Friday, May 3, 2024
spot_img
HomeChikballapurನಗರೋತ್ತಾನ 4ನೇ ಹಂತದ ಕ್ರಿಯಾ ಯೋಜನೆ ರೊಪಿಸಲು ಪಾದಯಾತ್ರೆ.

ನಗರೋತ್ತಾನ 4ನೇ ಹಂತದ ಕ್ರಿಯಾ ಯೋಜನೆ ರೊಪಿಸಲು ಪಾದಯಾತ್ರೆ.

ಶಿಡ್ಲಘಟ್ಟ: ನಗರೋತ್ತಾನ 4ನೇ ಹಂತದ ಕಾರ್ಯಕ್ರಮದಡಿ ಸರ್ಕಾರದಿಂದ ಹಣ ಬಿಡುಗಡೆ ಆಗಿದ್ದು, ಈ ಯೋಜನೆ ನಗರದ ಸವರ್ತೋಮುಖ ಅಬಿವೃದ್ದಿಗೆ ಈ ಯೋಜನೆ ಸಹಕಾರಿ ಎಂದು ನಗರಸಭಾ ಅದ್ಯಕ್ಷೆ ಸುಮಿತ್ರಾ ರಮೇಶ್ ತಿಳಿಸಿದರು.
ನಗರದ ವಿವಿದ ವಾರ್ಡ್‍ಗಳಲ್ಲಿ ನಗರೋತ್ತಾನ 4ನೇ ಹಂತದಲ್ಲಿ ಕಾಮಗಾರಿಗಳನ್ನು ಮಾಡಲು ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಭಾಗವಹಿಸಿ ಮಾತನಾಡಿದರು.
ನಗರೋತ್ತಾನ 4ನೇ ಹಂತದ ಕಾರ್ಯಕ್ರಮದಡಿ ಜಿಲ್ಲಾ ಕೇಂದ್ರಗಳಿಗೆ 40 ಕೋಟಿ, ತಾಲ್ಲೂಕು ಕೇಂದ್ರಗಳಿಗೆ 30 ಕೋಟಿ ಹಣ ಸರ್ಕಾರದಿಂದ ಬಿಡುಗಡೆಯಾಗಿದ್ದು, ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿ 30 ಕೋಟಿ ಹಣ ಬಿಡುಗಡೆಯಾಗಿದ್ದು, ಅದರಲ್ಲಿ 25 ಕೋಟಿ 50 ಲಕ್ಷ ರೂ ಹಣಕ್ಕೆ ಕ್ರಿಯಾ ಯೋಜನೆ ರೊಪಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಅದ್ಯಕ್ಷರ ಸೂಚನೆಯಂತೆ ನಗರದ ಎಲ್ಲಾ ವಾರ್ಡ್‍ಗಳಲ್ಲಿ ಸಂಚರಿಸಿ ವಾರ್ಡ್‍ನ ಸಮಸ್ಯೆಗಳನ್ನು ಪರಿಶೀಲಿಸಿ, ಜನರಿಗೆ ಕಣ್ಣಿಗೆ ಕಾಣಿಸುವ ಅಭಿವೃದ್ದಿ ಕಾಮಗಾರಿಗಳನ್ನು ಮಾಡಬೇಕೆಂದು ತಿಳಿಸಿದ್ದು, ಈ ನಿಟ್ಟಿನಲ್ಲಿ ಅದಿಕಾರಿಗಳ ಸಮೇತ ಎಲ್ಲಾ ವಾರ್ಡ್‍ಗಳಲ್ಲಿ ಪಾದಯಾತ್ರೆ ಮೂಲಕ ಸಂಚರಿಸುತ್ತಿದ್ದು, ಬಹುಮುಖ್ಯವಾಗಿ ಕುಡಿಯುವ ನೀರು, ಒಳಚರಂಡಿ, ರಸ್ತೆ ನಿರ್ಮಾಣದಂತಹ ಕೆಲಸಗಳಿಗೆ ಪ್ರಾಮುಖ್ಯತೆ ನೀಡಲಾಗುವುದು ಎಂದು ತಿಳಿಸಿದರು.
ನಗರಸಭಾ ಆಯುಕ್ತ ಶ್ರೀಕಾಂತ್ ಮಾತನಾಡಿ ಕ್ರಿಯಾ ಯೋಜನೆಯಲ್ಲಿ ನಗರದ ಪ್ರಮುಖ ವೃತ್ತಗಳನ್ನು ಅಬಿವೃದ್ದಿ ಮಾಡುವುದು, ನಗರದ ಪ್ರವೇಶ ಭಾಗದ ರಸ್ತೆಗಳನ್ನು ಅಬಿವೃದ್ದಿ ಮಾಡುವುದು, ನಗರದ ಸೌಂದರ್ಯ ಅಬಿವೃದ್ದಿ ಮಾಡುವ  ನಿಟ್ಟಿನಲ್ಲಿ ರಸ್ತೆ ವಿಭಜಕಗಳ ಮದ್ಯದಲ್ಲಿ ಅಲಂಕಾರಿಕ ಗಿಡಗಳನ್ನು ನೆಡುವುದು ಮುಂತಾದ ಕಾರ್ಯಕ್ರಮಗಳ ಯೋಜನೆಯನ್ನು, ಹಾಗೂ ಎಲ್ಲಾ 31 ವಾರ್ಡ್‍ಗಳ ಸಮಸ್ಯೆಗಳನ್ನು ಆಯಾ ವಾರ್ಡ್ ಸದಸ್ಯರ ಗಮನಕ್ಕೆ ತಂದು ಆವರ ಸೂಚನೆಯಂತೆ ಯೋಜನೆ ರೂಪಿಸುವುದಾಗಿ, ನಗರಸಭಾ ಅದ್ಯಕ್ಷರ ಸೂಚನೆಯಂತೆ ಕ್ರಿಯಾ ಯೋಜನೆಯನ್ನು ತಯಾರಿಸಿ ಮಾನ್ಯ ಶಾಸಕರ ಅದ್ಯಕ್ಷತೆಯಲ್ಲಿ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾದಿಕಾರಿಗಳಿಗೆ ನೀಡುವುದಾಗಿ, ಜಿಲ್ಲಾದಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಉಸ್ತುವಾರಿ ಸಚಿವರ ಅನುಮೊದನೆಯೊಂದಿಗೆ ಸರ್ಕಾರಕ್ಕೆ ಕಳುಹಿಸಿ ಅನುಮೋದನೆ ಸಿಕ್ಕ ನಂತರ ಕೆಲಸಗಳನ್ನು ಪ್ರಾರಂಭ ಮಾಡುವುದಾಗಿ ತಿಳಿಸಿದರು.
ಈ ಯೋಜನೆ ತುಂಬಾ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಸರ್ಕಾರ ಕ್ರಿಯಾ ಯೋಜನೆ ಪರಿಶೀಲಿಸಲು ಸಲಹೆಗಾರರನ್ನು ನೇಮಕ ಮಾಡುತ್ತಿದ್ದು, ಸಲಹೆಗಾರರು ಕಾಮಗಾರಿಗಳ ಪರಿಶೀಲನೆ ಮಾಡಿದ ನಂತರ ಅವರು ನೀಡಿದ ಸಲಹೆ ಸೂಚನೆಯಂತೆ ಕಾಮಗಾರಿಗಳನ್ನು ಪ್ರಾರಂಭ ಮಾಡುವುದಾಗಿ ತಿಳಿಸಿದ ಅವರು ಗುಣಮಟ್ಟದ ಕಾಮಗಾರಿಗಳನ್ನು ಮಾಡುವುದು ಬಹಳ ಮುಖ್ಯವಾಗಿದ್ದು, ಸಾರ್ವಜನಿಕರ ಸಹಕಾರ ತುಂಭಾ ಮುಖ್ಯ, ಯಾರೇ ಆಗಲಿ ಕಾಮಗಾರಿಯಲ್ಲಿ ಗುಣ ಮಟ್ಟ ಇಲ್ಲದಿದ್ದ ಪಕ್ಷದಲ್ಲಿ ಸಾರ್ವಜನಿಕರು ಶಾಸಕರು, ನಗರಸಭಾ ಅದ್ಯಕ್ಷರು, ನಗರಸಭಾ ಆಯುಕ್ತರ ಗಮನಕ್ಕೆ ತಂದಾಗ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭಾ ಅದಿಕಾರಿಗಳಾದ ಅಬಿಯಂತರರು ಸುದಾಕರ್, ಕಂದಾಯ ನೀರಿಕ್ಷಕರು ಅತೀಕ್, ಮುರಳಿ, ಆಯಾ ವಾರ್ಡ್‍ಗಳ ನಗರಸಭಾ ಸದಸ್ಯರು, ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments