Saturday, April 27, 2024
spot_img
HomeChikballapurನಾಲ್ವರು ಪೊಲೀಸರಿಗೆ ಕೊರೋನಾ ಸೋಂಕು

ನಾಲ್ವರು ಪೊಲೀಸರಿಗೆ ಕೊರೋನಾ ಸೋಂಕು

ಚಿಕ್ಕಬಳ್ಳಾಪುರ: ಕೊರೋನಾ ಕುರಿತಾದ ಟಫ್ ರೂಲ್ಸ್ ಜಾರಿಯಾಗುತ್ತಿರುವಷ್ಟರಲ್ಲಿ ಚಿಕ್ಕಬಳ್ಳಾಪುರದ ಪೊಲೀಸರಿಗೇನೇ ಕೊರೋನಾ ಸೋಂಕಿನ ಆತಂಕ ಶುರುವಾಗಿದೆ. ಚಿಕ್ಕಬಳ್ಳಾಪುರದಲ್ಲಿ ನಾಲ್ವರು ಪೊಲೀಸರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು ಚಿಕ್ಕಬಳ್ಳಾಪುರದ ವೃತ್ತ ನಿರೀಕ್ಷಕರು ಮತ್ತವರ ವಾಹನ ಚಾಲಕ ಸೇರಿದಂತೆ ನಾಲ್ವರು ಪೊಲೀಸರಿಗೆ ಕೊರೋನಾ ಸೋಂಕು. ಪತ್ತೆಯಾಗಿದೆ.

ಇಬ್ಬರು ಪೊಲೀಸರು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದು ವೃತ್ತ ನಿರೀಕ್ಷಕ ಹಾಗೂ ಮತ್ತೋರ್ವ ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್‌ಗೆ ಶಿಫಾರಸ್ಸು ಮಾಡಲಾಗಿದೆ. ಕೊರೋನಾ ಪ್ರಂಟ್ ಲೈನ್ ವಾರಿಯರ್ಸ್ ಆಗಿ ಜನರನ್ನು ಹದ್ದುಬಸ್ತಿನಲ್ಲಿಡಲು ಕಳೆದ ಎರಡು ವರ್ಷಗಳಿಂದ ಶ್ರಮಿಸುತ್ತಿರುವ ಪೊಲೀಸರು ಡಿ.31ರ ರಾತ್ರಿ ಹೊಸ ವರ್ಷದ ಸಂಭ್ರಮಾಚರಣೆ ತಡೆಯಲು ಹೋದಾಗ ಹಬ್ಬಿತಾ ಸೋಂಕು. ಎಂಬ ಅನುಮಾನ ವ್ಯಕ್ತವಾಗಿದೆ. ಡಿ.31ರ ರಾತ್ರಿ ಚಿಕ್ಕಬಳ್ಳಾಪುರ ಹೊರವಲಯದ ರೆಸಾರ್ಟ್ ನಲ್ಲಿ ನೈಟ್ ಕರ್ಫ್ಯೂ ಉಲ್ಲಂಘಿಸಿ ಬೆಂಗಳೂರಿನ ಯುವಕರು ಪಾರ್ಟಿ ಮಾಡಿದ್ದರು. ಈ ಮಾಹಿತಿ ತಿಳಿದ ಪೊಲೀಸರು ಯುವಕರ ಪಾರ್ಟಿ ತಡೆಯಲು ಹೋದಾಗ ಪೊಲೀಸರ ಮೇಲೆಯೇ ಹಲ್ಲೆ ಆಗಿತ್ತು. ಈ ಹಲ್ಲೆ ಘಟನೆ ವೇಳೆ ಇದ್ದ ನಾಲ್ವರು ಪೊಲೀಸರಿಗೂ ಕೊರೋನಾ ಸೋಂಕು ಹರಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments