Friday, April 26, 2024
spot_img
HomeChikballapurಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಚಿಂತಾಮಣಿಯ ದೇವಾಲಯಗಳಲ್ಲಿ ವಿಶೇಷ ಪೂಜೆ, ಕಾಡುಮಲ್ಲೇಶ್ವರ ಬೆಟ್ಟಕ್ಕೆ ಹರಿದು ಬಂದ ಭಕ್ತ...

ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಚಿಂತಾಮಣಿಯ ದೇವಾಲಯಗಳಲ್ಲಿ ವಿಶೇಷ ಪೂಜೆ, ಕಾಡುಮಲ್ಲೇಶ್ವರ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ

ಪಾಲಾರ್ ಪತ್ರಿಕೆ | Palar Pathrike

ಚಿಂತಾಮಣಿ:-ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಚಿಂತಾಮಣಿ ತಾಲ್ಲೂಕಿನ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು ಹಾಗೂ ಚಿಂತಾಮಣಿ ನಗರಕ್ಕೆ ಹೊಂದಿಕೊAಡಿರುವ ಕಾಡುಮಲ್ಲೇಶ್ವರ ಬೆಟ್ಟದಲ್ಲಿ ನೆಲೆಸಿರುವ ಕಾಡುಮಲ್ಲೇಶ್ವರ ದೇವಾಲಯಕ್ಕೆ ಜನ ಸಾಗರವೇ ಹರಿದು ಬಂದಿತು.
ಮಹಾಶಿವರಾತ್ರಿ ಹಬ್ಬವಾದುದರಿಂದ ಶನಿವಾರ ಚಿಂತಾಮಣಿ ನಗರದ ನಾಗನಾಥೇಶ್ವರ ಸ್ವಾಮಿ, ಕಾಡುಮಲ್ಲೇಶ್ವರಬೆಟ್ಟದ ಕಾಡುಮಲ್ಲೇಶ್ವರ ಸ್ವಾಮಿ, ನಾರಸಿಂಹಪೇಟೆಯ ಗಂಗಮ್ಮದೇವಿ ದೇವಾಲಯ, ವೆಂಕಟೇಶ್ವರ ಬಡಾವಣೆಯ ಶ್ರೀಕಂಠೇಶ್ವರ ದೇವಾಲಯ, ಉಪ್ಪರಪೇಟೆಯ ಸೃಷ್ಟೀಶ್ವರಸ್ವಾಮಿ, ಅಂಬಾಜಿ ದುರ್ಗಾ ಬೆಟ್ಟದಲ್ಲಿನ ಗಿರಿಜಾಮಲ್ಲೇಶ್ವರ ಸ್ವಾಮಿ, ಮುರುಗಮಲ್ಲೆಯ ಮುಕ್ತೀಶ್ವರಸ್ವಾಮಿ, ಹಾಗೂ ತಾಲ್ಲೂಕಿನಾದ್ಯಂತ ಇರುವ ಹಲವು ದೇವಾಲಯಗಳ ದೇವರುಗಳಿಗೆ ಬೆಳಿಗ್ಗೆಯಿಂದಲ್ಲೇ ವಿಶೇಷ ಹೂವಿನ ಅಲಂಕಾರ ಹಾಗೂ ಹೋಮ ಹವನ, ಅಭಿಷೇಕ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು,
ಇನ್ನೂ ವಿಶೇಷವಾಗಿ ಚಿಂತಾಮಣಿ ನಗರಕ್ಕೆ ಹೊಂದಿಕೊAಡಿರುವ ಕಾಡುಮಲೇ ಬೆಟ್ಟದಲ್ಲಿ ನೆಲೆಸಿರುವ ಶ್ರೀ ಕಾಡುಮಲೇಶ್ವರಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು,ಹಾಗೂ ಪ್ರತಿ ವರ್ಷ ಕಾಡುಮಲ್ಲೇಶ್ವರ ಬೆಟ್ಟದ ಮೇಲೆ ಭಕ್ತಾದಿಗಳಿಂದ ತಮಿಳುನಾಡಿನ ತಿರುನಾಮಲೈ ನಲ್ಲಿ ನಡೆಯುವ ರೀತಿಯಲ್ಲಿ ಬೃಹತ್ ಜ್ಯೋತಿ ಬೆಳೆಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡು ಜ್ಯೋತಿ ಬೆಳೆಗಿಸುವ ಕಾರ್ಯಕ್ಕೆ ಚಾಲನೇ ನೀಡಿದರು.
ಇನ್ನೂ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಕಾಡುಮಲೇಶ್ವರ ಸ್ವಾಮಿಯ ದರ್ಶನ ಪಡೆಯಲು ಕಾಡುಮಲ್ಲೇಶ್ವರ ಬೆಟ್ಟಕ್ಕೆ ಭಕ್ತಾದಿಗಳು ಗುಂಪು ಗುಂಪಾಗಿ ಹತ್ತುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ಬೆಳಿಗ್ಗೆಯಿಂದಲೆ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ದೇವಾಲಯಗಳಿಗೆ ಆಗಮಿಸಿ ವಿಶೇಷ ಪೊಜೆ ಪುರಸ್ಕಾರಗಳನ್ನು ಮಾಡಿ ದೇವರ ದರ್ಶನವನ್ನು ಪಡೆದರು. ಇನ್ನೂ ವಿಶೇಷವಾಗಿ ಚಿಂತಾಮಣಿ ತಾಲ್ಲೂಕಿನಾದ್ಯಂತ ಇರುವ ದೇವಾಲಯಗಳಿಗೆ ವಿಶೇಷ ಹೂವಿನ ಆಲಂಕಾರ ಹಾಗೂ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಹಲವು ಗಣ್ಯರು ಚಿಂತಾಮಣಿ ತಾಲ್ಲೂಕಿನ ಹಲವು ದೇವಾಲಯಗಳಿಗೆ ಆಗಮಿಸಿ ವಿಶೇಷ ಪೊಜೆಗಳನ್ನು ಸಲ್ಲಿಸಿ ಉತ್ತಮ ಮಳೆಯಾಗಿ ಉತ್ತಮ ಬೆಳೆಯಾಗಿ ಜನ ಸುಖ ಶಾಂತಿ ನೆಮ್ಮಂದಿಯಿAದ ಬಾಳಲ್ಲಿಯೆಂದು ದೇವರಲ್ಲಿ ಮೊರೆ ಹೋದರು.
ಇನ್ನೂ ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ದೇವಾಲಯಗಳಲ್ಲಿ ಭಕ್ತಾದಿಗಳಿಂದ ಬೆಳಿಗೆಯಿಂದಲೇ ಹರಿಕಥೆ ಹಾಗೂ ಭಜನಾ ಕಾರ್ಯಕ್ರಮಗಳು ಮೂಡುಬಂದವು, ಹಾಗೂ ದೇವಾಲಯಗಳಿಗೆ ಅಗಮಿಸಿದ ಎಲ್ಲಾ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ಹಾಗೂ ಉಚಿತ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments