Friday, May 3, 2024
spot_img
HomeChikballapurಕೊತ್ತನೂರು ಗ್ರಾಮ ಪಂಚಾಯಿತಿ ಕಚೇರಿ ಎದುರು ಗ್ರಾಮಸ್ಥರ ಪ್ರತಿಭಟನೆಪ್ರತಿಭಟನಾಕಾರರು ಹಾಗೂ ಗ್ರಾ.ಪಂ.ಅಧ್ಯಕ್ಷರ ಬೆಂಬಲಿಗರ ನಡುವೆ ವಾಗ್ವಾದ:...

ಕೊತ್ತನೂರು ಗ್ರಾಮ ಪಂಚಾಯಿತಿ ಕಚೇರಿ ಎದುರು ಗ್ರಾಮಸ್ಥರ ಪ್ರತಿಭಟನೆಪ್ರತಿಭಟನಾಕಾರರು ಹಾಗೂ ಗ್ರಾ.ಪಂ.ಅಧ್ಯಕ್ಷರ ಬೆಂಬಲಿಗರ ನಡುವೆ ವಾಗ್ವಾದ: ಅಕಾರಿಗಳ ವರ್ಗಾವಣೆ ಭರವಸೆ

ಶಿಡ್ಲಘಟ್ಟ: ತಾಲೂಕಿನ ಕೊತ್ತನೂರು ಗ್ರಾಮ ಪಂಚಾಯಿತಿ ಕಚೇರಿ ಎದುರು ಕಾಂಗ್ರೆಸ್ ಮುಖಂಡ ಎ.ಪಂಚಾಕ್ಷರಿರೆಡ್ಡಿ ಅವರ ನೇತೃತ್ವದಲ್ಲಿ ಗ್ರಾಮದ ನೂರಾರು ಮಂದಿ ಸೇರಿ ಕಾರ್ಯದರ್ಶಿ ಅಶ್ವತ್ಥ್ ಹಾಗೂ ಕಂಪ್ಯೂಟರ್ ಆಪರೇಟರ್, ನರೇಗಾ ಇಂಜಿನಿಯರ್ ಅವರನ್ನು ವರ್ಗಾಯಿಸಬೇಕೆಂದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮುಖಂಡ ಎ.ಪಂಚಾಕ್ಷರಿರೆಡ್ಡಿ ಮಾತನಾಡಿ, ಕಾರ್ಯದರ್ಶಿ ಅಶ್ವತ್ಥ್ ಅವರು ಕಳೆದ 14 ವರ್ಷಗಳಿಂದಲೂ ಇಲ್ಲೇ ಬೀಡು ಬಿಟ್ಟಿದ್ದು ಅವರು ಜನ ಸಾಮಾನ್ಯರಿಗೆ ಸರಿಯಾಗಿ ಸ್ಪಂಸುತ್ತಿಲ್ಲ. ಕೆಲಸ ಕಾರ್ಯಗಳು ಸಕಾಲಕ್ಕೆ ಆಗುತ್ತಿಲ್ಲ.ಹಾಗೆಯೆ ಕಂಪ್ಯೂಟರ್ ಆಪರೇಟರ್ ಹಾಗೂ ನರೇಗಾ ಇಂಜಿನಿಯರ್ ಸಹ ಜನ ಸಾಮಾನ್ಯರಿಗೆ ಸ್ಪಂಸದೆ ಅವರದ್ದೇ ಪಂಚಾಯಿತಿ ಎಂಬಂತೆ ವರ್ತಿಸುತ್ತಿದ್ದಾರೆ, ಹಿರಿಯ ಅಕಾರಿಗಳು, ಜನಪ್ರತಿನಿಗಳ ಮಾತಿಗೂ ಕಿಮ್ಮತ್ತು ನೀಡುತ್ತಿಲ್ಲ ಎಂದು ದೂರಿದರು.
ಕೆಲಸ ಕಾರ್ಯಗಳಿಗಾಗಿ ಪಂಚಾಯಿತಿ ಕಚೇರಿಗೆ ಬರುವ ಜನ ಸಾಮಾನ್ಯರನ್ನು ಕ್ಷುಲ್ಲಕವಾಗಿ ನೋಡುತ್ತಾರೆ.  ಕನಿಷ್ಠ ಗೌರವ ಕೊಟ್ಟು ಮಾತನಾಡುವುದೂ ಇಲ್ಲ ಎಂದು ಅಕಾರಿಗಳು ಹಾಗೂ ಸಿಬ್ಬಂದಿಯ ವರ್ತನೆ ಕುರಿತು ಬೇಸರ ವ್ಯಕ್ತಪಡಿಸಿ ಇಂತಹ ಅಕಾರಿಗಳು, ಸಿಬ್ಬಂದಿ ನಮಗೆ ಬೇಡ ಬೇರೆ ಕಡೆ ವರ್ಗಾಯಿಸಲಿ ಎಂದು ಆಗ್ರಹಿಸಿದರು.
ಈ ವೇಳೆ ಗ್ರಾಮಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಹಾಗೂ ಅವರ ಬೆಂಬಲಿಗ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಸ್ಥಳಕ್ಕೆ ಬಂದು ಕಾರ್ಯದರ್ಶಿ ಹಾಗೂ ಸಿಬ್ಬಂದಿ ಪರವಾಗಿ ವಕಾಲತ್ತುವಹಿಸಿದ್ದಲ್ಲದೆ ಇಲ್ಲಿ ಪ್ರತಿಭಟನೆ ನಡೆಸಬೇಡಿ ಎಂಬಂತೆ ಪ್ರತಿಭಟನೆಗೆ ಅಡ್ಡಿಪಡಿಸಲು ಮುಂದಾದರು.ಜತೆಗೆ ನನ್ನ ಅವಯಲ್ಲಿ ಯಾವುದೆ ಒಂದೂ ಅವ್ಯಹಾರ ನಡೆದಿಲ್ಲ. ಯಾರೇ ಮಾಡಿದ್ದರೂ ತಪ್ಪು ತಪ್ಪೇ ನನ್ನ ಅವಯಲ್ಲಿ ಆಗಿರುವ ಅವ್ಯವಹಾರಗಳನ್ನು ಬಯಲಿಗೆ ಎಳೆಯಿರಿ ಎಂದು ಸವಾಲು ಹಾಕುವ ರೀತಿಯಲ್ಲಿ ಪ್ರಶ್ನಿಸಿದರು.ಇದಕ್ಕೆ ಸಿಟ್ಟಿಗೆದ್ದ ಪಂಚಾಕ್ಷರಿರೆಡ್ಡಿ ಹಾಗೂ ಅವರ ಬೆಂಬಲಿಗರು ಅಧ್ಯಕ್ಷ ಮಂಜುನಾಥ್ ವಿರುದ್ದ ತಿರುಗಿ ಬಿದ್ದರು. ನಾವು ನಿಮ್ಮ ಬಗ್ಗೆಯಾಗಲಿ ನಿಮ್ಮ ಕೆಲಸ ಕಾರ್ಯಗಳನ್ನಾಗಲಿ ಪ್ರಸ್ತಾಪ ಮಾಡಿಲ್ಲ. ನಮ್ಮದೇನಿದ್ದರೂ ಕಾರ್ಯದರ್ಶಿ ಹಾಗೂ ಸಿಬ್ಬಂದಿ ವಿರುದ್ದ ಪ್ರತಿಭಟನೆ ನಡೆಯುತ್ತಿದೆ.ನೀವು ಉದ್ದೇಶಪೂರ್ವಕವಾಗಿ ಗಲಾಟೆಗೆ ಬಂದಂತೆ ಕಾಣುತ್ತಿದೆ, ನಾವೂ ಎಲ್ಲದಕ್ಕೂ ಸಿದ್ದ ಎಂದು ಸವಾಲು ಎಸೆದರು.
ಎರಡೂ ಗುಂಪುಗಳ ನಡುವೆ ಪರಸ್ಪರ ಮಾತಿನ ಚಕಮುಕಿ ನಡೆಯಿತು ಸ್ಥಳದಲ್ಲಿ ಪರಿಸ್ಥಿತಿ ಬಿಗಡಾಯಿಸಿತು ಅಷ್ಟರಲ್ಲಿ ಹಿರಿಯರೆ ಕೆಲವರು ಅಧ್ಯಕ್ಷ ಮಂಜುನಾಥ್ ಹಾಗೂ ಅವರ ಬೆಂಬಲಿಗರಿಗೆ ಬುದ್ದಿ ಹೇಳಿ ನಿಮ್ಮ ಬಗ್ಗೆ ಇಲ್ಲಿ ಯಾರೂ ಪ್ರಸ್ತಾಪ ಮಾಡಿಲ್ಲ. 
ನಿಮಗೆ ಇಲ್ಲಿ ಏನೂ ಕೆಲಸ ಇಲ್ಲ. ನಿಮ್ಮ ಬಗ್ಗೆ ಪ್ರಸ್ತಾಪ ಮಾಡಿದ್ದರೆ ನೀವು ಮಾತನಾಡಬಹುದಿತ್ತು ಎಂದು ಹೇಳಿ ಅಲ್ಲಿಂದ ಕಳುಹಿಸಿದ ನಂತರ ಪರಿಸ್ಥಿತಿ ತಿಳಿಯಾಯಿತು.ಸ್ಥಳಕ್ಕೆ ತಾಲೂಕು ಪಂಚಾಯಿತಿ ಇಒ ಚಂದ್ರಕಾಂತ್ ಆಗಮಿಸಿ ಪ್ರತಿಭಟನಾಕಾರರ ಅಹವಾಲು ಆಲಿಸಿ ಮುಂದಿನ ಸೋಮವಾರದೊಳಗೆ ಕಾರ್ಯದರ್ಶಿ ಹಾಗೂ ಸಿಬ್ಬಂದಿಯನ್ನು ವರ್ಗಾಯಿಸಲು ಕೋರಿ ಸಿಇಒ ಅವರಿಗೆ ಪ್ರಸ್ತಾಪ ಸಲ್ಲಿಸುವುದಾಗಿ ಹೇಳಿದರು.
ಆದರೆ ಅದಕ್ಕೆ ಒಪ್ಪದ ಪ್ರತಿಭಟನಾಕಾರರು, ಇವರ ವರ್ಗಾವಣೆಗೆ ಐದಾರು ತಿಂಗಳಿಂದಲೂ ಶಾಸಕರು ಸೇರಿ ಹಿರಿಯ ಅಕಾರಿಗಳೆಲ್ಲರಿಗೂ ಪತ್ರ ಬರೆದಿದ್ದರೂ ಕೇವಲ ಭರವಸೆಗಳು ದೊರೆತಿವೆಯೆ ಹೊರತು ಉಪಯೋಗವಾಗಿಲ್ಲ ಹಾಗಾಗಿ ಕ್ರಮ ಕೈಗೊಳ್ಳುವ ಸ್ಪಷ್ಟ ಭರವಸೆ ನೀಡಿದರಷ್ಟೆ ಪ್ರತಿಭಟನೆಯನ್ನು ಕೈ ಬಿಡುತ್ತೇವೆ ಇಲ್ಲವಾದಲ್ಲಿ ಅರ್ನಿಷ್ಟ ಧರಣಿ ನಡೆಸುತ್ತೇವೆ ಎಂದು ಪಟ್ಟು ಹಿಡಿದರು.

ಶಾಸಕ ವಿ.ಮುನಿಯಪ್ಪ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರೊಂದಿಗೆ ಮೊಬೈಲ್‍ನಲ್ಲಿ ಚರ್ಚಿಸಿದ ಇಒ ಚಂದ್ರಕಾಂತ್ ಅವರು, ಈ ದಿನ ಸಂಜೆಯೆ ಕಾರ್ಯದರ್ಶಿ, ಕಂಪ್ಯೂಟರ್ ಆಪರೇಟರ್, ನರೇಗಾ ಇಂಜಿನಿಯರ್ ಮೂವರನ್ನು ಬೇರೆ ಕಡೆ ವರ್ಗಾಯಿಸಿ ಆದೇಶ ನೀಡುವುದಾಗಿ ಭರವಸೆ ಕೊಟ್ಟ ಮೇಲಷ್ಟೆ ಪಂಚಾಕ್ಷರರೆಡ್ಡಿ ಹಾಗೂ ಅವರ ಬೆಂಬಲಿಗರು ಪ್ರತಿಭಟನೆಯನ್ನು ಕೈ ಬಿಟ್ಟರು.
ಕಾಂಗ್ರೆಸ್ ಮುಖಂಡ ಪಂಚಾಕ್ಷರಿರೆಡ್ಡಿ, ಜಗದೀಶ್‍ರೆಡ್ಡಿ, ಜ್ಞಾನೇಶ್, ಸ್ವರೂಪರೆಡ್ಡಿ, ಅನಿತ, ಮುನಿಯಪ್ಪ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments