Sunday, May 5, 2024
spot_img
HomeChikballapurಮತದಾನ ಸಂವಿಧಾನಬದ್ಧ ಹಕ್ಕು: ಜಿಲ್ಲಾಧಿಕಾರಿ ಆರ್.ಲತಾ

ಮತದಾನ ಸಂವಿಧಾನಬದ್ಧ ಹಕ್ಕು: ಜಿಲ್ಲಾಧಿಕಾರಿ ಆರ್.ಲತಾ

ಚಿಕ್ಕಬಳ್ಳಾಪುರ: “ಮತದಾನ”  ಸಂವಿಧಾನ ಬದ್ಧ ಹಕ್ಕಾಗಿದ್ದು, 18 ವರ್ಷ ಮೇಲ್ಪಟ್ಟ ಅರ್ಹ ಮತದಾರರು ತಮ್ಮ ಹಕ್ಕನ್ನು ಜವಬ್ದಾರಿಯುತವಾಗಿ ಚಲಾಯಿಸಬೇಕು. ಯಾರೋಬ್ಬರು ಮತದಾನದ ಪರಮೋಚ್ಛ ಅಧಿಕಾರದಿಂದ ವಂಚಿತರಾಗಬಾರದು ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದರು. 

ಅವರು ಮಂಗಳವಾರ ಜಿಲ್ಲಾಪಂಚಾಯ್ತಿಯ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಮತದಾನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ, ತಂತ್ರಜ್ಞಾನ ಬೆಳೆದಂತೆ ನಾವು ಅಭಿವೃದ್ಧಿಗೊಳ್ಳಬೇಕು ಹಾಗೂ ನೂತನ ತಂತ್ರಜ್ಞಾನಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕು. ಈ ಉದ್ದೇಶದಿಂದ ಅರ್ಹರು ವೋಟರ್ ಹೆಲ್ಪ ಲೈನ್ (VOTER HELPLINE) ಮೊಬೈಲ್ ಆಪ್ ಮೂಲಕ ನೋಂದಣಿಯಾಗಿ ಮತದಾರರ ಪಟ್ಟಿ ಸೇರ್ಪಡೆಯಾಗಬಹುದು ಹಾಗೂ ಮತದಾನದ ಮಹತ್ವ ಕುರಿತ ಹೆಚ್ಚಿನ ಮಾಹಿತಿಗಳನ್ನು ಆಪ್ ನಿಂದ ಪಡೆದುಕೊಳ್ಳಬಹುದು ಎಂದು ಹೇಳಿದರು. 

“ಚುನಾವಣೆಗಳನ್ನು ಒಳಗೊಳ್ಳುವ ಸುಗಮ ಮತ್ತು ಭಾಗವಹಿಸುವಂತೆ ಮಾಡುವುದು” 12 ನೇ ರಾಷ್ಟ್ರೀಯ ಮತದಾನ ದಿನಾಚರಣೆಯ ಘೋಷವಾಕ್ಯವಾಗಿದೆ. ಚುನಾವಣಾ ಆಯೋಗ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯು ಜಿಲ್ಲೆಯಲ್ಲಿ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳ ಮೂಲಕ ಮತದಾನ ಹಕ್ಕು ಮತ್ತು ಮಹತ್ವದ ಕುರಿತು ನಗರದ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು. 

ಮತದಾನ ದಿನ ಎಂಬುದು ಒಂದು ಹಬ್ಬವಾಗಿದ್ದು, ಇಂದು ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚು ಮತದಾನವಾಗುತ್ತಿದೆ. ವಿದ್ಯಾವಂತರು ಮತದಾನದ ಹಕ್ಕು ಹಾಗೂ ಮಹತ್ವವನ್ನು ಇತರರಿಗೆ ತಿಳಿ ಹೇಳಬೇಕು. ಜೊತೆಗೆ ಪ್ರತಿಯೊಬ್ಬರೂ ಸಹ ತನ್ನ ಹಕ್ಕಿನ ಜವಬ್ದಾರಿಯನ್ನು ನಿಭಾಯಿಸುವ ಮನೋಭಾವ ಬೆಳೆಸಿಕೊಂಡು ಹೊಣೆಗಾರಿಕೆಯನ್ನು ಅರಿತಾಗ ಮಾತ್ರ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯ ಎಂದು ಹೇಳಿದರು. 

ಜಿಲ್ಲಾಧಿಕಾರಿಗಳಿಂದ ಅಧಿಕಾರಿಗಳಿಗೆ ಅಭಿನಂದನೆ

ಮತದಾರರ ಪಟ್ಟಿ ಸೇರ್ಪಡೆ ಹಾಗೂ ತಿದ್ದುಪಡಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಪ್ರತಿ ವರ್ಷದಂತೆ ಈ ವರ್ಷವು ನಿರ್ವಹಿಸಿ ಮತದಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಕ್ಕೆ ಹಾಗೂ ಎಲೆಕ್ಟ್ರಾಲ್(Electoral)ಹೆಲ್ತ್  ಪಟ್ಟಿಯಲ್ಲಿ  ಜಿಲ್ಲೆ ಮೊದಲ ಸ್ಥಾನ  ಪಡೆದಿರುವುದಕ್ಕೆ ರಾಜ್ಯ ಚುನಾವಣಾ  ಆಯೋಗದಿಂದ ಜಿಲ್ಲೆಗೆ ಉತ್ತಮ ಪ್ರಶಂಸೆ ದೊರೆತಿದೆ ಎಂದರು. 

ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮತದಾರರ ಸಾಕ್ಷರತಾ ಸಂಘದ (ಇ.ಎಲ್.ಸಿ) ಮೂಲಕ ಜಿಲ್ಲೆಯ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮತದಾನದ ಪ್ರಕ್ರಿಯೆ, ಅದರ ಉಪಯೋಗ, ಚುನಾವಣಾ ಪಾಲ್ಗೊಳ್ಳುವಿಕೆ ಹಾಗೂ ಹಕ್ಕನ್ನು ಚಲಾಯಿಸುವ ಕುರಿತು ಅರಿವು ಮೂಡಿಸಲಾಗುತ್ತಿದೆ. ಇದರ ಮುಖ್ಯ ಉದ್ದೇಶ 18 ವರ್ಷದ ನಂತರ ಸ್ವ ಇಚ್ಚೆಯಿಂದ ಪ್ರತಿಯೊಬ್ಬರೂ ತನ್ನ ಮತದಾನದ ಹಕ್ಕನ್ನು ಪಡೆದುಕೊಳ್ಳುವುದು ಅವರ ಜವಬ್ದಾರಿಯಾಗಿದೆ.  ಈ ಮಹತ್ವ ಕಾರ್ಯಕ್ಕೆ ಸಹಕರಿಸಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿದ ಬೂತ್ ಮಟ್ಟದ ಅಧಿಕಾರಿ (ಬಿ.ಎಲ್.ಓ) ಗಳಿಗೆ ಹಾಗೂ ಸಂಬಂಧ ಪಟ್ಟ ಎಲ್ಲಾ ಇಲಾಖಾಧಿಕಾರಿಗಳಿಗೆ ಅಭಿನಂದನೆಗಳನ್ನು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಪಿ.ಶಿವಶಂಕರ್ ಅವರು ಮಾತನಾಡಿ, ಮತದಾನವು ಅತ್ಯಮೂಲ್ಯವಾದುದು ಅದನ್ನು ಪ್ರತಿಯೊಬ್ಬ ಅರ್ಹ ನಾಗರೀಕನೂ ಪಡೆದುಕೊಳ್ಳಬೇಕು. ಯಾವುದೇ ಜಾತಿ, ಧರ್ಮ ಹಾಗೂ ಆಮೀಶಕ್ಕೊಳಗಾಗದೇ ನಿಷ್ಪಕ್ಷಪಾತವಾಗಿ ತಮ್ಮ ವಿವೇಚನೆಯಿಂದ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಬೇಕು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಜಿಲ್ಲಾ ಮಟ್ಟದ ಸ್ವೀಪ್ ಸಮಿತಿಯನ್ನು ರಚಿಸಿ ಮತದಾರರಲ್ಲಿ ಉತ್ತೇಜನ ನೀಡುವ ಹಾಗೂ ಜಾಗೃತಿ ಮೂಡಿಸುವ ಕಾರ್ಯವನ್ನು ಯಶ್ವಸಿಯಾಗಿ ಮುನ್ನಡೆಸುವಂತೆ ನಿರ್ದೇಶನ ನೀಡಿದೆ. ಅದರಂತೆ ಜಿಲ್ಲೆಯಲ್ಲಿ ಮತದಾನದ ಸ್ವೀಪ್ ಸಮಿತಿ ಕಾರ್ಯಚಟುವಟಿಕೆಗಳನ್ನು ಸಮರ್ಪಕವಾಗಿ ನಡೆಸಲಾಗುತ್ತಿದೆ ಎಂದರು.  

ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಭೈರಪ್ಪ ಶಿವಲಿಂಗ ನಾಯಿಕ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ದೇಶದಲ್ಲಿ ಪ್ರತಿಯೊಬ್ಬ ಮತದಾರರು ಸಹ ತನ್ನದೇ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಹಾಗೂ ಕರ್ತವ್ಯವನ್ನು ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಸಾಕ್ಷರತಾ ಪ್ರಮಾಣ ಹೆಚ್ಚಾಗುತ್ತಿದ್ದರೂ ಸಹ ಚುನಾವಣಾ ಮತದಾನ ಪ್ರಮಾಣವು ಸಾಕ್ಷರತಾ ಪ್ರಮಾಣದ ಸರಾಸರಿಯಲ್ಲಿ ಹೆಚ್ಚಳವಾಗುತ್ತಿಲ್ಲ. ಇದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಒಳ್ಳೆಯ ಸೂಚಕವಲ್ಲ. ಸಾಮಾನ್ಯ ಜನರ ಅಜ್ಞಾನದಿಂದ ಚುನಾವಣೆಯಲ್ಲಿ ಭ್ರಷ್ಟಚಾರಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಇದರಿಂದ ಪ್ರಸ್ತುತ ದಿನಗಳಲ್ಲಿ ಮತದಾನದ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಹೆಚ್ಚು ಮಾಡುವ ಅಗತ್ಯತೆಯಿದೆ ಎಂದರು. 

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಡಾ|| ಜಿ.ಸಂತೋಷ್ ಕುಮಾರ್, ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್, ತಹಸೀಲ್ದಾರ್ ಗಣಪತಿ ಶಾಸ್ತ್ರೀ, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿರಿದ್ದರು. 

ರಾಷ್ಟ್ರೀಯ ಮತದಾನ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ, ಬಿತ್ತಿ ಪತ್ರ ರಚನೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಪ್ರಮಾಣ ಪತ್ರ ಹಾಗೂ ಬಹುಮಾನವನ್ನು ವಿತರಿಸಿ ಗೌರವಿಸಿದರು.  

ಪ್ರೌಢಶಾಲಾ ವಿಭಾಗದ ವಿಜೇತರು (ಕ್ರಮವಾಗಿ)

ಪ್ರಬಂಧ ಸ್ಪರ್ಧೆ (ಕನ್ನಡ): ಪಿ.ಜೆ. ಸೌಜನ್ಯ, ಎಸ್.ಸಿರಿ, ನಂದಿನಿ.

ಪ್ರಬಂಧ ಸ್ಪರ್ಧೆ (ಇಂಗ್ಲಿಷ್): ಎಂ.ಭಾನುಪ್ರಿಯಾ, ಎಂ.ಸಮೀಕ್ಷಾ, ಪಿ.ಎನ್.ಮೌನಿ.

ಬಿತ್ತಿ ಪತ್ರ ರಚನೆ: ಎನ್.ಚಂದುಕುಮಾರ್, ಪೂಜಾ ಜೈನ್, ಎಲ್.ಹರ್ಷಿತ.

ರಸಪ್ರಶ್ನೆ: ಮಾಹಂತ್ ಮತ್ತು ಅಭಿಲಾಷ್, ಆರ್.ತರುಣ್ ಮತ್ತು ವಿ.ಎ.ಆಕಾಶ್, ಎಂ.ಪಿ.ವರ್ಷಿಣಿ ಮತ್ತು ಸಿ.ಎಸ್.ಗೌತಮಿ. 

ಪದವಿ ಪೂರ್ವ (ಪಿ.ಯು.ಸಿ) ವಿಭಾಗದ ವಿಜೇತರು (ಕ್ರಮವಾಗಿ)

ಪ್ರಬಂಧ ಸ್ಪರ್ಧೆ (ಕನ್ನಡ): ಎನ್.ಹೇಮಾವತಿ, ಬಿ.ಎಂ.ಮೇಘನಾ,  ಎ.ಎನ್.ವಿಷ್ಣು.

ಪ್ರಬಂಧ ಸ್ಪರ್ಧೆ (ಇಂಗ್ಲಿಷ್): ಬಿ.ಕುಸುಮಗೌಡ, ಸೈಯದ ಗಜನ್ ಫಾ ಮಹದಿ, ಆರ್.ದಿವ್ಯಶ್ರೀ. 

ಬಿತ್ತಿ ಪತ್ರ ರಚನೆ: ಎಚ್.ಜೆ.ಹರ್ಷವರ್ಧನ್, ಜಿ.ಭರತ್, ಡಿ.ನವೀನ್ ಕುಮಾರ್. 

ಪದವಿ ವಿಭಾಗದ ವಿಜೇತರು (ಕ್ರಮವಾಗಿ)

ಪ್ರಬಂಧ ಸ್ಪರ್ಧೆ (ಕನ್ನಡ):ಕೆ.ವಿ.ಮುನೀಂದ್ರ, ಆರ್.ಮೌನಿಕ, ಎ.ಶ್ಯಾಮಲಾ. 

ಪ್ರಬಂಧ ಸ್ಪರ್ಧೆ (ಇಂಗ್ಲಿಷ್): ಎಚ್.ಮುಸ್ಕಾನ್, ಎಸ್.ಸಾಯಿಮಾನಸ, ಎಂ.ಎ.ಸುಮ

ಬಿತ್ತಿ ಪತ್ರ ರಚನೆ: ಕೆ.ಆರ್.ರೇಖಾ, ಎಸ್.ಎನ್.ಶ್ರಾವಣಿ, ಬಿ.ಎ.ಯಶಸ್ವಿನಿ. 

ಅತ್ಯುತ್ತಮ ಕಾರ್ಯನಿರ್ವಹಿಸಿದ ಬಿ.ಎಲ್. ಗಳು

ಬೂತ್ ಮಟ್ಟದಲ್ಲಿ ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಬಿ.ಎಲ್.ಓ ಗಳು ಎಂ.ರಾಜಣ್ಣ ಮತ್ತು ಎಸ್.ಗಿರಿಜಾ (ಗೌರಿಬಿದನೂರು), ಕೆ.ಎಲ್.ರಾಮರಾಜು ಮತ್ತು ಷಾಹಿಸ್ತಾನ್ವಾಜ್ (ಬಾಗೇಪಲ್ಲಿ), ಎಚ್.ಸಿ.ಶಾಂತಪ್ಪ ಮತ್ತು ಎಚ್.ಡಿ.ಸರ್ವಮಂಗಳ (ಚಿಕ್ಕಬಳ್ಳಾಪುರ), ಡಿ.ಸಿ.ಉಮಾ ಮತ್ತು ಪಿ.ರಾಮಚಂದ್ರ (ಶಿಡ್ಲಘಟ್ಟ), ಕೆ.ವೇದಾವತಿ ಮತ್ತು ಸಿ.ವಿ.ಆಂಜನೇಯ ಪ್ರಸಾದ್ (ಚಿಂತಾಮಣಿ). 

ಅತ್ಯುತ್ತಮ ಕಾರ್ಯನಿರ್ವಹಿಸಿದ .ಎಲ್.ಸಿ ಗಳು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತ್ಯುತ್ತಮ ಮತದಾರರ ಸಾಕ್ಷರತಾ ಸಂಘ (ಇ.ಎಲ್.ಸಿ) ಗಳಲ್ಲಿ ಕಾರ್ಯನಿರ್ವಹಿಸಿದವರು. ಎಚ್.ಜೆ.ರಬ್ಬಾನಿ (ಗುಡಿಬಂಡೆ), ಕೋದಂಡರಾಮರೆಡ್ಡಿ (ಚಿಂತಾಮಣಿ), ಸಿ.ಎಂ.ಸುರೇಶ (ಶಿಡ್ಲಘಟ್ಟ), ಶ್ರೀಕೃಷ್ಣ(ಬಾಗೇಪಲ್ಲಿ), ರಾಮಲಿಂಗಪ್ಪ (ಚಿಕ್ಕಬಳ್ಳಾಪುರ), ಜೆ.ಸಿ.ರಾಮಚಂದ್ರಯ್ಯ (ಗೌರಿಬಿದನೂರು).

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments