Sunday, May 5, 2024
spot_img
HomeChikballapurವೋಟ್‌ಬ್ಯಾಂಕ್ ಗಾಗಿ ಮೇಕೆದಾಟು ಪಾದಯಾತ್ರೆ: ರೈತಮೋರ್ಚಾ ಕಾರ್ಯಕಾರಿಣಿಯಲ್ಲಿ ಟೀಕೆ

ವೋಟ್‌ಬ್ಯಾಂಕ್ ಗಾಗಿ ಮೇಕೆದಾಟು ಪಾದಯಾತ್ರೆ: ರೈತಮೋರ್ಚಾ ಕಾರ್ಯಕಾರಿಣಿಯಲ್ಲಿ ಟೀಕೆ

ಚಿಕ್ಕಬಳ್ಳಾಪುರ: ಕಾಂಗ್ರೆಸ್‍ನಿAದ ಹಮ್ಮಿಕೊಂಡಿರುವುದು ಮೇಕೆದಾಟು ಪಾದಯಾತ್ರೆಯಲ್ಲ ಬದಲಿಗೆ ಕಾಂಗ್ರೆಸ್ಸಿನ ಮತ ಯಾತ್ರೆ ಹಾಗೂ ಪಾಪಗಳ ಪ್ರಾಯಶ್ಚಿತ ಯಾತ್ರೆ ಎಂದು ವಿಧಾನಪರಿಷತ್ ಸದಸ್ಯ ರವಿಕುಮಾರ್ ಟೀಕಿಸಿದ್ದಾರೆ.

ಚಿಕ್ಕಬಳ್ಳಾಪುರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿ ಸಭೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರಿಗೆ ಕೊರೋನಾ ಪಾಸಿಟಿವ್ ಆದ ಹಿನ್ನೆಲೆಯಲ್ಲಿ ಸಚಿವ ಸುಧಾಕರ್ ರವರು ಸಹ ಕ್ವಾರಂಟೈನ್‌ಗೆ ಒಳಗಾಗಿದ್ದರಿಂದ ಪ್ರಮುಖರು ಗೈರು ಆಗಿದ್ದರೂ ಕಾರ್ಯಕ್ರಮ ನಿಗದಿಯಂತೆ ನಡೆದಿದ್ದು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪ್ರಮುಖ ಪದಾಧಿಕಾರಿಗಳಿಗೆ ದಿನವಿಡೀ ಗೋಷ್ಠಿಗಳು ನಡೆದವು.

ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ  ವಿಧಾನಪರಿಷತ್ ಸದಸ್ಯ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯೋಜನೆಯನ್ನು ಅನುಷ್ಠಾನಕ್ಕೆ ತರುವುದನ್ನು ಬಿಟ್ಟು ವಿನಾಕಾರಣ ಕಾಲಹರಣ ಮಾಡಿದರು. ಈಗ ವೋಟ್ ಬ್ಯಾಂಕ್ ಗಾಗಿ ಮೇಕೆದಾಟು ಪಾದಯಾತ್ರೆಯನ್ನು ನಡೆಸುತ್ತಿದ್ದಾರೆ ಸಜ್ಜನರು ಆಗಿರುವ ಸಚಿವ ಗೋವಿಂದ್ ಕಾರಜೋಳ ಬಗ್ಗೆ ಕಾಂಗ್ರೆಸ್ ಮುಖಂಡರು ಏಕವಚನದಲ್ಲಿ ಮಾತಾಡಿರುವುದು ಖಂಡನೀಯವಾಗಿದೆ ಎಂದು ಕಿಡಿಕಾರಿದರು.

ಮೇಕೆದಾಟು ಯೊಜನೆ ಪ್ರಾರಂಭವಾಗಿದ್ದು ಕಾಂಗ್ರೆಸ್ ಸರ್ಕಾರವಿದ್ದಾಗ ಅಲ್ಲ, ನಮ್ಮ ಕಾಲದಲ್ಲಿ ಎಂದ ಅವರು ತಮಿಳುನಾಡಿನಲ್ಲಿ ಸ್ಟಾಲಿನ್‍ಗೆ ಸಹಕಾರ ನೀಡಿ ಸರ್ಕಾರ ಮಾಡಿದ್ದೀರಿ. ಈಗ ಅವರ ಮನೆಯ ಮುಂದೆ ಹೋಗಿ ಪ್ರತಿಭಟನೆ ನಡೆಸಿ ಎಂದು ಸವಾಲು ಹಾಕಿದರು.

ಪಾದಯಾತ್ರೆಯಲ್ಲಿ ಭಾಗವಹಿಸಿದವರು ಟೆಸ್ಟ್ ಮಾಡಿಸಿಕೊಳ್ಳಬೇಕು. ಶಿಸ್ತು, ಕಾಳಜಿ ಇದ್ದರೆ ಡಿ.ಕೆ. ಶಿವಕುಮಾರ್ ಅವರು ಸ್ವತಃ ಕೋವಿಡ್ ಟೆಸ್ಟ್‍ಗೆ ಒಳಪಡುತ್ತಾರೆ. ಇಲ್ಲವಾದರೆ ನಿಮ್ಮನ್ನು ಬೇಜಾವಬ್ದಾರಿತನದ ಅಧ್ಯಕ್ಷ ಅಂತ ಕರೆಯಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಅವರಿಗೆ ಕೋವಿಡ್ ಎಷ್ಟೇ ಹೆಚ್ಚಾದರೂ ಅದರ ಬಗ್ಗೆ ಯೋಚನೆ ಇಲ್ಲ. ಅವರಿಗೆ ತಮ್ಮ ಪಾದಯಾತ್ರೆ ಯಶಸ್ವಿ ಆಗುವುದಷ್ಟೇ ಮುಖ್ಯವಾಗಿದೆ. ಆದರೆ ಡಿ.ಕೆ. ಶಿವಕುಮಾರ್ ಇಂತಹ ಒಂದಲ್ಲ ನೂರು ಪಾದಯಾತ್ರೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅವರು ಮಾಡುತ್ತಿರುವ ಪಾದಯಾತ್ರೆ ಅತ್ಯಂತ ಬೇಜಾವ್ದಾರಿತನದಿಂದ ಕೂಡಿದೆ. ನಾವು ನಿಮ್ಮ ವಿರುದ್ಧ ಸಾವಿರಾರು ಜನರನ್ನು ಸೇರಿಸಿ ಪ್ರತಿಭಟನೆ ಮಾಡಬಹುದು. ಆದರೆ ನಮಗೆ ಜವಬ್ದಾರಿ ಇರುವುದರಿಂದ ಈ ರೀತಿ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.

ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಮಾತನಾಡಿ ಪ್ರಧಾನಿ ಮೋದಿಯವರು ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿಯಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ಕಾರ್ಯ ಮಾಡಿದ್ದಾರೆ. ಕಿಸಾನ್ ರೈಲು ಮೂಲಕ ಚಿಕ್ಕಬಳ್ಳಾಪುರ ರೈತರು ಬೆಳೆದ ಬೆಳೆಗಳು ದೆಹಲಿ ಮಾರುಕಟ್ಟೆ  ತಲುಪುವಂತೆ ಮಾಡಿದ್ದಾರೆ. ರೈತರಿಗೆ 48ಸಾವಿರ ಕೋಟಿ ರೂಪಾಯಿಗಳನ್ನು ದೇಶದ 8 ರಸಗೊಬ್ಬರ ತಯಾರಿಕೆ ಕಾರ್ಖಾನೆಗಳಿಗೆ ನೀಡಿ ರೈತರಿಗೆ ರಸಗೊಬ್ಬರ ಕೊರತೆಯಾಗದಂತೆ ಬಿಜೆಪಿ ಸರಕಾರ ನೆರವಿಗೆ ನಿಂತಿದೆ ಎಂದರು. ರೈತರ ಕೃಷಿಯನ್ನು  ಮಣ್ಣು ಮತ್ತು ನೀರು ಆರೋಗ್ಯ ಕಾಪಾಡುವ ಕೆಲಸವನ್ನು ಸರಕಾರ ಮಾಡುತ್ತಿದೆ. ಕೃಷಿ ಉಪಕರಣ, ವಿಜ್ಞಾನಿಗಳ ಸಲಹೆ ಇತ್ಯಾದಿ ಕೃಷಿ ಉತ್ಪಾದಕರ ಸಹಕಾರ ಸಂಘಗಳ ಮೂಲಕ ರೈತರಿಗೆ ತಲುಪುವಂತೆ ಮಾಡಲಾಗುತ್ತಿದೆ ಎಂದರು.

ಸಮಾರAಭದಲ್ಲಿ ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ ರಾಜಶೇಖರ್ , ರಾಜ್ಯ ಉಪಾಧ್ಯಕ್ಷ ಸಿವಿ ಲೋಕೇಶ್ ಗೌಡ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್  ಶರತ್ ಹೆಗ್ಗಡೆ ಮುಂತಾದವರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments