Friday, March 29, 2024
spot_img
HomeBangaloreಕುಂಟೆಯಂತಾದ ರೈಲ್ವೆ ಅಂಡರ್ಪಾಸ್ ವಾಹನ ಸವಾರ ಪರದಾಟ

ಕುಂಟೆಯಂತಾದ ರೈಲ್ವೆ ಅಂಡರ್ಪಾಸ್ ವಾಹನ ಸವಾರ ಪರದಾಟ

ದೇವನಹಳ್ಳಿ: ಪಟ್ಟಣದ 23ನೇ ವಾರ್ಡಿನಲ್ಲಿರುವ ಅಕ್ಕುಪೇಟೆಯ ರೈಲ್ವೆ ಅಂಡರ್‌ಪಾಸ್‌ನಲ್ಲಿ ಸುಮಾರು ತಿಂಗಳುಗಳಿAದ ನೀರು ನಿಂತು ವಾಹನ ಸವಾರರು ಪರದಾಡುವ ಪರಿಸ್ಥಿತಿ ಇದೆ.

ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ನಿಂತಿರುವ ಬಗ್ಗೆ ಸಚಿವರು ಸಹ ಭೇಟಿ ನೀಡಿ ಪರಿಶೀಲಿಸಿ, ಅಂಡರ್‌ಪಾಸ್ ದುರಸ್ಥಿಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.

ರಾಹೆ 7ರಿಂದ ಅಕ್ಕುಪೇಟೆ, ಬೊಮ್ಮವಾರ, ಕೋಡಿಮಂಚೇನಹಳ್ಳಿ, ಕುಂದಾಣ, ಸೋಲೂರು ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಇಲ್ಲಿನ ಸಾಕಷ್ಟು ರೈತರು, ವಿದ್ಯಾರ್ಥಿಗಳು ಪಟ್ಟಣದ ಶಾಲೆ-ಕಾಲೇಜು, ಆಸ್ಪತ್ರೆ, ದಿನಸಿ ಮತ್ತಿತರರ ಕೆಲಸ ಕಾರ್ಯಗಳಿಗೆ ಬಂದು ಹೋಗುತ್ತಿರುತ್ತಾರೆ. ರೈಲ್ವೆ ಅಂಡರ್‌ಪಾಸ್‌ನಲ್ಲಿರುವ ಕಿಂಡಿಗಳ ಮೂಲಕ ಜೌಗು ನೀರು ಹರಿದು ಬರುವುದರಿಂದ ಇಲ್ಲಿ ಕುಂಟೆಯAತೆ ನೀರು ನಿಂತುಕೊAಡಿದೆ. ಇದನ್ನು ದಾಟಬೇಕಾದರೆ ವಾಹನ ಸವಾರರು, ಪಾದಚಾರಿಗಳು ಎದ್ದುಬಿದ್ದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ದೇವನಹಳ್ಳಿ ಶಾಸಕ ಎಲ್.ಎನ್.ನಾರಾಯಣಸ್ವಾಮಿ ಅವರು ಚಳಿಗಾಲದ ಅಧಿವೇಶನದಲ್ಲಿ ರೈಲ್ವೆ ಅಂಡರ್‌ಪಾಸ್‌ಗಳ ಬಗ್ಗೆ ಗಮನಸೆಳೆದಿದ್ದರು. ತದ ನಂತರ ವಸತಿ ಸಚಿವ ವಿ.ಸೋಮಣ್ಣ ಖುದ್ದು ವೀಕ್ಷಣೆ ಮಾಡಿ 15 ದಿನಗಳಲ್ಲಿ ಇರುವ ಎಲ್ಲಾ ಅಂಡರ್‌ಪಾಸ್‌ಗಳನ್ನು ದುರಸ್ಥಿಗೊಳಿಸಿ, ನೀರು ನಿಲ್ಲದಂತೆ ಎಚ್ಚವಹಿಸಲು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರಿಗೆ ಸೂಚಿಸಿದ್ದರೂ ಸಹ ಶಾಸಕರಾಗಲೀ, ಸಚಿವರಾಗಲೀ, ಜಿಲ್ಲಾಧಿಕಾರಿಗಳಾಗಲೀ ಇತ್ತ ಗಮನಹರಿಸಿರುವುದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ನಿಂತಿರುವುದರಿAದ ಸಾರ್ವಜನಿಕರು ಓಡಾಡಲು ತೊಂದರೆಯಾಗುತ್ತಿದೆ. ಈ ಬಗ್ಗೆ ಈಗಾಗಲೇ ಮೇಲಾಧಿಕಾರಿಗಳ ಗಮನದಲ್ಲಿದ್ದರೂ ಸಹ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಶೀಘ್ರವಾಗಿ ಕಾಮಗಾರಿ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.

-ಎಸ್.ನಾಗೇಶ್ | ಪುರಸಭಾ ಸದಸ್ಯ, 23ನೇ ವಾರ್ಡು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments