Friday, April 26, 2024
spot_img
HomeChikballapurಇಂದು ಚಿಂತಾಮಣಿಯಲ್ಲಿ ಕಸಾಪದಿಂದ 5ನೇ ಕನ್ನಡ ಸಾಹಿತ್ಯ

ಇಂದು ಚಿಂತಾಮಣಿಯಲ್ಲಿ ಕಸಾಪದಿಂದ 5ನೇ ಕನ್ನಡ ಸಾಹಿತ್ಯ

ಪಾಲಾರ್ ಪತ್ರಿಕೆ | Palar Pathrike

ಚಿಂತಾಮಣಿ: ನಗರದ ಅಂಬೇಡ್ಕರ್ ಭವನದಲ್ಲಿ ಮಾರ್ಚ್ 2 ರಂದು ಚಿಂತಾಮಣಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಂದ ಐದನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಎಲ್ಲಾ ಕನ್ನಡಪರ ಸಂಘಟನೆಗಳು, ರೈತ ಪರ ಹಾಗೂ ಸಾರ್ವಜನಿಕರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ದೇವತಾದೇವರಾಜ್ ಕರೆ ನೀಡಿದರು.

ಚಿಂತಾಮಣಿ ನಗರದ ಕನ್ನಡ ಸಾಹಿತ್ಯ ಪರಿಷತ್ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ ಮಾರ್ಚ್ 2 ರ ಗುರುವಾರ ಚಿಂತಾಮಣಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಂದ ಐದನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸಮ್ಮೇಳನಾಧ್ಯಕ್ಷರಾಗಿ ಕಾಗತಿ ವಿ ವೆಂಕಟರತ್ನA ರವರನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿದರು.
ಮಾರ್ಚ2 ಗುರುವಾರ ಬೆಳಿಗ್ಗೆ 8 ಗಂಟೆಗೆ ತಹಸಿಲ್ದಾರ್ ರಾಜೀವ್ ರವರಿಂದ ರಾಷ್ಟçಧÀ್ವಜರೋಹಣ, ಶಾಸಕ ಜೆಕೆ ಕೃಷ್ಣಾರೆಡ್ಡಿರಿಂದ ನಾಡಧÀ್ವಜರೋಹಣ ಹಾಗೂ ಕಸಪಾ ಅಧ್ಯಕ್ಷ ದೇವತಾ ದೇವರಾಜ್ ರವರಿಂದ ಪರಿಷತ್ ನ ಧÀ್ವಜರೋಹಣ ನಡೆಯಲಿದ್ದು, ಬೆಳಿಗ್ಗೆ 9-30 ಗಂಟೆಗೆ ಪ್ರವಾಸಿ ಮಂದಿರದ ಬಳಿ ತಾಯಿ ಭುವನೇಶ್ವರಿ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷ ಮೆರವಣಿಗೆ ಕಾರ್ಯಕ್ರಮ ಆರಂಭವಾಗಲಿದೆ.
ಮಧ್ಯಾಹ್ನ 12 ಗಂಟೆಗೆ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ ನಾಗರಾಜ್ ಮಾಡಲಿದ್ದು, ಅಧ್ಯಕ್ಷತೆಯನ್ನು ಎಂ. ಕೃಷ್ಣಾರೆಡ್ಡಿ ವಹಿಸಲಿದ್ದು, ಆಶಯ ನುಡಿಯನ್ನು ಕಸಾಪ ರಾಜ್ಯಾಧ್ಯಕ್ಷ ನಾಡೋಜ ಮಹೇಶ್ ಜೋಷಿ ರವರು ನೆರವೇರಿಸಲಿದ್ದಾರೆ.
ಮಧ್ಯಾಹ್ನ 2 ರಿಂದ2-30 ರ ತನಕ ಸುಗಮ ಸಂಗೀತ ಲೀಲಾ ಲಕ್ಷಿ÷್ಮÃನಾರಾಯಣ್ ಮತ್ತು ಬಿ.ಆರ್.ಅನ್ನಪೂರ್ಣ ತಂಡದವರಿAದ
ಮಧ್ಯಾಹ್ನ 2-30 ರಿಂದ 3-30 ಕವಿಗೋಷ್ಟಿ, ಮಧ್ಯಾಹ್ನ 3-30 ರಿಂದ 4 ಗಂಟೆಯ ಸಾಂಸ್ಕöÈತಿಕ ಕಾರ್ಯಕ್ರಮ ಸಾಮಾಜಿಕ ಗೀತೆಗಳು- ಬೇರು ಬೆವರು ಕಲಾ ಬಳಗದ ಸೋರಪಲ್ಲಿ ಚಂದ್ರಶೇಖರ್ ತಂಡದಿAದ, ಮಧ್ಯಾಹ್ನ 4 ರಿಂದ 4-30 ತನಕ ವಿಚಾರಗೋಷ್ಟಿ ವಿಷಯ ತಂತ್ರಜ್ಞಾನ ಮತ್ತು ಜ್ಞಾನಾಭಿವೃದ್ದಿ ಬಗ್ಗೆ ಪ್ರೊ ವಿಜೇಯೇಂದ್ರ ಕುಮಾರ್ ರವರಿಂದ, ಸಂಜೆ 4-30 ರಿಂದ 6 ಗಂಟೆಯ ತನಕ ಶಾಲಾ ಮಕ್ಕಳಿಂದ ಸಾಂಸ್ಕöÈತಿಕ ಕಾರ್ಯಕ್ರಮ, ಸಂಜೆ 6 ರಿಂದ 6-30 ರ ತನಕ ಕೀರ್ತಿ ಬಸಪ್ಪ ಲಗಳಿ ತಂಡದವರಿAದ ಕೆರೆಗೆ ಹಾರ ಕಿರುನಾಟಕ, ಸಂಜೆ 6-30 ರಿಂದ 7 ಗಂಟೆಯ ತನಕ ಸಮಾರೋಪ ಸಮಾರಂಭ ಅಧ್ಯಕ್ಷತೆಯನ್ನು ಕಸಾಪ ಶ್ರೀ ಡಾ. ಕೋಡಿ ರಂಗಪ್ಪ ವಹಿಸಲಿದ್ದಾರೆ. ರಾತ್ರಿ 7 ರಿಂದ 10 ಗಂಟೆಯ ತನಕ ರಿಚರ್ಡ್ ಲೂಯಿಸ್ ಮತ್ತು ತಂಡದವರಿAದ ನಡೆಯಲಿದ್ದು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಎಲ್ಲಾ ಕನ್ನಡಪರ, ರೈತ ಪರ ಹಾಗೂ ಸಾರ್ವಜನಿಕರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ವೆಂಕಟೇಶ್, ಮಂಜುನಾಥ್ ಮತಿತ್ತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments