Sunday, May 5, 2024
spot_img
HomeChikballapurಹೈನು ಉತ್ಪಾದಕರು, ಗ್ರಾಹಕರಿಗೆ ತೊಂದರೆಯಾಗದಂತೆ ಕ್ರಮ: ಸಚಿವ ಸುಧಾಕರ್ ಭರವಸೆ

ಹೈನು ಉತ್ಪಾದಕರು, ಗ್ರಾಹಕರಿಗೆ ತೊಂದರೆಯಾಗದಂತೆ ಕ್ರಮ: ಸಚಿವ ಸುಧಾಕರ್ ಭರವಸೆ

ಹಾಲು ಉತ್ಪಾದಕರ ಸಹಕಾರ ಸಂಘಗಳ ನೂತನ ಕಚೇರಿ ಕಟ್ಟಡ ನರ‍್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಸಚಿವ ಸುಧಾಕರ್ ಭರವಸೆ

ಚಿಕ್ಕಬಳ್ಳಾಪುರ : ಗ್ರಾಹಕರು ಮತ್ತು ಹೈನು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಹಾಲಿನ ಬೆಲೆ ಹೆಚ್ಚಿಸಲು ಮುಖ್ಯಮಂತ್ರಿಗಳು ಶೀಘ್ರದಲ್ಲಿಯೇ ತರ‍್ಮಾನ ಕೈಗೊಳ್ಳಲಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅಭಿಪ್ರಾಯಪಟ್ಟರು.

ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಚೇರಿ ನೂತನ ಕಟ್ಟಡ ನರ‍್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿದ ನಂತರ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಹಾಲು ಉತ್ಪಾದಕರ ಸಂಘಗಳ ಕರ‍್ಯರ‍್ಶಿಗಳು ಸೇರಿದಂತೆ ಎಲ್ಲರೂ ಬದ್ಧತೆಯಿಂದ ಕರ‍್ಯನರ‍್ವಹಿಸುತ್ತಿರುವ ಕಾರಣ ಸಂಘಗಳು ಉತ್ತಮವಾಗಿವೆ ಎಂದರು.

ಗುಣಮಟ್ಟದಲ್ಲಿ ರಾಜಿ ಇಲ್ಲ

ಜಿಲ್ಲೆಯಲ್ಲಿ ಉತ್ಪಾದನೆಯಾಗುತ್ತಿರುವ ಹಾಲು ಉತ್ತಮ ಗುಣಮಟ್ಟದಿಂದ ಕೂಡಿರುವುದಾಗಿ ಈಗಾಗಲೇ ಪ್ರಮಾಣೀಕರಿಸಿದ್ದು, ಗುಣಮಟ್ಟದಲ್ಲಿ ರಾಜಿಯಾಗದೆ ರೈತರ ಹಿತಕ್ಕಾಗಿ ಶ್ರಮಿಸುತ್ತಿರುವ ಎಲ್ಲರಿಗೂ ಅಭಿನಂದಿಸುವುದಾಗಿ ಸಚಿವರು ಹೇಳಿದರು.

ಪಶು ಆಹಾರ ಬೆಲೆ ಹೆಚ್ಚಾಗಿರುವುದರಿಂದ ಹೈನು ರೈತರು ಮತ್ತು ಸಂಘಗಳು ಹಾಲಿನ ಬೆಲೆ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದು ರ‍್ಕಾರದ ಮುಂದಿದ್ದು, ಮುಖ್ಯಮಂತ್ರಿಗಳು ಶೀಘ್ರದಲ್ಲಿಯೇ ಈ ಸಂಬಂಧ ಸಭೆ ಕರೆಯಲಿದ್ದಾರೆ ಎಂದು ಹೇಳಿದರು.

ಹಾಲು ಉತ್ಪಾದಕರು ಮತ್ತು ಗ್ರಾಹಕರು ಇಬ್ಬರಿಗೂ ಒಳ್ಳೆಯದಾಗುವ ರೀತಿಯಲ್ಲಿ ಮುಖ್ಯಮಂತ್ರಿಗಳು ತರ‍್ಮಾನ ಕೈಗೊಳ್ಳಲಿದ್ದು, 60 ಲಕ್ಷ ವೆಚ್ಚದಲ್ಲಿ ಕಚೇರಿ ಕಟ್ಟಡ ನರ‍್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ. ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಸಂಸದರ ನಿಧಿಯಿಂದ ಕಟ್ಟಡ ನರ‍್ಮಾಣಕ್ಕೆ ಅನುದಾನ ನೀಡಲು ಕ್ರಮ ವಹಿಸುವುದಾಗಿ ಸಚಿವರು ಭರವಸೆ ನೀಡಿದರು.

ಉತ್ತಮ ಕಟ್ಟಡ ನರ‍್ಮಾಣವಾಗಿ, ಇಲ್ಲಿಯೇ ಸಭೆಗಳನ್ನು ನಡೆಸುವ ಗುಣಮಟ್ಟದ ಕಟ್ಟಡವಾಗಲಿ, ಹೈನುಗಾರಿಕೆ ಜಿಲ್ಲೆಯಲ್ಲಿ ಬೆಳೆಯಲು ಇದು ಸಹಕಾರಿಯಾಗಲಿ ಎಂದು ಅವರು ಇದೇ ಸಂರ‍್ಭದಲ್ಲಿ ಹಾರೈಸಿದರು.

ಮೂಲ ಸೌರ‍್ಯಗಳ ಅಭಿವೃದ್ಧಿ ರ‍್ವ ಆರಂಭವಾಗಿದೆ

ಕಣಜೇನಹಳ್ಳಿ ಮಠದ ಅಭಿವೃದ್ಧಿಗೆ 2 ಕೋಟಿ ಅನುದಾನ: ಆರೋಗ್ಯ ಸಚಿವರ ಭರವಸೆ

ಚಿಕ್ಕಬಳ್ಳಾಪುರ: ಜನರಿಗೆ ಪ್ರಮುಖ ಮೂಲ ಸೌರ‍್ಯವಾಗಿರುವ ರಸ್ತೆ ಮತ್ತು ನೀರಿಗೆ ರ‍್ಕಾರ ಹೆಚ್ಚಿನ ಆದ್ಯತೆ ನೀಡಿದ್ದು, ರಾಜ್ಯಾದ್ಯಂತ ರಸ್ತೆ ಅಭಿವೃದ್ಧಿಯ ರ‍್ವ ನಡೆಯುತ್ತಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ನಗರ ಹೊರವಲಯದ ಕಣಜೇನಹಳ್ಳಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿ 234ರಿಂದ ಕಣಜೇನಹಳ್ಳಿ ಗ್ರಾಮದ ವರೆಗೂ 1.75 ಕಿಲೋ ಮೀಟರ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅನೇಕ ರ‍್ಷಗಳಿಂದ ಈ ಗ್ರಾಮದ ಜನರ ಬೇಡಿಕೆಯಾಗಿದ್ದ ಈ ರಸ್ತೆ ಕಾಮಗಾರಿಯನ್ನು 1.8 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.

ಮುಂದಿನ ದಿನಗಳಲ್ಲಿ ಗ್ರಾಮದಿಂದ ದೇವಾಲಯದವರೆಗೂ ರಸ್ತೆ ನರ‍್ಮಾಣಕ್ಕೆ ಸುಮಾರು 4 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲಿಯೇ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಅಲ್ಲದೆ ಗ್ರಾಮದ ಮಠದ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳಿಗೆ ಈಗಾಗಲೇ 2 ಕೋಟಿ ಅನುದಾನ ನೀಡಲು ಮನವಿ ಮಾಡಲಾಗಿದ್ದು, ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳು ಅನುಮತಿ ನೀಡಲಿದ್ದಾರೆ ಎಂದು ಭರವಸೆ ನೀಡಿದರು.

ಮುಖ್ಯಮಂತ್ರಿಗಳ ಅನುದಾನ ಮಂಜೂರಾದ ನಂತರ ಸಾವಿರಾರು ಜನ ಸೇರಿ ಮಠದ ಬಳಿ ವಿಶೇಷ ಕರ‍್ಯಕ್ರಮ ಆಯೋಜಿಸಲಾಗುವುದು, ಇದನ್ನು ಪುಣ್ಯಕ್ಷೇತ್ರವಾಗಿ ಅಭಿವೃದ್ಧಿಪಡಿಸಲು ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಯೋಜನೆಗಳನ್ನು ತರಲು ಶ್ರಮಿಸುತ್ತಿರುವುದಾಗಿ ಸಚಿವರು ಇದೇ ಸಂರ‍್ಭದಲ್ಲಿ ಹೇಳಿದರು.

ಕರ‍್ಯಕ್ರಮದಲ್ಲಿ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್, ಸುಬ್ರಹ್ಮಣ್ಯ ಸ್ವಾಮಿ, ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ. ನವೀನ್ ಕಿರಣ್, ಮಂಜುನಾಥ್, ಕಾಳಿಂಗ ಸ್ವಾಮಿ, ಕುಮಾರ್, ಮುನಿರಾಜು, ದೇವಣ್ಣ, ರಾಜಣ್ಣ, ನಾರಾಯಣಸ್ವಾಮಿ, ಕೃಷ್ಣಮರ‍್ತಿ, ಆನಂದ್, ಆವುಲಕೊಂಡರಾಯಪ್ಪ ಸೇರಿದಂತೆ ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments