Saturday, April 27, 2024
spot_img
HomeChikballapurದೇವರಾಜ ಅರಸು ಎಜುಕೇಶನಲ್ ಟ್ರಸ್ಟ್ ಸಾರ್ವಜನಿಕರ ಆಸ್ತಿ ಕುಟುಂಬದ ಟ್ರಸ್ಟ್ ಅಲ್ಲ ಜಾಲಪ್ಪನವರ ಕನಸಿನ ಸಂಸ್ಥೆಯ...

ದೇವರಾಜ ಅರಸು ಎಜುಕೇಶನಲ್ ಟ್ರಸ್ಟ್ ಸಾರ್ವಜನಿಕರ ಆಸ್ತಿ ಕುಟುಂಬದ ಟ್ರಸ್ಟ್ ಅಲ್ಲ ಜಾಲಪ್ಪನವರ ಕನಸಿನ ಸಂಸ್ಥೆಯ ಆಶಯಗಳಿಗೆ ಧಕ್ಕೆಯಾಗಬಾರದು- ಜಿ ಹೆಚ್ ನಾಗರಾಜ್ ಸ್ಪಷ್ಟನೆ

ಕೋಲಾರ: ದೇವರಾಜ ಅರಸು ಟ್ರಸ್ಟ್‌ ದಿ.ಆರ್‌.ಎಲ್‌.ಜಾಲಪ್ಪ ಅವರ ಆಶಯ ಹಾಗೂ ಆಶೋತ್ತರಗಳಂತೆ ನಡೆಯುತ್ತಿದ್ದು, ಜಾಲಪ್ಪನವರ ಕುಟುಂಬಸ್ಥರಿಗೆ ಇದರಲ್ಲಿ ಹಕ್ಕಿಲ್ಲ. ಟ್ರಸ್ಟ್‌ ಬೈಲಾದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷ R ಆಡಳಿತಾಧಿಕಾರಿ ಜಿ.ಎಚ್‌.ನಾಗರಾಜ್‌ ಅವರು ಸ್ಪಷ್ಟಪಡಿಸಿದ್ದಾರೆ.

ಸಂಸ್ಥೆಯ ಮೇಲೆ ಹಕ್ಕು ಸಾಧಿಸಲು ಕುಟುಂಬಸ್ಥರು ಸೋಮವಾರ ನಡೆಸಿದ ಗದ್ದಲ ಸಂಬಂಧ ಟ್ರಸ್ಟಿಗಳೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ಇದು ಕುಟುಂಬದ ಟ್ರಸ್ಟ್ ಅಲ್ಲ. ಸಾರ್ವಜನಿಕರ ಟ್ರಸ್ಟ್ ಆಗಿದ್ದು. ಜಾಲಪ್ಪನವರು ನಿಧನ ಹೊಂದುವ ಮೊದಲು ತಮ್ಮ ಕುಟುಂಬದವರು ಯಾರಿರಬೇಕು ಎಂಬುದನ್ನು ನಿರ್ಧರಿಸಿದ್ದರು ಎಂದರು.

ಟ್ರಸ್ಟ್‌ ವಿಚಾರಕ್ಕೆ ಸಂಬಂಧಿಸಿದಂತೆ ನೀಡಲಾಗಿರುವ ಸೀಲಿಂಗ್ ಲೆಟರ್ನಲ್ಲಿ ಜಾಲಪ್ಪನವರು ತಮ್ಮ ಪುತ್ರ ರಾಜೇಂದ್ರ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಈ ಹಿಂದಿನ ಸಭೆಯಲ್ಲಿ ಜಾಲಪ್ಪನವರ ಮೊಮ್ಮಗ ಅರವಿಂದ್ ಅವರೇ ಅಧ್ಯಕ್ಷರ ಹೆಸರನ್ನು ಅನುಮೋದಿಸಿದ್ದರು. ಸದ್ಯ ಜಾಲಪ್ಪನವರ ಪುತ್ರ ರಾಜೇಂದ್ರ ಅವರೇ ಟ್ರಸ್ಟ್ ನ ಉಪಾಧ್ಯಕ್ಷರಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಈಗಿನ ಟ್ರಸ್ಟ್ ಯಾವುದೇ ಕಾನೂನು ಬಾಹಿರ ಕೆಲಸ ಮಾಡುತ್ತಿಲ್ಲ. ಇದರ ಹಿಂದೆ ರಾಜಕೀಯ ಪಿತೂರಿ ಇರಬಹುದು. ಉತ್ತಮ ಬಾಂದವ್ಯ ಇದ್ದ ಕುಟುಂಬವನ್ನು ಒಡೆದಿದ್ದರ ಹಿಂದೆ ಷಡ್ಯಂತ್ರ ನಡೆಯುತ್ತಿದೆ. ಬಹಿರಂಗವಾಗಿ ಹೇಳಿದರೆ ಕೆಲವರಿಗೆ ನೋವಾಗಬಹುದು. ಆಡಳಿತ ಪಕ್ಷದ ಬಹುತೇಕರು ಇದರ ಹಿಂದೆ ಇದ್ದಾರೆ ಅನ್ನುವುದನ್ನು ಹೇಳಿದ್ದೇನೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ಟ್ರಸ್ಟಿಯಾಗಿದ್ದವರು. ಅವರು ನಮ್ಮ ಜೊತೆ ಮಾತಾಡಿದ್ದಾರೆ . ಹೊಸ ಸಮಿತಿಯಲ್ಲಿ ರಾಜೇಂದ್ರ ಅವರ ಹೆಸರಿದೆ. ಈಗ ನಮ್ಮ ಮೇಲೆ ಮಾಡಲಾಗುತ್ತಿರುವ ಯಾವುದೇ ಆರೋಪಕ್ಕೆ ಹುರುಳಿಲ್ಲ. ಜಾಲಪ್ಪನವರದ್ದು ನನ್ನದು 50 ವರ್ಷದ ಬಾಂದವ್ಯ.  ನನ್ನ ಮನೆ ಮೇಲೆ ಮೂರು ಬಾರಿ ರೈಡ್ ಹಾಗೂ ಸಂಸ್ಥೆಯ ಮೇಲೂ ಎರಡು ಬಾರಿ ರೈಡ್ ಮಾಡಲಾಗಿದೆ. ಈ ವಿಚಾರದಲ್ಲಿ ನಮಗೆ ಕ್ಲೀನ್ ಚಿಟ್ ಸಿಕ್ಕಿದೆ. ಸಂಸ್ಥೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ . ಸಾರ್ವಜನಿಕ ಟ್ರಸ್ಟ್ ಆಗಿರುವ ಕಾರಣ ಕುಟುಂಬದ ಹಸ್ತಕ್ಷೇಪದ ವಿಚಾರವೇ ಬರುವುದಿಲ್ಲ. ಬೈಲಾ ಪ್ರಕಾರ ಏನು ಇದೆಯೋ ಅದನ್ನೇ ಕಾರ್ಯಗತ ಗೊಳಿಸಲಾಗಿದೆ ಎಂದರು. 

ಆರ್. ಎಲ್‌. ಜಾಲಪ್ಪನವರು ಯಾವುದೇ ಮಕ್ಕಳನ್ನೂ ಹತ್ತಿರ ಸೇರಿಸುತ್ತಿರಲಿಲ್ಲ. ರಾಜಕೀಯವಾಗಿಯೂ ಹಾಗೂ , ಕಾನೂನುಬದ್ಧವಾಗಿಯೂ ವಿಚಾರ ಎದುರಿಸಲು ಸಿದ್ಧ. ಟ್ರಸ್ಟ್ ಗೆ ಬೈಲಾ ನಿಯಮವೇ ಅಂತಿಮ ಎಂದರು. 

ಮೂರನೇ ಪುತ್ರ ಉಪಾಧ್ಯಕ್ಷ

2004ರಿಂದ ಟ್ರಸ್ಟ್ ನಲ್ಲಿ ಸಕ್ರಿಯನಾಗಿದ್ದೇನೆ. ಅಲ್ಲದೆ ದೊಡ್ಡಬಳ್ಳಾಪುರ ನಗರಸಭೆಯ ಅಧ್ಯಕ್ಷನಾಗಿದ್ದೆ. ನಂತರ ರಾಜಕಾರಣ ಬಿಟ್ಟು ಪೂರ್ಣ ಪ್ರಮಾಣದಲ್ಲಿ ಟ್ರಸ್ಟ್ ಕೆಲಸದಲ್ಲಿ ಗುರುತಿಸಿಕೊಂಡಿದ್ಡೆದೇನೆ ಎಂದು ಜಾಲಪ್ಪನವರ ಮೂರನೇ ಮಗ ರಾಜೇಂದ್ರ ಸ್ಪಷ್ಟಪಡಿಸಿದ್ದಾರೆ.

ನಮ್ಮ ತಂದೆ ಸತ್ತು ತಿಂಗಳು ಕಳೆಯುತ್ತಿದ್ದ ಹಾಗೆ ಈ ರೀತಿ ಮಾಡಿದ್ದು ಸರಿಯಲ್ಲ. ನಾನು ಜಾಲಪ್ಪನವರ ಸಂಸ್ಥೆಯ ಪರವಾಗಿ ನಿಂತಿದ್ದೇನೆ. ಕುಟುಂಬಕ್ಕಿಂತ ಜಾಲಪ್ಪನವರ ಆಶಯಗಳು ಮುಖ್ಯ. ಕುಟುಂಬದವರ ಮನಸನ್ನು ಕೆಡಿಸಿದ ಕ್ಷುದ್ರ ಜನರಿದ್ದಾರೆ . ಮಾಜಿ ಸಿಎಂ ಸಿದ್ದರಾಮಯ್ಯನವರ ಬಳಿ ಟ್ರಸ್ಟ್ ವಿಚಾರ ಈಗಾಗಲೇ‌ ಮಾತಾಡಿದ್ದೇವೆ . ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಿಕೊಳ್ಳಬೇಕಾದ ವಿಚಾರವಿದು. ಅವರಿನ್ನೂ ಕುಟುಂಬದ ಟ್ರಸ್ಟ್ ಅನ್ನುವ ತಪ್ಪು ಭಾವನೆಯಲ್ಲಿದ್ದಾರೆ. ಹೀಗಾಗಿಯೇ ಅವರಲ್ಲಿ ಗೊಂದಲಗಳಿವೆ. ಅಕ್ರಮಗಳು ನಡೆದಿದ್ದರೇ ಅವರ ಬೇಡಿಕೆಯಂತೆ ತನಿಖೆಯಾಗಲಿ ಎಂದು ಸವಾಲು ಹಾಕಿದರು. 

ಟ್ರಸ್ಟ್ ಈಗಾಗಲೇ ನೊಂದಣಿಯಾಗಿದೆ. ಇದರ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆ ಮಾಡಲು ಸಾಧ್ಯವಿಲ್ಲ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಟ್ರಸ್ಟ್ ಗೆ ಪರ್ಯಾಯವಾಗಿ ಮತ್ತೊಂದು ಟ್ರಸ್ಟ್ ರಚಿಸಲು ಅವಕಾಶವಿಲ್ಲ. ಕಾನೂನಿನ ಪ್ರಕಾರ ಅದು ಅಸಿಂಧು, ಅದಕ್ಕೆ ಮಾನ್ಯತೆ ಸಿಗುವುದಿಲ್ಲ.  ಜಾಲಪ್ಪನವರು ಸ್ವ ಇಚ್ಚೆಯಿಂದ ಮಾಡಿದ ಟ್ರಸ್ಟ್ ಇದಾಗಿದ್ದು,  1986 ರಿಂದ ಈ ಟ್ರಸ್ಟ್ ನ ಕಾನೂನು ಸಲಹೆಗಾರನಾಗಿದ್ದೇನೆ. ಈ ಟ್ರಸ್ಟ್ ನ ಎಲ್ಲಾ ಸಂಗತಿಗಳೂ ನನಗೆ ಗೊತ್ತಿದೆ. ಜಾಲಪ್ಪ ಅವರು ಅನಾರೋಗ್ಯಕ್ಕೆ ತುತ್ತಾಗುವ 6 ತಿಂಗಳ ಮೊದಲೂ ಟ್ರಸ್ಟ್ ಆಡಳಿತ ಅವರೇ ನೋಡಿಕೊಳ್ಳುತ್ತಿದ್ದರು . ಕಾನೂನು ಕ್ರಮ ತೆಗೆದುಕೊಳ್ಳಲು ನಮಗೆ ಅವಕಾಶವಿದ್ದು,  ಟ್ರಸ್ಟ್ ಪರ ನಿಲ್ಲುತ್ತೇನೆ 

-ನಾಣಯ್ಯ ಹಿರಿಯ ವಕೀಲರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments