Friday, April 26, 2024
spot_img
HomeTumkurಅಸ್ಪಷ್ಠತೆ ನಿರ್ಮೂಲನೆಗೆ ಅರಿವು ಅಗತ್ಯ

ಅಸ್ಪಷ್ಠತೆ ನಿರ್ಮೂಲನೆಗೆ ಅರಿವು ಅಗತ್ಯ

ಪಾಲಾರ್ ಪತ್ರಿಕೆ | Palar Pathrike

ತುಮಕೂರು : ಅಸ್ಪೃಷ್ಯತೆ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ ಜನರಲ್ಲಿ ಜಾಗೃತಿ ಮೂಡಿಸಿದಾಗ ಮಾತ್ರ ಸಮಾಜದಲ್ಲಿ ಅಸ್ಪೃಷ್ಯತೆ ಹೋಗಲಾಡಿಸಲು ಸಾಧ್ಯವಾಗುತ್ತದೆ ಎಂದು ಗುಬ್ಬಿಯ ಉಪತಹಶೀಲ್ದಾರ್ ಶಶಿಕಲಾ ತಿಳಿಸಿದರು.
ಅವರು ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ಡಾ. ಬಿ.ಆರ್ ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ ಹಾಗೂ ರಾಷ್ಟಿçÃಯ ಸೇವಾ ಯೋಜನೆಯ ಸಹಯೋಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಸ್ಪೃಷ್ಯತಾ ನಿಮೂಲನಾ ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು, ಅಸ್ಪೃಷ್ಯತೆ ಆಚರಣೆ ಒಂದು ಅಪರಾಧವಾಗುತ್ತದೆ ಎಂದರು.
ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ರಾಮಣ್ಣ ಮಾತನಾಡಿ, ಪರಿಶಿಷ್ಠ ಜಾತಿ/ಪಂಗಡದವರ ಮೇಲೆ ದೌರ್ಜನ್ಯ ನಡೆಸುವುದು ಕಾನೂನಿನ ಪ್ರಕಾರ ಅಪರಾಧವಾಗುತ್ತದೆ ಹಾಗೂ ಅಸ್ಪೃಷ್ಯತೆ ಆಚರಣೆ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದರು.
ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದ ಸಿದ್ದಾರ್ಥ ಕಾಲೇಜಿನ ಪ್ರಾಧ್ಯಾಪಕ, ಡಾ. ರಂಗಸ್ವಾಮಿ ಎಂ.ಆರ್ ಅವರು ದೌರ್ಜನ್ಯ ಪ್ರತಿಬಂಧಕ ಕಾಯ್ದೆ ಬಗ್ಗೆ ಮಾತನಾಡುತ್ತಾ ಇಂದಿನ ದಿನಗಳಲ್ಲಿ ಮಹಿಳೆಯರು, ಮಕ್ಕಳು, ದಲಿತರು, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ದೌರ್ಜನ್ಯಕ್ಕೊಳಗಾದವರು ಕಾನೂನಾತ್ಮಕವಾಗಿ ಪರಿಹಾರ ಪಡೆಯಬೇಕು ಎಂದರು.
ಡಾ.ಬಿ.ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಶೋದನಾ ಸಹಾಯಕರಾದ ಲಕ್ಷಿö್ಮÃರಂಗಯ್ಯ ಮಾತನಾಡಿ, ಎಸ್.ಸಿ.ಪಿ/ ಟಿ.ಎಸ್.ಪಿ ಯೋಜನೆಗಳ ಬಗ್ಗೆ ಸಮಗ್ರವಾದ ವಿಷಯ ಮಂಡಿಸಿದರು, ಸರ್ಕಾರದ ವಿವಿಧ ಇಲಾಖೆಗಳು ಪರಿಶಿಷ್ಠ ಜಾತಿ/ಪಂಗಡದವರ ಏಳಿಗೆಗಾಗಿ ಸರ್ಕಾರಿ ಯೋಜನೆ-ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದಾಗ ಮಾತ್ರ ಜಾತ್ಯಾತೀತ ನೆಲೆಗಟ್ಟಿನಲ್ಲಿ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಜ್ಯೋತಿ ಮಾತನಾಡಿ, ಯುವ ಜನತೆಯು ಅಸ್ಪೃಷ್ಯತೆ ಬಗ್ಗೆ ಸೈದ್ದಾಂತಿಕವಾಗಿ ತಿಳಿದುಕೊಂಡಿದ್ದಾರೆ. ಆದರೆ ಈ ಕಾರ್ಯಾಗಾರದಲ್ಲಿ ಅದರ ಸೂಕ್ಷö್ಮತೆಗಳ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇಂತಹ ಕಾರ್ಯಗಾರಗಳು ಹೆಚ್ಚೆಚ್ಚು ನಡೆಯಲಿ ಎಂದರು.
ಕಾರ್ಯಾಗಾರದಲ್ಲಿ ಎನ್.ಎಸ್.ಎಸ್ ಅಧಿಕಾರಿ ಮನೋಹರ್ ಬಾಬು ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ಗುಬ್ಬಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಅಧಿಕ ಸಂಖ್ಯೆಯ ಜನರು ಭಾಗವಹಿಸಿದ್ದರು, ಡಾ.ಬಿ.ಆರ್ ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ ಅಧ್ಯಕ್ಷ ರಾಜಶೇಖರ್ ಕಾರ್ಯಕ್ರಮವನ್ನು ನಿರೂಪಿಸಿದರು, ಪ್ರಾದ್ಯಾಪಕಿ ಅರುಣಕುಮಾರಿ ಸ್ವಾಗತಿಸಿ ಹೇಮಲತ ಪ್ರಾರ್ಥಿಸಿದರು ಕಾಳಪ್ಪ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments