Monday, April 29, 2024
spot_img
HomeChikballapurಪ್ರವರ್ಗ1 ರ ಸಮುದಾಯಗಳು ಸಂವಿಧಾನದತ್ತವಾದ ತಮ್ಮ ಅವಕಾಶಗಳನ್ನು ಪಡೆಯಲು ಸಂಘಟಿತರಾಗಬೇಕಾದ ಅಗತ್ಯವಿದೆ

ಪ್ರವರ್ಗ1 ರ ಸಮುದಾಯಗಳು ಸಂವಿಧಾನದತ್ತವಾದ ತಮ್ಮ ಅವಕಾಶಗಳನ್ನು ಪಡೆಯಲು ಸಂಘಟಿತರಾಗಬೇಕಾದ ಅಗತ್ಯವಿದೆ

ಚಿಕ್ಕಬಳ್ಳಾಪುರ: ಪ್ರವರ್ಗ1 ರ ಅಡಿಯಲ್ಲಿ ಬರುವ ಗೊಲ್ಲ,,ಉಪ್ಪಾರ, ಜೋಗಿ, ಬೆಸ್ತ, ಹೆಳವ , ಸೇರಿದಂತೆ ಎಲ್ಲ ಸಮುದಾಯಗಳು ಸಂವಿಧಾನದತ್ತವಾದ ತಮ್ಮ ಅವಕಾಶಗಳನ್ನು ಪಡೆಯಲು ಸಂಘಟಿತರಾಗಬೇಕಾದ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಪ್ರವರ್ಗ1 ರ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಎಂ ಮುನೇಗೌಡ ಹೇಳಿದರು.ಚಿಕ್ಕಬಳ್ಳಾಪುರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಪ್ರತಿಯೊಂದು ಜಾತಿಗೂ ತನ್ನದೇ ಆದ ಮಹತ್ವವಿದ್ದು ರಾಜಕೀಯವಾಗಿ, ಸಾಮಾಜಿಕವಾಗಿ , ಆರ್ಥಿಕವಾಗಿ , ಸಿಗಬೇಕಾದ ಸಮಾನತೆಗಾಗಿ, ಸಂಘಟನೆ ಅಗತ್ಯ ಮತ್ತು ಅನಿವಾರ್ಯವಾಗಿದೆ.
 ಜಿಲ್ಲೆಯಾದ್ಯಂತ ಸರಿ‌ಸುಮಾರು ಒಂದೂವರೆಲಕ್ಷದಷ್ಟು  ಪ್ರವರ್ಗ 1 ರ ಅಡಿಯಲ್ಲಿ ಬರುವ ಸಮುದಾಯದ ಜನರಿದ್ದಾರೆಂದು ಅಂದಾಜಿಸಲಾಗಿದೆ . ಇವರಿಗೆ ಸಿಗಬೇಕಾದ ಸವಲತ್ತುಗಳಾಗಲೀ, ಸೌಲಭ್ಯಗಳಾಗಲೀ ಇನ್ನೂ ದೊರೆಯದೇ ಅನ್ಯಾಯವಾಗುತ್ತಿರುವುದು ಕಂಡು ಬಂದಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ  ಗೊಲ್ಲ,,ಉಪ್ಪಾರ, ಜೋಗಿ, ಬೆಸ್ತ, ಹೆಳವ ,ಮುಂತಾದ ಸಮುದಾಯದ ಮುಖಂಡರನ್ನು ಸಂಘಟಿಸಿ ಪದಾಧಿಕಾರಿಗಳನ್ನಾಗಿ ನೇಮಿಸಲಾಗಿದೆ.ಇದು ಜಿಲ್ಲೆಯಲ್ಲಿ ನಡೆಯುತ್ತಿರುವ ಮೊಟ್ಟ ಮೊದಲ ಸಂಘಟನಾ ಪ್ರಕ್ರಿಯೆಯಾಗಿದ್ದು ಮೊದಲ ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಗೊಳಿಸಲಾಗುತ್ತಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಕಾರ್ಯಾಧ್ಯಕ್ಷರಾದ ಜಯರಾಂ ಎನ್, ಬಿಎಸ್ ಕುಮಾರ್, ಪ್ರಧಾನ ಕಾರ್ಯದರ್ಶಿ  ಮುದ್ದುಕೃಷ್ಣ ಯಾದವ್, ಉಪಾಧ್ಯಕ್ಷೆ ಮಂಗಳಾ ಪ್ರಕಾಶ್, ,ಉಪಾಧ್ಯಕ್ಷ ಗುರುಮೂರ್ತಿ ಮುಂತಾದವರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments