Tuesday, April 30, 2024
spot_img
HomeBangaloreದೇವನಹಳ್ಳಿ ಟೌನ್ 23 ವಾರ್ಡ್ ಗಳ ಸಮಗ್ರ ಅಭಿವೃದ್ದಿಗೆ ಹೆಚ್ಚಿನ ಒತ್ತನ್ನು ಕೊಡಲಾಗಿದೆ: ಶಾಸಕ ಎಲ್.ಎನ್.ನಾರಾಯಣಸ್ವಾಮಿ

ದೇವನಹಳ್ಳಿ ಟೌನ್ 23 ವಾರ್ಡ್ ಗಳ ಸಮಗ್ರ ಅಭಿವೃದ್ದಿಗೆ ಹೆಚ್ಚಿನ ಒತ್ತನ್ನು ಕೊಡಲಾಗಿದೆ: ಶಾಸಕ ಎಲ್.ಎನ್.ನಾರಾಯಣಸ್ವಾಮಿ

ದೇವನಹಳ್ಳಿ: ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ 180 ಕೋಟಿ ರೂ. ಅನುದಾನ ನೀಡಿತ್ತು. ಆದರೆ ಬಿಜೆಪಿ ಸರ್ಕಾರ ಆ ಅನುದಾನವನ್ನು ತಡೆಹಿಡಿದಿದೆ. ತಾಲೂಕಿನ ಅಭಿವೃದ್ದಿಗೆ ಸರ್ಕಾರದಿಂದ ಹೇಗೆ ಹಣವನ್ನು ತರಬೇಕು ಎಂದು ಆಲೋಚನೆ ಮಾಡಿ ತರಲಾಗುತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದ್ದೇನೆ.

ಎಂದು ಶಾಸಕ ಎಲ್.ಎನ್. ನಾರಾಯಣಸ್ವಾಮಿ ತಿಳಿಸಿದರು.

ತಾಲೂಕಿನ ಚಿಕ್ಕಸಣ್ಣೆ ಗೇಟ್ ಬಳಿಯಿರುವ ಎಸ್.ಎಸ್.ಬಿ. ಕನ್ವೆನ್ಷನ್ ಹಾಲ್ ನಲ್ಲಿ ದೇವನಹಳ್ಳಿ ಟೌನ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು. ಸರ್ಕಾರಕ್ಕೆ ಸಂದಾಯ ಮಾಡಬೇಕಾದ ಎಲ್ಲ ತೆರಿಗೆ ಪಾವತಿ ಮಾಡಿದ್ದೇನೆ. ಚುನಾವಣೆಯ ಅಫಿಡೆವಿಟ್ ನಲ್ಲಿಯೇ ಘೋಷಣೆ ಮಾಡಿಕೊಂಡಿದ್ದೇನೆ ಎಂದು ವಿರೋಧ ಪಕ್ಷದ ಆರೋಪಕ್ಕೆ ತಿರುಗೇಟು ನೀಡಿದರು.

ಕ್ಷೇತ್ರದ ಜನತೆ ಆರೋಗ್ಯ ಸಮಸ್ಯೆಯಿಂದ ಇರುವಾಗ ಸರ್ಕಾರ ಹಾಗೂ ವೈಯಕ್ತಿಕ ಹಣದಿಂದ ಸಾಕಷ್ಟು ಸಹಾಯ ಮಾಡಿದ್ದೇನೆ. ಟೋಲ್ ನಲ್ಲಿ ಜನರಿಗೆ ಹೆಚ್ಚುವರಿಯಾಗಿ ಸರ್ಕಾರಿ ಬಸ್ ಗಳಿಗೂ ಸಹ ತೆರಿಗೆ ವಿಧಿಸುತ್ತಿದ್ದರು. ಟೋಲ್ ಅಧಿಕಾರಿಗಳನ್ನು ಜನರ ಸಮಸ್ಯೆ ಸಂಬAಧ ಭೇಟಿ ಮಾಡಿದ್ದೇನೆ ಅದಕ್ಕೆ ವಿರೋಧ ಪಕ್ಷದವರು ಭ್ರಷ್ಟಾಚಾರದ ಬಣ್ಣ ಹಚ್ಚಿz್ದÁರೆ.

ಸರ್ಕಾರದ ಸೌಲಭ್ಯಗಳನ್ನು ಯಾವ ರೀತಿ ಕ್ಷೇತ್ರಕ್ಕೆ ತರಬೇಕು, ಪಾರಿವಾಳ ಬೆಟ್ಟ ಕಾಪಾಡಲು ಸದನದಲ್ಲಿ ಸಾಕಷ್ಟು ಹೋರಾಟ ಮಾಡಿ ಉಳಿಸಿದ್ದೇನೆ. ಬಹಳಷ್ಟು ಆಸೆ ಅಮಿಷಗಳು ಬಂದರೂ ಸಹ ಅದಕ್ಕೆ ಜಗ್ಗದೆ ಪಾರಿವಾಳ ಗುಟ್ಟ ಉಳಿಸಲೇಬೇಕು ಎಂದು ಪಣತೊಟ್ಟ. ವಿಷಯುಕ್ತ ಕಂಪನಿಗಳನ್ನು ಮುಚ್ಚಿಸಿದ್ದೇನೆ. ನೇರವಾಗಿ ಜನರು ಬಂದು ಸಮಸ್ಯೆ ತಿಳಿಸಿದ್ದಲ್ಲಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಪ್ರತಿ ವಾರ್ಡಿನಲ್ಲೂ ಮುಖಂಡರು ಮತ್ತು ಕಾರ್ಯಕರ್ತರು ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವಧಿಯಲ್ಲಿ ನೀಡಿದ ಅನುದಾನ ಮತ್ತು ಅಭಿವೃದ್ದಿ ಕಾರ್ಯಗಳ ಬಗ್ಗೆ ಟೌನ್ ಗೆ ಶಾಸಕರು ನೀಡಿರುವ ಅನುದಾನ ಮತ್ತು ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮನದಟ್ಟು ಮಾಡಬೇಕು.ಎಂದು ಹೇಳಿದರು.

ಈ ವೇಳೆಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಟೌನ್ ಜೆಡಿಎಸ್ ಅಧ್ಯಕ್ಷ ಮುನಿನಂಜಪ್ಪ ,ತಾಲೂಕು ಜೆಡಿಎಸ್ ಎಸ್.ಸಿ.ಘಟಕದ ಅಧ್ಯಕ್ಷ ವಿ.ಹನುಮಂತಪ್ಪ, ಮಾಜಿ ಪುರಸಭಾ ಅಧ್ಯಕ್ಷರಾದ ನರಸಿಂಹಮೂರ್ತಿ, ಪದ್ಮಾವತಮ್ಮ, ಮಾಜಿ ಪುರಸಭಾ ಸದಸ್ಯರಾದ ಕಾಳಪ್ಪನವರ ವೆಂಕಟೇಶ್, ಬಿ.ದೇವರಾಜ್, ಎಂ.ಕುಮಾರ್, ಬೇಕರಿ ಮಂಜುನಾಥ್, ಜಯರಾಮ್, ಶಶಿಕುಮಾರ್, ಪುರಸಭಾ ಸ್ಥಾಯಿಸಮಿತಿ ಮಾಜಿ ಅಧ್ಯಕ್ಷ ಎಸ್.ನಾಗೇಶ್, ಟೌನ್ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸಾಯಿಕುಮಾರ್ ಬಾಬು, ಮುಖಂಡರಾದ ಬೂದಿಹಾಳ ಕುಮಾರ್, ಡಾ.ಮೂರ್ತಿ, ಸಿ.ಬಿ.ರಾಜು, ಬಿ.ವಿ.ನಾಗರಾಜು, ಪಿ.ರವಿಕುಮಾರ್,

ಬಿ.ವಿ.ಕೃಷ್ಣ ರೆಡ್ಡಿ, ಚಂದ್ರಣ್ಣ, ಶ್ರೀನಿವಾಸï, ಗೋಪಾಲï, ಸುರೇಶï, ನಟರಾಜï, ನಾಗೇಶ್ ಬಾಬು, ಮಂಜುನಾಥï, ಸುಬ್ರಹ್ಮಣ್ಯ, ಕೃಷ್ಣವೇಣಿ, ವಿಜಯ್ ಕುಮಾರ್, ರಘುಪತಿ, ಲಕ್ಷ್ಮೀನಾರಾಯಣ್(ಲಚ್ಚಿ) ಹಾಗೂ ಪುರಸಭಾ ಸದಸ್ಯರು, ಪಕ್ಷದ ಪದಾಧಿಕಾರಿಗಳು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments