Saturday, April 20, 2024
spot_img
HomeChikballapur“ಕೈವಾರ ತಾತಯ್ಯ ಜಯಂತಿ ಘೋಷಣೆ ಸಂತಸ” – ಡಾ.ಎಂ.ಆರ್.ಜಯರಾಮ್, ಧರ್ಮಾಧಿಕಾರಿಗಳು ಸದ್ಗುರು ಶ್ರೀ ಯೋಗಿನಾರೇಯಣ ಮಠ,...

“ಕೈವಾರ ತಾತಯ್ಯ ಜಯಂತಿ ಘೋಷಣೆ ಸಂತಸ” – ಡಾ.ಎಂ.ಆರ್.ಜಯರಾಮ್, ಧರ್ಮಾಧಿಕಾರಿಗಳು ಸದ್ಗುರು ಶ್ರೀ ಯೋಗಿನಾರೇಯಣ ಮಠ, ಶ್ರೀಕ್ಷೇತ್ರ ಕೈವಾರ

ಕರ್ನಾಟಕ ರಾಜ್ಯದ ಘನ ಸರ್ಕಾರದ ವತಿಯಿಂದ ಇಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎಸ್.ಆರ್.ಬೊಮ್ಮಾಯಿರವರು ತಮ್ಮ ಅಧಿಕಾರಾವಧಿಯ ಈ ವರ್ಷದ ಚೊಚ್ಚಲ ಬಜೆಟ್ ಭಾಷಣವನ್ನು ಮಂಡಿಸಿದ್ದಾರೆ. ಅವರಿಗೆ ಶ್ರೀ ಕ್ಷೇತ್ರ ಕೈವಾರ ಶ್ರೀಯೋಗಿನಾರೇಯಣ ತಾತಯ್ಯನವರ ಮಠದ ವತಿಯಿಂದ ಅಭಿನಂದನೆಗಳನ್ನು ಹಾಗೂ ಯಶಸ್ಸನ್ನು ಹಾರೈಸುತ್ತೇನೆ.
ಬಜೆಟ್‌ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಶ್ರೀಕ್ಷೇತ್ರ ಕೈವಾರದಲ್ಲಿ ಯೋಗ ಸಮಾಧಿಯಲ್ಲಿ ವಿರಾಜಮಾನರಾಗಿ ಎಲ್ಲಾ ಭಕ್ತಿ ಸಮುದಾಯವನ್ನು ಆರ್ಶಿರ್ವದಿಸುತ್ತಿರುವ ಶ್ರೀ ಯೋಗಿ ನಾರೇಯಣ ಯತೀಂದ್ರರ ಜಯಂತಿಯನ್ನು ಪ್ರತಿವರ್ಷ ಮಾರ್ಚ್ ತಿಂಗಳ 27 ರಂದು ಆಚರಿಸಬೇಕೆಂದು ಘೋಷಣೆ ಮಾಡಿ ಆದೇಶಿಸಿದ್ದಾರೆ.
ಈ ಮಹತ್ತರವಾದ ಆದೇಶವನ್ನು ಮಾಡಿ ತೀರ್ಮಾನ ತೆಗೆದುಕೊಂಡ ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎಸ್.ಆರ್.ಬೊಮ್ಮಯಿರವರಿಗೆ ಹಾಗೂ ಘನ ಸರ್ಕಾರದ ಎಲ್ಲಾ ಮಂತ್ರಿಗಳಿಗೆ ಎಲ್ಲಾ ಮಾನ್ಯ ಶಾಸಕರುಗಳಿಗೆ ಹಾಗೂ ಆಧಿಕಾರಿವರ್ಗದವರಿಗೂ ಕೈವಾರ ಶ್ರೀ ಯೋಗಿ ನಾರೇಯಣ ಯತೀಂದ್ರರ ಮಠದ ವತಿಯಿಂದ ಹಾಗೂ ಶ್ರೀ ಮಠದ ಎಲ್ಲಾ ಭಕ್ತರ ಪರವಾಗಿ ಅನಂತ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.
ಕೈವಾರ ಯೋಗಿನಾರೇಯಣ ಯತೀಂದ್ರರು ಕೈವಾರದ ಆರಾಧ್ಯ ದೈವ ಶ್ರೀ ಅಮರನಾರೇಯಣ ಸ್ವಾಮಿಯವರ ಪರಮಭಕ್ತರಾಗಿ, ತೆಲುಗು ಕನ್ನಡ ಭಾಷೆಗಳಲ್ಲಿ ಅದ್ವೀತಿಯವಾದ ಅಧ್ಯಾತ್ಮ ಚಿಂತನೆಗಳನ್ನೊಳಗೊAಡ ಕೀರ್ತನೆಗಳನ್ನು, ಕಾಲಜ್ಞಾನ, ತತ್ತ÷್ವಪದಗಳು, ವೇದಾಂತ ಸಾರಾವಳಿಗಳನ್ನು ಸರಳ ಭಾಷೆಯಲ್ಲಿ ರಚಿಸಿ ಹಾಡಿ, ಪಾಡಿ ಭಕ್ತರ ಅಭ್ಯುದಯಕ್ಕಾಗಿ ತಮ್ಮ ಜೀವಿತವನ್ನೇ ಮೂಡುಪಾಗಿಟ್ಟಿದ್ದರು. ಕರ್ನಾಟಕ ಸೇರಿದಂತೆ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳ ಎಲ್ಲಾ ಹಳ್ಳಿ ಹಾಗೂ ಪಟ್ಟಣಗಳಲ್ಲಿ ಶ್ರೀ ಯೋಗಿ ನಾರೇಯಣ ಯತೀಂದ್ರರು ಸಂಚರಿಸಿ ಸಾಮಾನ್ಯ ಜನರ ಒಳಿತಿಗಾಗಿ ಯಾವುದೇ ಜಾತಿ, ಜನಾಂಗ ಹಾಗೂ ಬೇಧಭಾವವಿಲ್ಲದೆ ಕೀರ್ತನೆಗಳನ್ನು ಹಾಡಿ ತಾತಯ್ಯನವರು ಎಂದು ಜನಪ್ರಿಯರಾಗಿದ್ದಾರೆ.
ಇಂತಹ ಸಂತರು, ದಾರ್ಶನಿಕರು, ಸಾಧಕರನ್ನು ಸ್ಮರಿಸಿ ಅವರ ಜಯಂತಿ ಆಚರಣೆಗೆ ಮುಂದಾದ ಘನ ಸರ್ಕಾರಕ್ಕೆ ಶ್ರೀ ಮಠದ ವತಿಯಿಂದ ಮತ್ತೊಮ್ಮೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಡಾ||ಎಂ.ಆರ್.ಜಯರಾಮ್
ಧರ್ಮಾಧಿಕಾರಿಗಳು
ಸದ್ಗುರು ಶ್ರೀಯೋಗಿನಾರೇಯಣ ಮಠ,
ಕೈವಾರ, ಚಿಂತಾಮಣಿ ತಾಲ್ಲೂಕು
ಚಿಕ್ಕಬಳ್ಳಾಪುರ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments