಿ ನಡೆಸಲಾಗಿದೆ.

ದಾಳಿಯ ವೇಳೆ ನಿಯಮ ಉಲ್ಲಂಘನೆ ಮಾಡಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳು, ಕೋಟ್ಪಾ ಸೆಕ್ಷನ್-4 ಎಚ್ಚರಿಕೆ ನಾಮಫಲಕವನ್ನು ಪ್ರದರ್ಶಿಸದ ಹೋಟೆಲ್, ಬಾರ್ ಆಂಡ್ ರೆಸ್ಟೋರೆಂಟ್, ಟೀ ಸ್ಟಾಲ್, ಚಿಲ್ಲರೆ ಅಂಗಡಿ ಹಾಗೂ ಇತರೆ ಅಂಗಡಿಗಳು, ಕೋಟ್ಪಾ ಸೆಕ್ಷನ್-6(ಎ) ನಾಮಫಲಕವನ್ನು ಪ್ರದರ್ಶಿಸದ ತಂಬಾಕು ಮಾರಾಟ ಇರುವ ಅಂಗಡಿಗಳು, ಶಿಕ್ಷಣ ಸಂಸ್ಥೆಯ 100 ಗಜಗಳ ಅಂತರದ ಒಳಗೆ ತಂಬಾಕು ಪದಾರ್ಥಗಳನ್ನು ಮಾರಾಟ ಮತ್ತು ಸೇವನೆಗೆ ಉತ್ತೇಜನ ನೀಡುವ ಅಂಗಡಿಗಳಿಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ ವ್ಯಕ್ತಿಗಳಿಗೆ ಸ್ಥಳದಲ್ಲೇ ಕೋಟ್ಪಾ-2003 ರಡಿ ಪ್ರಕರಣ ದಾಖಲಿಸಿ ದಂಡ ವಿಧಿಸಲಾಯಿತು. ಕರಪತ್ರ ವಿತರಿಸಿ ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳು ಮತ್ತು ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ-2003ರ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಡಿಸೆಂಬರ್ ಮಾಹೆಯಲ್ಲಿ ಕೋಟ್ಪಾ ದಾಳಿಯನ್ನು ನಡೆಸಲಾಗಿದ್ದು, ಹನೂರು ತಾಲೂಕಿನ ಅಜ್ಜೀಪುರ, ಬಸಪ್ಪನದೊಡ್ಡಿ, ಕುರುಬರದೊಡ್ಡಿ ಮತ್ತು ಕೆ. ಗುಂಡಾಪುರ, ಕೊಳ್ಳೆಗಾಲ ತಾಲೂಕಿನ ಚಿಕ್ಕಲೂರು ಮತ್ತು ತೆಳ್ಳನೂರು ಗ್ರಾಮ, ಚಾಮರಾಜನಗರ ತಾಲೂಕಿನ ಮರಿಯಾಲ, ಆಲ್ದೂರು, ಗಣಿಗನೂರು ಮತ್ತು ಹಳ್ಳಿಕೆರೆಹುಂಡಿ ಗ್ರಾಮ ಸೇರಿದಂತೆ ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ದಾಳಿ ನಡೆಸಿ ದಾಳಿಯ ವೇಳೆ ಕೋಟ್ಪಾ-2003 ರಡಿ ಒಟ್ಟು 80 ಪ್ರಕರಣಗಳಿಗೆ 10140 ರೂ. ದಂಡ ಹಾಗೂ ಅಬಕಾರಿ ವತಿಯಿಂದ 30 ಪ್ರಕರಣಗಳಿಗೆ 1170 ರೂ. ದಂಡ ಒಟ್ಟು 110 ಪ್ರಕರಣಗಳಿಗೆ 11310 ರೂ. ದಂಡ ವಿಧಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ದಾಳಿ ನಡೆಸಲಾಗುವುದು. ಜಿಲ್ಲೆಯಲ್ಲಿರುವ ಎಲ್ಲಾ ಸಾರ್ವಜನಿಕ ಸ್ಥಳದ ಮಾಲೀಕರು, ಮುಖ್ಯಸ್ಥರು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಕೋಟ್ಪಾ ಕಾಯ್ದೆ ಉಲ್ಲಂಘನೆಯಾಗದ ರೀತಿ ಕಟ್ಟೆಚ್ಚರ ವಹಿಸಬೇಕೆಂದು ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಕಾರ್ಯಕ್ರಮಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments