Friday, May 3, 2024
spot_img
HomeBangaloreಬೆಂಗಳೂರು ದಕ್ಷಿಣ ವಲಯದಲ್ಲಿ 4 ಕೋವಿಡ್ ಕೇರ್ ಸೆಂಟರ್‌ಗಳನ್ನು ದತ್ತು ಸ್ವೀಕಾರ ಮಾಡಿದ ''ಮೈಂಡ್‌ಸೆಟ್ ಕನ್ಸಲ್ಟಿಂಗ್''

ಬೆಂಗಳೂರು ದಕ್ಷಿಣ ವಲಯದಲ್ಲಿ 4 ಕೋವಿಡ್ ಕೇರ್ ಸೆಂಟರ್‌ಗಳನ್ನು ದತ್ತು ಸ್ವೀಕಾರ ಮಾಡಿದ ”ಮೈಂಡ್‌ಸೆಟ್ ಕನ್ಸಲ್ಟಿಂಗ್”

ಬೆಂಗಳೂರು ದಕ್ಷಿಣ ವಲಯದಲ್ಲಿ 4 ಕೋವಿಡ್ ಕೇರ್ ಸೆಂಟರ್‌ಗಳನ್ನು ಟ್ರೆಕ್‌ನೋಮಾಡ್ಸ್ ಫೌಂಡೇಶನ್, ಸೂರ್ಯ ಫೌಂಡೇಶನ್, ಮಂತ್ರ4 ಚೇಂಜ್ ಸಹಯೋಗದೊಂದಿಗೆ ಮೈಂಡ್‌ಸೆಟ್ ಕನ್ಸಲ್ಟಿಂಗ್ ಸಂಸ್ಥೆ  ಒಂದು ತಿಂಗಳ ಕಾಲ ದತ್ತು ಸ್ವೀಕಾರ ಮಾಡಿದೆ.

ಫೇಸ್ ಮಾಸ್ಕ್, ಫೇಸ್ ಶೀಲ್ಡ್‌, ಸ್ಯಾನಿಟೈಸರ್, ಹಾಗೂ ವಾರ್ ರೂಮ್, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಮತ್ತು ಎಲ್ಲಾ ರೋಗಿಗಗಳಿಗೆ ಒಂದು ತಿಂಗಳ ಆಹಾರವನ್ನು ಒದಗಿರುವ ಯೋಜನೆಗೆ ವಿಲ್ಸನ್ ಗಾರ್ಡನ್ ಹೆರಿಗೆ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಾಲನೆ ನೀಡಲಾಯಿತು.

ಬಿಬಿಎಂಪಿ ದಕ್ಷಿಣ ವಲಯ ಆರೋಗ್ಯಾಧಿಕಾರಿ ಶಿವಕುಮಾರ್, ಮೈಂಡ್‌ಸೆಟ್ ಕನ್ಸಲ್ಟಿಂಗ್‌ನ ಭಾರ್ಗವಿ, ಮೇಘನಾ ಮತ್ತು ಭರತ್ ಮತ್ತು ಇತರ ಸ್ವಯಂಸೇವಕರು ಉಪಸ್ಥಿತರಿದ್ದರು.

ಚಿಕಿತ್ಸಾ ಕೇಂದ್ರಗಳಲ್ಲಿ ಕೋವಿಡ್-19 ಸೋಂಕಿತ ರೋಗಿಗಳಿಗೆ ಮೈಂಡ್‌ಸೆಟ್ ಕನ್ಸಲ್ಟಿಂಗ್, ಟ್ರೆಕ್‌ನೋಮಾಡ್ಸ್ ಫೌಂಡೇಶನ್, ಸೂರ್ಯ ಫೌಂಡೇಶನ್, ಮಂತ್ರ4 ಚೇಂಜ್ ಮೂಲಕ ಔಷಧಿಗಳು, ಸ್ಯಾನಿಟೈಸರ್ ಮತ್ತು ಆಹಾರವನ್ನು ಒಂದು ತಿಂಗಳವರೆಗೆ ಉಚಿತವಾಗಿ ನೀಡಲಾಗುತ್ತದೆ.

ಮೈಂಡ್‌ಸೆಟ್ ಕನ್ಸಲ್ಟಿಂಗ್ 300 ಲೀಟರ್ ಸ್ಯಾನಿಟೈಸರ್, 1000 ಎನ್-95 ಮಾಸ್ಕ್‌ಗಳು, 10,000 ಮೂರು ಲೇಯರ್ ಮಾಸ್ಕ್‌ಗಳು, 300 ಪಿಪಿಇ ಕಿಟ್‌ಗಳು, 500 ಗ್ಲೌಸ್, 200-ಬೆಡ್ ಶೀಟ್‌ಗಳು ಮತ್ತು ದಿಂಬಿನ ಕವರ್‌ಗಳನ್ನು ದಾನವಾಗಿ ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments