Tuesday, April 30, 2024
spot_img
HomeBangalore Ruralಜಿಲ್ಲಾಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟ

ಜಿಲ್ಲಾಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟ

ಪಾಲಾರ್ ಪತ್ರಿಕೆ | Palar Pathrike

ದೇವನಹಳ್ಳಿ/ ದೊಡ್ಡಬಳ್ಳಾಪುರ: ದೈಹಿಕ ಮತ್ತು ಮಾನಸಿಕ ಒತ್ತಡಗಳಿಂದ ದೂರ ಉಳಿಯಬೇಕಾದರೆ ಕ್ರೀಡೆಗಳು ಬಹಳಷ್ಟು ಸಹಕಾರಿಯಾಗಿವೆ. ಪ್ರತಿಯೊಬ್ಬರು ಒಂದಿಷ್ಟು ತಾಸು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಟೌನಿನಲ್ಲಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ಜಿಲ್ಲಾಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದು. ಸರಕಾರಿ ಕೆಲಸ ಸಿಗಬೇಕೆಂಬುವುದು ಪ್ರತಿಯೊಬ್ಬ ತಂದೆ ತಾಯಿಯವರ ಆಸೆಯಾಗಿರುತ್ತದೆ. ಪೋಷಕರು ನಮ್ಮ ಮಕ್ಕಳು ಸರಕಾರಿ ಅಧಿಕಾರಿಗಳಾಗಬೇಕೆಂದು ಆತುರೆಯುತ್ತಾರೆ. ನಾವುಗಳು ಸರಕಾರಿ ಹುದ್ದೆಯಲ್ಲಿರುವುದು ಅಭಿನಂದನಾರ್ಹವಾಗಿದೆ. ಕೆಲಸ ಒತ್ತಡದ ಮಧ್ಯೆ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದಿಲ್ಲ. ಚುನಾವಣೆಗಳು ಸಮೀಪಿಸಿದಾಗ ರಾತ್ರಿ ಹಗಲು ಎನ್ನದೆ ದುಡಿಯುತ್ತಾರೆ. ವಿಶೇಷವಾಗಿ ಮಹಿಳೆಯರು ಒಂದು ದಿನವೂ ಬಿಡುವು ಕೇಳಿದ್ದೇ ಕಂಡಿಲ್ಲ. ಏನೇ ವೈಯಕ್ತಿಕ ಸಮಸ್ಯೆಗಳಿದ್ದರೂ ಸಹ ಕೆಲಸಕ್ಕೆ ನಿಗದಿತ ಸಮಯದಲ್ಲಿ ಹಾಜರಾಗಿ ಕೆಲಸ ನಿರ್ವಹಿಸುತ್ತಾರೆ. ಪುರುಷರು ಸಹ ನಿರ್ವಹಿಸುತ್ತಾರೆ. ತಾರತಮ್ಯ ಮಾಡುತ್ತಿಲ್ಲ. ಮನೆ, ಮಕ್ಕಳು ಮತ್ತು ಗಂಡನ ಜವಾಬ್ದಾರಿಗಳ ನಡುವೆಯೂ ಸರಕಾರಿ ಕೆಲಸವನ್ನು ಪ್ರಾಮಾಣಿಕವಾಗಿ ನಿಭಾಯಿಸುವುದು ಶ್ಲಾಘನೀಯವಾದದ್ದು, ದಿನದಲ್ಲಿ ಒಂದು ತಾಸಾದರೂ ಯೋಗ, ನಡಿಗೆ ಇತರೆ ದೈಹಿಕ ಶ್ರಮ ಪಟ್ಟರೆ, ಆರೋಗ್ಯ ಸಮಸ್ಯೆಗಳು ಬರುವುದಿಲ್ಲ ಎಂದು ಸಲಹೆ ಮಾಡಿದರು.

ಕ್ರೀಡಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಮತ್ತು ಹೊಸಕೋಟೆ ಸರಕಾರಿ ನೌಕರರು ತಾಲೂಕುಮಟ್ಟದಿಂದ ಆಯ್ಕೆಯಾಗಿ ಕ್ರೀಡಾ ಕೂಟದಲ್ಲಿ ಭಾಗಿಯಾಗಿದ್ದರು. ಭಾಗಿಯಾಗಿದ್ದ ಕ್ರೀಡಾಪಟುಗಳಿಗೆ ಜಿಲ್ಲಾಧಿಕಾರಿ ಆರ್.ಲತಾ, ವೆಂಕಟರಮಣಯ್ಯ ಹಾಗೂ ಜಿಲ್ಲಾಮಟ್ಟದ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ಶುಭಕೋರಿದರು. ನಂತರ ಬಲೂನ್‌ಗಳನ್ನು ಗಗನಕ್ಕೆ ಹಾರಿಸುವುದರ, ಕ್ರೀಡಾ ಪ್ರತಿಜ್ಞೆಯ ಭೋದನೆ ಮತ್ತು ಕ್ರೀಡಜ್ಯೋತಿಯನ್ನು ಸ್ವೀಕರಿಸುವುದರ ಮೂಲಕ ಶಾಸಕ ವೆಂಕಟರಮಣಯ್ಯ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಕೋಟ್ ೧
ಸರಕಾರಿ ಕೆಲಸದಲ್ಲಿ ಮೇಲಾಧಿಕಾರಿಗಳ, ಜನಪ್ರತಿನಿಧಿಗಳ ಒತ್ತಡಗಳ ನಡುವೆ ಸರಕಾರಿ ನೌಕರರು ಕೆಲಸ ಮಾಡುತ್ತೀರಿ. ಇಂತಹ ಕ್ರೀಡೆಗಳಿಂದ ಮಾನಸಿಕ ಒತ್ತಡಗಳಿಂದ ಹೊರಬಂದು ದೈಹಿಕ ಆರೋಗ್ಯಕರ ಸದೃಢತೆಯನ್ನು ಹೊಂದುವAತೆ ಆಗುತ್ತದೆ. ಒತ್ತಡಗಳ ಮಧ್ಯೆ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಹೇಳಿದರು.

  • ವೆಂಕಟರಮಣ್ಯ | ಶಾಸಕ, ದೊಡ್ಡಬಳ್ಳಾಪುರ ವಿ.ಸಭಾ ಕ್ಷೇತ್ರ

ಇದೇ ಸಂದರ್ಭದಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ಎಚ್.ಬಾಲಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗಾಧರಪ್ಪ, ನಿಗಮ ಮಂಡಳಿ ಅಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ, ಖಜಾಂಚಿ ಮುಜಾಮಿಲ್, ಯುವ ಸಬಲೀಕರಣ ಮತ್ತು ಕ್ರಿಡಾ ಇಲಾಖೆ ಉಪನಿರ್ದೇಶಕಿ ಗೀತಾ, ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಅರುಳ್ ಸಂತೋಷ್, ತಹಶೀಲ್ದಾರ್ ಮೋಹನ್‌ಕುಮಾರಿ, ತಾಲೂಕು ಅಧ್ಯಕ್ಷರುಗಳಾದ ನರಸಿಂಹಮೂರ್ತಿ, ವಾಸು, ಮುನಿಶಾಮಯ್ಯ, ಪೊಲೀಸ್ ಇಲಾಖಾಧಿಕಾರಿಗಳು, ಸರಕಾರಿ ನೌಕರರು ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments