Sunday, May 5, 2024
spot_img
HomeChikballapurಮನೆ ಮನೆ ಸಮೀಕ್ಷೆ ಕರ‍್ಯ ಡಿಸೆಂಬರ್ 8 ರ ಒಳಗೆ ಪೂರ್ಣಗೊಳ್ಳಬೇಕು: ಜಿಲ್ಲಾಧಿಕಾರಿ ಎನ್.ಎಮ್.ನಾಗರಾಜ್

ಮನೆ ಮನೆ ಸಮೀಕ್ಷೆ ಕರ‍್ಯ ಡಿಸೆಂಬರ್ 8 ರ ಒಳಗೆ ಪೂರ್ಣಗೊಳ್ಳಬೇಕು: ಜಿಲ್ಲಾಧಿಕಾರಿ ಎನ್.ಎಮ್.ನಾಗರಾಜ್


ಪಾಲಾರ್ ಪತ್ರಿಕೆ | Palar Patrike

ಚಿಕ್ಕಬಳ್ಳಾಪುರ: ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ನಡೆಯುತ್ತಿರುವ ಮನೆ ಮನೆ ಸಮೀಕ್ಷೆ ಕರ‍್ಯ ಕಡ್ಡಾಯವಾಗಿ ಡಿಸೆಂಬರ್ ೮ ರೊಳಗೆ ಜಿಲ್ಲೆಯಲ್ಲಿ ಪರ‍್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎನ್.ಎಮ್.ನಾಗರಾಜ್ ಅವರು ಮತಗಟ್ಟೆ ಅಧಿಕಾರಿಗಳು ಮತ್ತು ಮತಗಟ್ಟೆ ಅಧಿಕಾರಿಗಳ ಮೇಲ್ವಿಚಾರಣ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ಅವರು ಬುಧವಾರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಮತಗಟ್ಟೆ ಅಧಿಕಾರಿಗಳು, ಮತಗಟ್ಟೆ ಅಧಿಕಾರಿಗಳ ಮೇಲ್ವಿಚಾರಕರು, ತಹಸೀಲ್ದಾರ್ ಳೊಂದಿಗೆ ಸಂವಾದ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿ ಮಾತನಾಡಿದರು.
ಮತದಾರರ ಪಟ್ಟಿ ಪರಿಷ್ಕರಣೆ, ನವ ಮತದಾರರ ನೋಂದಣಿ ಪ್ರಕ್ರಿಯೆ ಕೆಲಸಗಳನ್ನು ಪ್ರಥಮ ಆದ್ಯತೆಯ ಮೇಲೆ ಮಾಡಬೇಕು. ಪರಿಷ್ಕರಣೆ ಸಂಬಂಧ ಮನೆ ಮನೆ ಸಮೀಕ್ಷೆ ಕರ‍್ಯಕ್ಕೆ ಡಿಸೆಂಬರ್ ೮ ಕೊನೆಯ ದಿನವಾಗಿರುವುದರಿಂದ ಸ್ವೀಪ್ ಚಟುವಟಿಕೆಗಳನ್ನು ಚುರುಕುಗೊಳಿಸಬೇಕು. ಜನಸಂದಣಿ ಪ್ರದೇಶಗಳಲ್ಲಿ ಬೀದಿ ನಾಟಕ, ಕರಪತ್ರ ಹಂಚಿಕೆ, ಬಿತ್ತಿ ಪತ್ರಗಳ ಅಳವಡಿಕೆ ಮಾಡಬೇಕು. ಕಾಲೇಜುಗಳಲ್ಲಿನ ಯುವ ಮತದಾರರನ್ನು ಪ್ರೇರಣೆಗೊಳಿಸಲು ಕಾಲೇಜುಗಳಲ್ಲಿಯೇ ಜಾಗೃತಿ ಕರ‍್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮತದಾರ ಪಟ್ಟಿಯ ಪರಿಷ್ಕರಣೆಯ ಜೊತೆಗೆ ಮತದಾರ ಗುರುತಿನ ಚೀಟಿಯನ್ನು ಆಧಾರ್ ಸಂಖ್ಯೆಯೊಂದಿಗೆ ಸರ‍್ಪಡೆಯ ಕರ‍್ಯವು ನಡೆಯಬೇಕು. ಜಿಲ್ಲೆಯಲ್ಲಿ ಶೇ ೮೧ ರಷ್ಟು ಮತದಾರರು ಆಧಾರ್ ಗೆ ಜೋಡಣೆಯಾಗಿದ್ದು, ಬಾಕಿ ಇರುವ ಶೇ.೧೯ ರಷ್ಟು ಮತದಾರರನ್ನು ಜೋಡಣೆ ಮಾಡಬೇಕು ಎಂದು ವಿಸ್ತಾರವಾಗಿ ಜಿಲ್ಲಾಧಿಕಾರಿಗಳು ತಿಳಿಸಿಕೊಟ್ಟರು.
ಮಾಫಿ ಪ್ರಶ್ನೆಯೇ ಇಲ್ಲ: ಮತದಾರರ ಪಟ್ಟಿಯಲ್ಲಿ ಸಣ್ಣ ದೋಷವೂ ಇಲ್ಲದೆ ಪರಿಷ್ಕರಣೆ ಮಾಡುವುದು ಮತಗಟ್ಟೆ ಅಧಿಕಾರಿಗಳ (ಬಿ.ಎಲ್.ಓ) ಜವಾಬ್ದಾರಿ, ಮತಗಟ್ಟೆ ಅಧಿಕಾರಿಗಳು ಮಾಡುವ ಕರ‍್ಯಗಳನ್ನು ಮೇಲ್ವಿಚಾರಕರು ಮೇಲುಸ್ತುವಾರಿ ಮಾಡಿ ತಮ್ಮ ವ್ಯಾಪ್ತಿಯ ಶೇ ೨೦ ರಷ್ಟು ಮತಗಟ್ಟೆಗಳಿಗೆ ಮತಗಟ್ಟೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಸ್ವೀಪ್ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ಮರಣ ಪ್ರಮಾಣ ಪತ್ರ ಹಾಗೂ ಸೂಕ್ತ ದಾಖಲಾತಿಗಳನ್ನು ಪಡೆದು ಅಂತಹವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಬೇಕು. ಈ ಕರ‍್ಯಗಳಲ್ಲಿ ಲೋಪವೆಸಗಿದರೆ ಸರ‍್ಥಿಸಿಕೊಳ್ಳುವ ಪ್ರಶ್ನೆಯಾಗಲಿ, ಮಾಫಿ ಮಾಡುವ ಪ್ರಮೆಯವಾಗಲಿ ಸಾಧ್ಯವಿಲ್ಲ. ಯಾವುದೇ ಅಧಿಕಾರಿ ಮತ್ತು ಸಿಬ್ಬಂದಿ ಚುನಾವಣಾ ಕರ‍್ಯಗಳಲ್ಲಿ ಪರಿಷ್ಕರಣೆ ಕರ‍್ಯಗಳನ್ನು ಸರ‍್ಪಕವಾಗಿ ನರ‍್ವಹಿಸಲು ಖಡಕ್ ಸೂಚನೆಗಳನ್ನು ನೀಡಿದರು.
ಅನಧಿಕೃತ ವ್ಯಕ್ತಿಯ ಭಾಗಿಯಾಗುವಂತಿಲ್ಲ
ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಜಿಲ್ಲೆಯಲ್ಲಿ ನೇಮಕವಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹೊರತುಪಡಿಸಿ ಯಾವುದೇ ಅನಧಿಕೃತ ವ್ಯಕ್ತಿ, ಖಾಸಗಿ ವ್ಯಕ್ತಿಗಳು ಭಾಗಿಯಾಗುವಂತಿಲ್ಲ. ಈ ನಿಟ್ಟಿನಲ್ಲಿ ಹೆಚ್ಚಿನ ನಿಗಾವಹಿಸಲು ಸಂಬಂಧಪಟ್ಟ ಅಧಿಕಾರಿಗಳು ಎಚ್ಚರವಹಿಸಬೇಕು. ಸರ‍್ವಜನಿಕರು ಸಹ ಮಾಹಿತಿ ನೀಡುವಾಗ ಸುಳ್ಳು ಮಾಹಿತಿ ನೀಡುವಂತಿಲ್ಲ. ಸುಳ್ಳು ಮಾಹಿತಿ ನೀಡಿದಲ್ಲಿ ಜನಪ್ರತಿನಿಧಿ ಕಾಯ್ದೆಯ ಪ್ರಕಾರ ಶಿಕ್ಷರ‍್ಹವಾಗುತ್ತದೆ. ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಈ ಅಂಶವನ್ನು ಮತಗಟ್ಟೆ ಅಧಿಕಾರಿಗಳು ಸರ‍್ವಜನಿಕರಿಗೆ ತಿಳಿಸಿ ಸರ‍್ಪಕ ಮಾಹಿತಿ ಪಡೆಯಬೇಕು. ಮತದಾರ ಪಟ್ಟಿ ಪರಿಷ್ಕರಣೆ ಹಾಗೂ ನವ ಮತದಾರರ ನೋಂದಣಿ ಹಾಗೂ ತಿದ್ದುಪಡಿಗೆ ಡಿಸೆಂಬರ್ ೮ ಕೊನೆಯ ದಿನವಾಗಿರುವುದರಿಂದ ಕೂಡಲೇ ತಾವೆಲ್ಲರೂ ಆನ್ ಲೈನ್ ಮೂಲಕ ನೋಂದಣಿಯಾಗಲು ಅಥವಾ ಮತಗಟ್ಟೆ ಅಧಿಕಾರಿಗಳನ್ನು ಸಂರ‍್ಕಿಸಿ ನೋಂದಾಯಿಸಿಕೊಳ್ಳಲು ಜಿಲ್ಲೆಯ ಸಮಸ್ತ ನಾಗರಿಕರಲ್ಲಿ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಈ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕರ‍್ಯನರ‍್ವಹಕಾಧಿಕಾರಿ ಪಿ.ಶಿವಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್ ಸೇರಿದಂತೆ ಎಲ್ಲ ತಾಲ್ಲೂಕುಗಳ ತಹಸೀಲ್ದಾರ್ ಗಳು, ಪೌರಾಯುಕ್ತರು/ಮುಖ್ಯಾಧಿಕಾರಿಗಳು, ಮತಗಟ್ಟೆ ಅಧಿಕಾರಿಗಳ ಮೇಲ್ವಿಚಾರಕರು ಹಾಗೂ ಮತಗಟ್ಟೆ ಅಧಿಕಾರಿಗಳು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments