Friday, April 26, 2024
spot_img
HomeBangaloreಭಾರತ ಮಾತೆಯ ಮಡಿಲಲ್ಲಿ ಹುಟ್ಟಿ ಭಾರತಾಂಭೆಯ ಸೇವೆ ಸಲ್ಲಿಸುತ್ತಿರುವುದೇ ನನ್ನ ಪೂರ್ವಜನ್ಮದ ಪುಣ್ಯ-ಭಾರತೀಯ ಸೇನೆಯ ಲೆಫ್ಟಿನೆಂಟ್...

ಭಾರತ ಮಾತೆಯ ಮಡಿಲಲ್ಲಿ ಹುಟ್ಟಿ ಭಾರತಾಂಭೆಯ ಸೇವೆ ಸಲ್ಲಿಸುತ್ತಿರುವುದೇ ನನ್ನ ಪೂರ್ವಜನ್ಮದ ಪುಣ್ಯ-ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಶ್ಯಾಂ ಪ್ರಸಾದ್

ದೇವನಹಳ್ಳಿ: ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ತನ್ನ ತಂದೆ ತಾಯಿಗೆ ನೀಡುವ ಪ್ರೀತಿ ಗೌರವ ಅಭಿಮಾನದಷ್ಟೇ ದೇಶಕ್ಕೂ ನೀಡಬೇಕು.ದೇಶ ಮೊದಲು, ದೇಶ ಉಳಿದರೆ ನಾವು ಎಂಬ ದ್ಯೇಯದೊಂದಿಗೆ ಬದುಕಿದಾಗ ಮಾತ್ರ ದೇಶವನ್ನು ಕಾಪಾಡಿಕೊಳ್ಳಲು ಸಾಧ್ಯ. ಭಾರತ ಮಾತೆಯ ಮಡಿಲಲ್ಲಿ ಹುಟ್ಟಿ ಭಾರತಾಂಭೆಯ ಸೇವೆ ಸಲ್ಲಿಸುತ್ತಿರುವುದೇ ನನ್ನ ಪೂರ್ವಜನ್ಮದ ಪುಣ್ಯ ಎಂದು ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಶ್ಯಾಂ ಪ್ರಸಾದ್ ತಿಳಿಸಿದರು.

ತಾಲೂಕಿನ ಕನ್ನಮಂಗಲ ಗ್ರಾಮದಲ್ಲಿ ಬಿ.ಕೆ.ಎಸ್ ಪ್ರತಿಷ್ಠಾನದ ವತಿಯಿಂದ ಪ್ರತಿಷ್ಠಾನದ ಕಚೇರಿಯಲ್ಲಿ ಏರ್ಪಡಿಸಿದ್ದ ಯೋಧರಿಗೆ ಸನ್ಮಾನ ಮತ್ತು ಉಚಿತ ಇ-ಶ್ರಮ್ ಗುರುತಿನ ಚೀಟಿ ನೊಂದಣಿ ಹಾಗೂ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಬಿಕೆಎಸ್ ಪ್ರತಿಷ್ಠಾನದ ಪದಾಧಿಕಾರಿಗಳು ಹಾಗೂ ಸ್ವಯಂ ಸೇವಕರು ಜನರಿಗೆ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸುತ್ತಾ ತಮ್ಮ ಬಿಡುವಿನ ವೇಳೆಯಲ್ಲಿ ಕಷ್ಟದಲ್ಲಿರುವವರಿಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ಸಂತೋಷವಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಅಂತ ನಾವು ಭಾವಿಸಿದ್ದೇವೆ. ಆದರೆ ಪ್ರಜೆಗಳು ಏಕ್ ದಿನ್ ಕಾ ಸುಲ್ತಾನ್ ಎಂಬAತೆ ಮತ ಹಾಕುವವರೆಗೆ ಮಾತ್ರ ಪ್ರಭುಗಳಾಗಿದ್ದು ಮತ ಹಾಕಿದ ನಂತರ ಗೆದ್ದವರು ಅವರನ್ನು ಗುಲಾಮರನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಯಾಕೆಂದರೆ ಮತದಾರರು ತಮ್ಮ ಅಮೂಲ್ಯವಾದ ಮತ ಚಲಾಯಿಸಲು ಎಲ್ಲಿಯವರೆಗೆ ಹಣ ಆಮಿಷಗಳಿಗೆ ಒಳಗಾಗುತ್ತಾರೋ ಅಲ್ಲಿಯವರೆಗೆ ಮುಂದಾಲೋಚನೆ ಮತ್ತು ಅಭಿವೃದ್ದಿ ಪರವಾದ ಒಳ್ಳೆಯ ಜನನಾಯಕರನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಇದರಿಂದ ಸರ್ಕಾರದ ಯೋಜನೆಗಳು ಅಧಿಕಾರ ಇರುವವರ ಸಂಬAಧಿಕರು ಹಾಗೂ ಹಿಂಬಾಲಕರಿಗೆ ಮಾತ್ರ ಸಿಗುವಂತಾಗುತ್ತಿದ್ದು ತಾರತಮ್ಯ ಹೆಚ್ಚಾಗಿ ಬಡವರು ಬಡವರಾಗೆ ಉಳಿಯುಂತಾಗಿ ದೇಶ ಅಭಿವೃದ್ದಿ ಕಾಣಲು ಸಾದ್ಯವಿಲ್ಲ. ಇನ್ನು ಮುಂದಾದರೂ ಜನ ಎಚ್ಚೆತ್ತುಕೊಂಡು ಮತ ಚಲಾಯಿಸಲು ಹಣ ಪಡೆಯದೇ ಮತ ಚಲಾಯಿಸಿ ಉತ್ತಮ ನಾಯಕರನ್ನು ಆಯ್ಕೆ ಮಾಡಿಕೊಳ್ಳುವಂತಾಗಲಿ ಎಂದು ಆಶಿಸಿದರು.

ಬಿ.ಕೆ.ಎಸ್ ಪ್ರತಿಷ್ಠಾನದ ಅಧ್ಯಕ್ಷ ಬಿ.ಕೆ.ಶಿವಪ್ಪ ಮಾತನಾಡಿ ನಮ್ಮೆಲ್ಲರ ನಿರಾಳ ನಿದ್ದೆಗೆ, ನೆಮ್ಮದಿಯ ಬದುಕಿಗೆ ಕಾರಣರಾದವರು,ಯುದ್ಧಾತಂಕಗಳ ನಡುವೆಯೇ ಭರವಸೆಯ ಬೆಳಕಾಗಿ ನಿಂತವರು, ದೇಶ ಪ್ರೇಮವೊಂದೇ ಅಲ್ಲ, ಅತ್ಯಂತ ಗಟ್ಟಿ ಗುಂಡಿಗೆಯ ಅಸಲಿ ಹೀರೋಗಳು ನಮ್ಮ ಈ ಸೈನಿಕರು. ಅತ್ಯಂತ ಸಂಕಷ್ಟದಲ್ಲಿ ನಮಗೆ ನೆನಪಾಗುವ ಮೂವರೆಂದರೆ, ದೇವರು, ವೈದ್ಯರು ಮತ್ತು ಸೈನಿಕರು. ಆದರೆ, ಒಮ್ಮೆ ನೋವು ನೀಗಿದರೆ, ರೋಗ ವಾಸಿಯಾದರೆ, ಯುದ್ಧ ಕಳೆದರೆ ಇರ‍್ಯಾರೂ ನೆನಪಲ್ಲಿರುವುದಿಲ್ಲ. ಸೈನಿಕರದ್ದೂ ಅಂಥ ಥ್ಯಾಂಕ್‌ಲೆಸ್ ಜಾಬ್. ಯುದ್ಧ ಕಾಲದಲ್ಲಿ ಅವರನ್ನು ಮಹಾ ಸಾಹಸಿಗಳಂತೆ ವಿಜೃಂಭಿಸಿ, ಯುದ್ಧೋನ್ಮಾದವನ್ನು ಸೃಷ್ಟಿಸಿ ಗಡಿಗೆ ಕಳುಹಿಸಿ ನಾವು ಟೀವಿಗಳ ಮುಂದೆ ಕುಳಿತು ‘ಏರ್ ಶೋ’ ನೋಡುತ್ತೇವೆ. ಎಂದರು.

ಈ ವೇಳೆಯಲ್ಲಿ ಬಿ.ಕೆ.ಎಸ್ ಪ್ರತಿಷ್ಠಾನದ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಅನುರಾಧ ಅಶೋಕ್, ಕನ್ನಮಂಗಲ ಗ್ರಾಮದ ಹಿರಿಯ ಮುಖಂಡರಾದ ಶ್ರೀನಿವಾಸ್, ಕೃಷ್ಣಪ್ಪ, ಶಂಕರಪ್ಪ, ಭಾರತಮ್ಮ, ಶೈಲಜಾ, ಆಂಜಿನಮ್ಮ, ನಂದ, ಅನಿತಾ, ಸುಮಾ, ಚಂದ್ರಕಲಾ, ದೀಪ, ರತ್ನಮ್ಮ, ಸರೋಜಮ್ಮ, ಕಾಮಾಕ್ಷಿ, ಅನುಷಾ, ಮಂಜಜುಳಾ, ನೀಲಾ, ಹೇಮಾ, ಶ್ರುತಿ, ಮಮತಾ, ಕುಸುಮ, ಬಿ.ಕೆ.ಎಸ್. ಪ್ರತಿಷ್ಠಾನದ ವಿಜಯಪುರ ನಗರ ಉಸ್ತುವಾರಿ ಪ್ರಕಾಶ್, ಅರ್ಜುನ್ ಮತ್ತಿತರರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments