Sunday, May 5, 2024
spot_img
HomeChikballapurವಕೀಲರ ವೃತ್ತಿ ಉಜ್ವಲವಾಗಿರಲಿ: ನ್ಯಾ. ಕೆ.ಬಿ.ಶಿವಪ್ರಸಾದ್

ವಕೀಲರ ವೃತ್ತಿ ಉಜ್ವಲವಾಗಿರಲಿ: ನ್ಯಾ. ಕೆ.ಬಿ.ಶಿವಪ್ರಸಾದ್


ಪಾಲಾರ್ ಪತ್ರಿಕೆ | Palar Patrike

ಚಿಕ್ಕಬಳ್ಳಾಪುರ: ಸಂವಿಧಾನ ದಿನದಂದು ಕಾನೂನು ತರಗತಿ ಪ್ರಾರಂಭವಾಗುತ್ತಿರುವುದು ವಿದ್ಯರ‍್ಥಿಗಳ ಭವಿಷ್ಯದ ಶುಭ ಸೂಚಕ ಹಾಗೂ ಮುಂದಿನ ದಿನಗಳಲ್ಲಿ ನಿಮ್ಮ ವಕೀಲರ ವೃತ್ತಿ ಉಜ್ವಲವಾಗಿರಲಿ ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಕೆ.ಬಿ.ಶಿವಪ್ರಸಾದ್ ಅವರು ಹೇಳಿದರು.
ಅವರು ಶನಿವಾರ ನಗರದ ವಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಕೆಂಪೇಗೌಡ ಕಾನೂನು ಮಹಾವಿದ್ಯಾಲಯ ಕಾಲೇಜು ವತಿಯಿಂದ ಆಯೋಜಿಸಿದ್ದ “ಭಾರತ ಸಂವಿಧಾನ ದಿನಾಚರಣೆ”ಯನ್ನು ಹಾಗೂ ವಿದ್ಯರ‍್ಥಿಗಳ ತರಗತಿ ಪ್ರಾರಂಭೋತ್ಸವ ಕರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದ ರಚನೆಯಲ್ಲಿ ಕರುಡು ಸಮಿತಿಯ ಅಧ್ಯಕ್ಷಾರಾದ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಇದೇ ವಕೀಲರ ವೃತ್ತಿಯಲ್ಲಿದ್ದವರು. ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ವಕೀಲರು ಆಗಿದ್ದವರು. ಸಂವಿಧಾನಕ್ಕೆ ಏನಾದರೂ ದಕ್ಕೆ ಬರುವ ಸಂಭವಿದ್ದಾಗ ಅದರ ರಕ್ಷಣೆಯಲ್ಲಿ ವಕೀಲರೇ ಮುಂದಾಗಿರುತ್ತಾರೆ. ಒಬ್ಬ ರ‍್ಚಕರು ವೇದಾ ಎಷ್ಟೋ ಮುಖ್ಯವೋ ವಕೀಲರಿಗೆ ಸಂವಿಧಾನ ಅಷ್ಟೇ ಮುಖ್ಯ ವಕೀಲರ ವೃತ್ತಿಯಲ್ಲಿ ಕಕ್ಷಿದಾರರಿಗೆ ನ್ಯಾಯ ಒದಗಿಸಿಕೊಡುವ ಸಂವಿಧಾನಿಕ ರ‍್ತವ್ಯವಾಗಿರುತ್ತದೆ ಎಂದರು.
ವಿದ್ಯರ‍್ಥಿಗಳಿಗೆ ಸಂವಿಧಾನದ ಮುನ್ನುಡಿ ಪ್ರತಿಜ್ಞೆ ಮಾಡಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕರ‍್ಯರ‍್ಶಿಗಳಾದ ಲಕ್ಷ್ಮೀಕಾಂತ್ ಜೆ ಮಿಸ್ಕಿನ್ ರವರು ಇಂದಿನ ಕಾನೂನು ವಿದ್ಯರ‍್ಥಿಗಳೇ ಮುಂದಿನ ದಿನಗಳಲ್ಲಿ ವಕೀಲರುಗಳಾಗಿ ಕೆಲಸ ನರ‍್ವಹಿಸುವ ನೀವು ನ್ಯಾಯಾಲಯದ ಮೂಲ ಮಂತ್ರವಾದ ಸತ್ಯವೇ ಮೇವ ಜಯತೇ ಎಂಬ ಘೋಷವಾಕ್ಯದಂತೆ ರ‍್ಥಪರ‍್ಣವಾಗಿ ಕೆಲಸ ಮಾಡಬೇಕು. ಹಾಗೆಯೇ ನಾಗರೀಕತೆ, ತಾಂತ್ರಿಕತೆ ಅಭಿವೃದ್ಧಿ ಹೊಂದಿದಂತೆ ಹೊಸಹೊಸ ಅಪರಾಧಗಳು ಮೂಡಿಬರುತ್ತಿದ್ದು ಅವುಗಳನ್ನು ತಡೆಗಟ್ಟಲು ನಮ್ಮ ಕ್ರಮಗಳು ಕಾನೂನು ಅರಿವು ಅನಕ್ಷರಸ್ಥರಲ್ಲಿ ಮೂಡಿಸುವ ನಿಟ್ಟಿನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರವು ಅತೀ ಹೆಚ್ಚು ಕರ‍್ಯನರ‍್ವಹಿಸುತ್ತಿದ್ದು, ಕಾನೂನು ಸ್ವಯಂ ಸೇವಕರಾಗಿ ಕೆಲಸ ನರ‍್ವಹಿಸಲು ಪ್ರಾಧಿಕಾರ ಅವಕಾಶ ಮಾಡಿಕೊಡುತ್ತಿದ್ದು, ಕಾನೂನು ವಿದ್ಯರ‍್ಥಿಗಳಾದ ನೀವೂ ಈ ಕರ‍್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.
ವಕ್ಕಲಿಗರ ಸಂಘದ ಅಧ್ಯಕ್ಷರಾದ ಪಿ.ಎನ್.ಕೇಶವರೆಡ್ಡಿ ರವರು ಮಾತನಾಡಿ, ಕೆಂಪೇಗೌಡ ಕಾನೂನು ಕಾಲೇಜು ಸದಾ ಕಾನೂನು ಸೇವೆಗಳ ಪ್ರಾಧಿಕಾರದ ಜೊತೆ ಕರ‍್ಯನರ‍್ವಹಿಸುತ್ತಿದ್ದು, ವಿದ್ಯರ‍್ಥಿಗಳು ತರಗತಿ ಪ್ರಾರಂಭದ ಕರ‍್ಯಕ್ರಮಕ್ಕೆ ಆಗಮಿಸುವುದು ನಮಗೆ ತುಂಬಾ ಸಂತೋಷವಾಗಿದೆ ಎಂದರು.
ಹಳ್ಳಿಗಾಡಿನ ಕಟ್ಟಕಡೆ ವ್ಯಕ್ತಿಗೆ ಸಾಮಾಜಿಕ ನ್ಯಾಯ ದೊರಕಿಸುವ ಕರ‍್ಯಕ್ರಮದಲ್ಲಿ ನಮ್ಮ ಕಾನೂನು ಕಾಲೇಜುಗಳ ವಿದ್ಯರ‍್ಥಿಗಳು ಪ್ರಾಧಿಕಾರದ ಜೊತೆ ಸದಾ ಇರಬೇಕೆಂದು ತಿಳಿಸಿದರು.
ಇದೇವೇಳೆ ಕಾಲೇಜಿನ ವಿಶ್ವವಿದ್ಯಾಲಯ ಮಟ್ಟದ ಪ್ರಥಮ ರ‍್ಜೆ ತರ‍್ಗಡೆಯಾದ ವಿದ್ಯರ‍್ಥಿಗಳಿಗೆ ಸನ್ಮಾನ್ಯ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಈ ಸಂರ‍್ಭದಲ್ಲಿ ಕಾಲೇಜಿನ ಸಮಿತಿ ಅಧ್ಯಕ್ಷರಾದ ಮೋಹನ್, ಉಪಾಧ್ಯಕ್ಷರಾದ ಚನ್ನಪ್ಪರೆಡ್ಡಿ, ಪ್ರಾಂಶುಪಾಲರಾದ ಶೋಭಾ ಮತ್ತು ಭೋದಕ, ಭೋಧಕತೇರ ಸಿಬ್ಬಂದಿ ಸೇರಿದಂತೆ ವಿದ್ಯರ‍್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments