Friday, May 3, 2024
spot_img
HomeChikballapurನಾಟಕಕಲೆ ನಾಗರೀಕತೆಯ ಅಭಿವ್ಯಕ್ತಿಯ ಸಂಕೇತ : ಡಾ. ಕೋಡಿ ರಂಗಪ್ಪ

ನಾಟಕಕಲೆ ನಾಗರೀಕತೆಯ ಅಭಿವ್ಯಕ್ತಿಯ ಸಂಕೇತ : ಡಾ. ಕೋಡಿ ರಂಗಪ್ಪ

ಚಿಕ್ಕಬಳ್ಳಾಪುರ:  ನಾಟಕ ಕೇವಲ ಪ್ರದರ್ಶನ ಕಲೆ ಮಾತ್ರವಲ್ಲದೆ ಒಂದು ದೇಶದ ನಾಗರೀಕತೆಯನ್ನು ಕಟ್ಟುವ, ಬೆಳೆಸುವ ಶಕ್ತಿಯನ್ನು ಒಳಗೊಂಡ ಸಮರ್ಥ ಮಾಧ್ಯಮವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಕೋಡಿರಂಗಪ್ಪ ಅಭಿಪ್ರಾಯಪಟ್ಟರು.

ನಗರದ ಸರಕಾರಿ ಪ್ರಥಮ ಕಾಲೇಜಿನಲ್ಲಿ ಸೋಮವಾರ ನಡೆದ ಶಿವಮೊಗ್ಗ ರಂಗಾಯಣ ಪ್ರಸ್ತುತಿಯ ಕಾಲೇಜು ರಂಗೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾಲೇಜು ರಂಗೋತ್ಸವ ಎನ್ನುವುದು ಯುವ ಮನಸ್ಸುಗಳಲ್ಲಿ ಸೃಜನಶೀಲತೆಯನ್ನು ತುಂಬು ತನ್ಮೂಲಕ ಸಾಹಿತ್ಯ, ಸಂಸ್ಕೃತಿ ಬಗ್ಗೆ ಉತ್ತಮ ಅಭಿರುಚಿ ಮೂಡಿಸಲು ಸಾಧ್ಯವಾಗಲಿದೆ.ಇತಿಹಾಸವನ್ನು ಕೆದಕಿ ನೋಡಿದಾಗ ಗ್ರೀಕ್ ದೇಶದ ಮಹಾನ್ ಸಂಸ್ಕೃತಿಯನ್ನು ಕಟ್ಟಿದ್ದು ಇದೇ ನಾಟಕವೆಂಬ ಬಲಿಷ್ಟವಾದ ಮಾಧ್ಯಮವಾಗಿದೆ.ಕರ್ನಾಟಕದಲ್ಲಿ ನಾಟಕಗಳಿಗೆ ಬರವಿಲ್ಲ.ಹಾಗೆ ನೋಡಿದರೆ ಭಾರತದ ಗ್ರಾಮೀಣ ಸಂಸ್ಕೃತಿಯ ಕಣ್ಣು ತೆರೆಸಿದ್ದೇ ಪೌರಾಣಿಕ ನಾಟಕ ಪರಂಪರೆಯಾಗಿದೆ ಎಂದರು.

ಆಧುನಿಕತೆಯ ದಾಳಿಗೆ ಸಿಲುಕಿ ನಾಟಕ ಪರಂಪರೆ ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ಉನ್ನತ ಉದ್ದೇಶವನ್ನು ಇಟ್ಟುಕೊಂಡು ಸಮಾಜದಲ್ಲಿ ಉತ್ತಮ ಪರಂಪರೆಯನ್ನು ಬಿತ್ತುತ್ತಿರುವ ರಂಗಾಯಣ ಉತ್ತಮ ಕೆಲಸ ಮಾಡುತ್ತಿದೆ. ಚಿಕ್ಕಬಳ್ಳಾಪುರದಂತಹ ಗ್ರಾಮೀಣ ಪರಿಸರದಲ್ಲಿ ಕಾಲೇಜು ರಂಗೋತ್ಸವ ನಡೆಸುವ ಮೂಲಕ ಮರಳಿ ನಾಟಕ ಸಂಸ್ಕೃತಿಗೆ ಜೀವತುಂಬುವ ಕೆಲಸ ಮಾಡುತ್ತಿದೆ.ಇಂದು ಎಲ್ಲದಕ್ಕೂ ಮಿಗಿಲಾಗಿ ನಾಟಕ ಅಥವಾ ರಂಗಶಿಕ್ಷಣದ ಅಗತ್ಯವಿದೆ.ಕಳೆದುಹೋಗಿರುವ ನಮ್ಮ ಮೂಲ ಬೇರುಗಳನ್ನು ಇದರ ಮೂಲಕ ಮರಳಿ ಪಡೆಯಲು ಸಾಧ್ಯವಿದೆ.ರಾಘವಾಂಕನ ಕೃತಿಗೆ ಮೂಲಧಾತುವಾಗಿದ್ದು ಹರಿಶ್ಚಂದ್ರ ಮಹಾರಾಜನ ಸತ್ಯಪರಿಪಾಲನೆ.ಈಸತ್ಯ ಎನ್ನುವ ಜೀವಧಾತು ಶತಮಾನಗಳ ಮಾನವ ಸಂಕುಲವನ್ನು ಮುನ್ನಡೆಸಿರುವುದು ಸುಳ್ಳಲ್ಲ.ಹೀಗಾಗಿ ನಾಟಕ ಕೇವಲ ಮನರಂಜನೆ ಮಾತ್ರ ನೀಡುವುದಿಲ್ಲ.ನಿರ್ಜೀವಗೊಂಡ ಮನಸ್ಸುಗಳಲ್ಲಿ ಸಜೀವವೆಂಬ ಜೀವದ್ರವ್ಯವನ್ನು ತುಂಬಲಿದೆ ಎಂದು ಹೇಳಿದರು.

ಇದೇ ವೇಳೆ ಚಿಕ್ಕಬಳ್ಳಾಪುರ ಪದವಿ ಕಾಲೇಜು ವಿದ್ಯಾರ್ಥಿಗಳಿಂದ ಕುವೆಂಪು ಸಾಹಿತ್ಯ ಆಧಾರಿತ ನಾಟಕ ಹಿತೈಷಿ ಪ್ರದರ್ಶನ ಮಾಡಲಾಯಿತು.

ಇದೇ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ರವಿಕುಮಾರ್, ಪ್ರಾಂಶುಪಾಲ ಜಿ.ಡಿ.ಚಂದ್ರಯ್ಯ,ನಾಗರಾಜ್, ಷಫಿ ಅಹ್ಮದ್,ಶಿವಶಂಕರ್ ಕಾಲೇಜು ರಂಗೋತ್ಸವದ ಸಂಚಾಲಕ ದಿಲೀಪ್‌ಕುಮಾರ್ ಮತ್ತಿತರರು ಇದ್ದರು.

ಕುವೆಂಪು ಕಥೆ ಆಧಾರಿತ ಹಿತೈಷಿ ನಾಟಕವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಅಭಿನಯಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments