Sunday, September 24, 2023
spot_img
HomeBangaloreಮರಾಠ ಸಮುದಾಯದ ಶ್ರೀಮಂತ ಪಾಟೀಲ್ ರವರಿಗೆ ಸಚಿವ ಸ್ಥಾನ , ಮರಾಠ ನಿಗಮ ಮಂಡಳಿಗೆ ಅಧ್ಯಕ್ಷ...

ಮರಾಠ ಸಮುದಾಯದ ಶ್ರೀಮಂತ ಪಾಟೀಲ್ ರವರಿಗೆ ಸಚಿವ ಸ್ಥಾನ , ಮರಾಠ ನಿಗಮ ಮಂಡಳಿಗೆ ಅಧ್ಯಕ್ಷ ಸ್ಥಾನ ನೇಮಕ ಮಾಡಿ ಎಂದು ಒತ್ತಾಯ

ಕರ್ನಾಟಕ ಕ್ಷತ್ರಿಯ ಮಹಾ ಒಕ್ಕೂಟದ (ರಿ)ವತಿಯಿಂದ  ಸಚಿವ ಸಂಪುಟ ವಿಸ್ತರಣೆಯಲ್ಲಿ ಮರಾಠ ಜನಾಂಗಕ್ಕೆ ಪ್ರಾತಿನಿಧ್ಯ. ಮರಾಠ ಅಭಿವೃದ್ದಿ ನಿಗಮ ಕಾರ್ಯವೈಖರಿ .ಮರಾಠ ಸಮುದಾಯದ ಬಗ್ಗೆ ರಾಜಕೀಯ ಪರಿಸ್ಥಿತಿ ಬಗ್ಗೆ ರಾಜ್ಯ ಮಟ್ಟದ ಸಮಾವೇಶ  ಏರ್ಪಡಿಸಿದ್ದರು.ಕರ್ನಾಟಕ ಕ್ಷತ್ರಿಯ ಮರಾಠ ಒಕ್ಕೂಟದ ಅಧ್ಯಕ್ಷರಾದ ಶ್ಯಾಮ್ ಸುಂದರ್ ಗಾಯಕ್ ವಾಡ್ ಮತ್ತು ಉಪಾಧ್ಯಕ್ಷರಾದ ಭಾಹೂಸಾಹೇಬ್ ,ಚಿಕ್ಕೂಡಿ ಜಿಲ್ಲಾಧ್ಯಕ್ಷರಾದ ವಿನಾಯಕ ದೇಸಾಯಿ ,ಗದಗ್ ಜಿಲ್ಲಾಧ್ಯಕ್ಷರಾದ ವಿನಿತಾ ಕುಮಾರ್ ಮತ್ತು ವಿಜಯಪುರ ಜಿಲ್ಲಾಧ್ಯಕ್ಷರಾದ ರಾಹುಲ್ ಜಾಧವ್ ರವರು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಕ್ಷತ್ರಿಯ ಮರಾಠ ಒಕ್ಕೂಟದ ಅಧ್ಯಕ್ಷರಾದ ಶ್ಯಾಮ್ ಸುಂದರ್ ಗಾಯಕ್ ವಾಡ್ ರವರು ಮಾತನಾಡಿ ಮರಾಠ ಸಮಾಜವು ಬಹಳ ಬಡತನದಲ್ಲಿದ್ದು ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಲ್ಲಿ 50 ಲಕ್ಷಕ್ಕು ಹೆಚ್ಚು ಜನಸಂಖ್ಯೆ ನೆಲಿಸಿದ್ದಾರೆ. 50ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರದಲ್ಲಿ ನಿರ್ಣಾಯಕರಾಗಿದ್ದಾರೆ .

ಕಳೆದ 20 ವರ್ಷಗಳಿಂದ ಹಲವಾರು ಬೇಡಿಕೆಗಳಿಗೆ ಮನವಿ ಮಾಡುತ್ತಿದ್ದರು. ಕಾಂಗ್ರೇಸ್ ಸರ್ಕಾರದವರು ಮತ್ತು ಬಿ.ಜೆ.ಪಿ. ಸರ್ಕಾರದವರು ಬರಿ ಆಶ್ವಾಸನೆ ನೀಡಿ ಕಾಲ ಕಳೆಯುತ್ತಿದ್ದಾರೆ. ಮರಾಠ ಸಮುದಾಯದ ಶ್ರೀಮಂತ ಪಾಟೀಲ್ ರವರಿಗೆ ಸಚಿವ ಸ್ಥಾನ ಮತ್ತು ಕಳೆದ 15ತಿಂಗಳಿಂದ ಮರಾಠ ನಿಗಮ ಮಂಡಳಿಗೆ ಅಧ್ಯಕ್ಷರು ,ನಿರ್ದೇಶಕರ ನೇಮಕ ಮಾಡಬೇಕು ಮತ್ತು ಮರಾಠ ಸಮಾಜವನ್ನು 3ಬಿಯಿಂದ 2ಎ ಸೇರ್ಪಡೆ ಮಾಡಬೇಕು ಹಾಗೂ ವಿಧಾನಸಭೆ ನಗರ ಪಾಲಿಕೆ ,ಪಂಚಾಯಿತಿ, ತಾಲ್ಲೂಕ್ ಪಂಚಾಯಿತಿ ಮರಾಠ ಸಮಾಜದ ಅಭ್ಯರ್ಥಿಗಳಿಗೆ ನೀಡಬೇಕು ಎಂಬ ಬೇಡಿಕೆಗಳು .

ಬಿ.ಜೆ.ಪಿ. ಸರ್ಕಾರ ಬಂದು 24 ಗಂಟೆಯೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಡುತ್ತೇವೆಂದು ವಾಗ್ದಾನ ನೀಡಿದ ಮಾಜಿ ಬಿ.ಎಸ್.ಯಡಿಯೂರಪ್ಪನವರು 24 ತಿಂಗಳು ಮುಖ್ಯಮಂತ್ರಿ ಪದವಿಯಲ್ಲಿದ್ದರು ಮರಾಠ ಸಮಾಜದ ಯಾವುದೇ ಒಂದು ಬೇಡಿಕೆಗಳನ್ನು ಈಡೇರಿಸಲಿಲ್ಲ. ಮುಖ್ಯಮಂತ್ರಿಗಳಾದ ಬಸವರಾಜು ಬೊಮ್ಮಾಯಿ ರವರು ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಡುತ್ತೇವೆಂದು ಹೇಳಿ 5 ತಿಂಗಳಾದರು ನಮ್ಮ ಬೇಡಿಕೆಗಳನ್ನು ಈಡೇರಿಸಲಿಲ್ಲ. ಇದರಿಂದ ಕರ್ನಾಟಕ ಮರಾಠ ಸಮಾಜ ಬಹಳವಾಗಿ ನೊಂದಿದ್ದಾರೆ ಹಾಗೂ ಸಮಾಜಕ್ಕೆ ಅನ್ಯಾಯವಾಗಿದೆ.  ಮರಾಠ ಸಮಾಜದ ಬಿ.ಜೆ.ಪಿ.ಪಕ್ಷದ ಬಗ್ಗೆ ಒಲವು ಇದೆ ಅವರಿಗೆ ಆದ ಆನ್ಯಾಯ ಸಹಿಸದೇ ಬೆಳಗಾಂ ಲೋಕಸಭಾ ಉಪ ಚುನಾವಣೆ ಮತ್ತು ಹಾನಗಲ್ಲು ವಿಧಾನಸಭಾ ಉಪ ಚುನಾವಣೆ ಹಾಗೂ ಬೆಳಗಾಂ ವಿಧಾನಪರಿಷತ್ ಚುನಾವಣೆಯಲ್ಲಿ ಮರಾಠ ಸಮುದಾಯ ಬಿ.ಜೆ.ಪಿ.ವಿರುದ್ದ ಮತ ನೀಡಿ ಸೋಲಿಗೆ ಕಾರಣರಾದರು.ಆದ್ದರಿಂದ ಮರಾಠ ಸಮುದಾಯದಕ್ಕೆ ಆದ ಆನ್ಯಾಯವನ್ನು ಮುಖ್ಯಮಂತ್ರಿಗಳು ಸರಿಪಡಿಸಬೇಕು. ಬೇಡಿಕೆಗಳನ್ನು ಫೆಬ್ರವರಿ ಅಂತ್ಯದೊಳಗೆ ಈಡೇರಿಸಿಕೊಡಬೇಕೆಂದು ಎಂಬ ಒತ್ತಾಯ, ಇಲ್ಲದೇ ಹೋದರೆ 19ನೇ ತಾರೀಖು ಶಿವಾಜಿ ಜಯಂತಿ ದಿನದಂದು ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments