Tuesday, September 26, 2023
spot_img
HomeChikballapurನಿವೃತ್ತ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಪಟ್ಟಿ ಬಿಡುಗಡೆ

ನಿವೃತ್ತ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಪಟ್ಟಿ ಬಿಡುಗಡೆ

ಚಿಂತಾಮಣಿ: ತಾಲ್ಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ಮಾಸಿಕ ಸಭೆಯು ನಗರದಲ್ಲಿರುವ ಸಂಘದ ಕಾರ್ಯಾಲಯದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ನಾರಾಯಣಸ್ವಾಮಿಯವರು ಸಂಘದ ಕಾರ್ಯಕಾರಿ ಸಮಿತಿಗೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯರ ಹಾಗೂ ನಾಮನಿರ್ದೇಶಿತಗೊಂಡಿರುವ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದರು. ಸಭೆಯಲ್ಲಿ ವ್ಯಕ್ತವಾದ ನಿವೃತ್ತ ನೌಕರರ ಕುಂದು ಕೊರತೆಗಳನ್ನು ಗಂಭೀರವಾಗಿ ಆಲಿಸಿದ ಅವರು ಇವುಗಳ ಬಗ್ಗೆ ಗಮನಹರಿಸಿ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರಲ್ಲದೆ, ಈ ಬಾರಿಯ ರಾಜ್ಯದ ಬಜೆಟ್‌ನಲ್ಲಿ ನಿವೃತ್ತ ಸರ್ಕಾರಿ ನೌಕರರಿಗೂ ಫೆನ್ಷನ್‌ದಾರರಿಗೂ ಸಹ ಸೌಲಭ್ಯಗಳು ದೊರೆಯುವ ಸಾಧ್ಯತೆಗಳು ಇವೆ ಎಂಬ ಅಶಯವನ್ನು ವ್ಯಕ್ತಪಡಿಸಿದರು.

ಖ್ಯಾತ ಜನಪದ ಕಲಾವಿದರಾದ ಜಿ.ಮುನಿರೆಡ್ಡಿ ಮತ್ತು ತಂಡದವರು ಗಾಯನ ಕಾರ್ಯಕ್ರಮವನ್ನು ನಡೆಸಿಕೊಡುವುದರ ಮೂಲಕ ಹಿರಿಯ ಚೇತನಗಳಿಗೆ ಮುದ ನೀಡಿದರು.

ಹನುಮಂತಯ್ಯನವರಿAದ ಪ್ರಾರ್ಥನೆ, ಎಸ್.ಅಂಜನಪ್ಪರಿAದ ಸ್ವಾಗತ, ಸೈಯದ್ ಗಫಾರ್‌ರಿಂದ ವಂದನಾರ್ಪಣೆ ಹಾಗೂ ಎ.ಎಸ್.ರಾಮಚಂದ್ರಮೂರ್ತಿರಿAದ ನಿರೂಪಣೆ ನಡೆಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments