Friday, April 26, 2024
spot_img
HomeUncategorizedಅನುದಾನವನ್ನು ಶಾಸಕರ ಬೆಂಬಲಿಗರು ಮಾತ್ರ ಕೆಲಸ ನಿರ್ವಹಿಸುವಂತೆ ಕ್ರೀಯಾ ಯೋಜನೆ ಸಿದ್ದಪಡಿಸಿಕೊಂಡು ಅನುದಾನ ದುರುಪಯೋಗಪಡಿಸಿಕೊಳ್ಳಲು ಸಿದ್ದರಾಗಿದ್ದಾರೆ

ಅನುದಾನವನ್ನು ಶಾಸಕರ ಬೆಂಬಲಿಗರು ಮಾತ್ರ ಕೆಲಸ ನಿರ್ವಹಿಸುವಂತೆ ಕ್ರೀಯಾ ಯೋಜನೆ ಸಿದ್ದಪಡಿಸಿಕೊಂಡು ಅನುದಾನ ದುರುಪಯೋಗಪಡಿಸಿಕೊಳ್ಳಲು ಸಿದ್ದರಾಗಿದ್ದಾರೆ

ಗುಡಿಬಂಡೆ: ಕೇವಲ ಶಾಸಕರ ಅನುಯಾಯಿಗಳಿಗಾಗಿ ತಯಾರಿಸಿದ ಕ್ರೀಯಾಯೋಜನೆಯನ್ನು ಕೂಡಲೇ ರದ್ದು ಮಾಡಿ ಎಲ್ಲಾ ಗ್ರಾಮಗಳಿಗೆ ಅನುಕೂಲವಾಗುವಂತಹ ಕ್ರೀಯಾಯೋಜನೆ ಸಿದ್ದಪಡಿಸಿಬೇಕೆಂದು ಒತ್ತಾಯಿಸಿ ತಾಲೂಕಿನ‌ ಎಲ್ಲೋಡು ಗ್ರಾಮ‌ಪಂಚಾಯಿತಿ ಸದಸ್ಯರು ತಾಲೂಕು ಪಂಚಾಯಿತಿ ಕಾರ್ಯಾಲಯದ ಮುಂದೆ ಪ್ರತಿಭಟನೆ ಮಾಡಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಎಲ್ಲೋಡು ಗ್ರಾಮ ಪಂಚಾಯಿತಿ ಸದಸ್ಯ ವೈ.ಎ.ಹರೀಶ್ ಮಾತನಾಡಿ, ಸುಮಾರು 6 ತಿಂಗಳ ಹಿಂದೆ ತಾಲೂಕು ಪಂಚಾಯಿತಿ ಕಾರ್ಯಲಯಕ್ಕೆ ಸರಕಾರದಿಂದ 2 ಕೋಟಿ ಅನಿರ್ಬಂಧಿತ ಅನುದಾನ ಬಿಡುಗಡೆ ಮಾಡಿದ್ದು ಈ ಅನುದಾನವನ್ನು ಶಾಸಕರ ಬೆಂಬಲಿಗರು ಮಾತ್ರ ಕೆಲಸ ನಿರ್ವಹಿಸುವಂತೆ ಅವರಿಗೆ ಇಷ್ಟಬಂದ ಹಾಗೇ ಕ್ರೀಯಾ ಯೋಜನೆ ಸಿದ್ದಪಡಿಸಿಕೊಂಡು ಅನುದಾನ ದುರುಪಯೋಗಪಡಿಸಿಕೊಳ್ಳಲು ಸಿದ್ದರಾಗಿದ್ದಾರೆ ಕೂಡಲೇ ಈಗ ಅನುಮೋದನೆ ಆಗಿರುವ ಕ್ರೀಯಾ ಯೋಜನೆಯನ್ನು ರದ್ದು ಪಡಿಸಿ ಯಾವ ಯಾವ ಗ್ರಾಮಗಳಲ್ಲಿ ಏನೇನು ಸಮಸ್ಯೆಗಳಿವೆ ಎಂದು ಪಟ್ಟಿ ಮಾಡಿ ಪ್ರತಿ ಹಳ್ಳಿಗೂ ಅನುದಾನವನ್ನು ಬಳಕೆ ಮಾಡಬೇಕು ಎಂದು ಒತ್ತಾಯಿಸಿದರು. ಇದಲ್ಲದೇ ಈ ಅನುದಾನದಲ್ಲಿ ದಲಿತ ವಿರೋಧಿ ಹಾಗೂ ಪ್ರಾದೇಶಿಕ ಅಸಮಾನತೆಯಿಂದ ಕೂಡಿದೆ, ಅಧಿಕಾರಿಗಳು ಮತ್ತು ಶಾಸಕರು ಕುಮ್ಮಕ್ಕಾಗಿ ಅನುದಾನ ಬಿಡುಗಡೆ ಮಾಡಿಕೊಳ್ಳಲು ತಾರತೂರಿಯಲ್ಲಿ ಕ್ರೀಯಾ ಯೋಜನೆಗಳು ಸಿದ್ದಪಡಿಸಿ ಅನುದಾನ ದುರುಪಯೋಗ ಮಾಡಿಕೊಳ್ಳಲು ಮುಂದಾಗಿದ್ದಾರೆ, ತಾಲೂಕಿನಾದ್ಯಂತ ಅನೇಕ ಗ್ರಾಮಗಳಲ್ಲಿ ಸಮಸ್ಯೆಗಳು ಇವೆ ಆದರೆ ಶಾಸಕರ ಅನುಯಾಯಿಗಳು ಎಲ್ಲಿ ಕೆಲಸ ಮಾಡಿದರೆ ಹಣ ಉಳಿತಾಯ ಆಗುತ್ತದೆ ಅದೇ ಕಾಮಗಾರಿಗಳನ್ನು ಮಾಡಲು ಕ್ರೀಯಾಯೋಜನೆ ಸಿದ್ದಪಡಿಸಿಕೊಂಡಿದ್ದಾರೆ ಆದ್ದರಿಂದ ಕೂಡಲೇ ಸಿ.ಇ.ಒ ರವರು ಮತ್ತೆ ಪರಿಶೀಲನೆ ಮಾಡಿ ಈಗ ಮಾಡಿರುವ ಪಟ್ಟಿಯನ್ನು ರದ್ದು ಮಾಡಿ ತಾಲೂಕಿನಾದ್ಯಂದ ಇರುವ ಎಲ್ಲಾ ಗ್ರಾಮ ಪಂಚಾಯಿಗಳ ಸದಸ್ಯರ ಸಭೆ ಮಾಡಿ ಯಾವ ಗ್ರಾಮಗಳಲ್ಲಿ ಸಮಸ್ಯೆ ಗಳು ಇವೆ ಎಂದು ತಿಳಿದುಕೊಂಡು ಆ ಗ್ರಾಮಗಳಿಗೆ ಅನುದಾನ ಬಳಸುವಂತಹ ಕ್ರೀಯಾ ಯೋಜನೆ ಮಾಡಬೇಕೆಂದು ತಿಳಿಸಿದರು.
ನಂತರ ನರಸಾಪುರ ಶ್ರೀನಾಥ್ ಮಾತನಾಡಿ, ತಾಲೂಕು ಪಂಚಾಯತಿ ಅಧಿಕಾರಿಗಳು ಸರಕಾರಿ ಆದೇಶವನ್ನು ಗಾಳಿಗೆ ತೂರಿ ಅವರಿಗೆ ಇಷ್ಟ ಬಂದ ಹಾಗೆ ಕ್ರೀಯಾಯೋಜನೆ ಸಿದ್ದಪಡಿಸಿದ್ದಾರೆ, ಅನುದಾನ ವಾಪಸ್ ಹೋಗುತ್ತೆ ಎಂದು‌ ಹೇಳಿಕೊಂಡು ವರ್ಷದ ಅಂತಿಮದಲ್ಲಿ ತಾರತೂರಿಯಲ್ಲಿ ಅವೈಜ್ಞಾನಿಕವಾಗಿ  ಕ್ರೀಯಾ ಯೋಜನೆಯನ್ನು ಸಿದ್ದಪಡಿಸಿದ್ದು ಇದು‌ ಕೇವಲ ಕಾಂಗ್ರೆಸ್ ‌ಪಕ್ಷದ ಮುಖಂಡರ ಕ್ರೀಯಾ ಯೋಜನೆಯಾಗಿದೆಂದು ಕೂಡಲೇ ಕ್ರೀಯಾ ಯೋಜನೆ ಬದಲಾವಣೆ ಮಾಡದಿದ್ದಲ್ಲಿ ನಾವು ನ್ಯಾಯಾಲಯದಲ್ಲಿ ಅನುದಾನ ದುರುಪಯೋಗದಡಿ ದೂರು ದಾಖಲಿಸುತ್ತೆವೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮುತ್ಯಾಲಪ್ಪ, ಹರೀಶ್, ಸೊಮೇನಹಳ್ಳಿ ಕಿರಣ್, ಆದಿನಾರಾಯಣಪ್ಪ, ಬಾಬುರೆಡ್ಡಿ, ಬಿ ಜೆ ಪಿ ಮುಖಂಡ ಜಿ ಎ ಅಮರೇಶ್ ಸೇರಿ ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments