Thursday, May 2, 2024
spot_img
HomeTumkurಶ್ರೀದೇವಿ ಇಂಜಿನಿಯರಿoಗ್ ಕಾಲೇಜಿನಲ್ಲಿ ರಾಜ್ಯಮಟ್ಟದ ಅನ್ವೇಷಣಾ ಕಾರ್ಯಾಗಾರ

ಶ್ರೀದೇವಿ ಇಂಜಿನಿಯರಿoಗ್ ಕಾಲೇಜಿನಲ್ಲಿ ರಾಜ್ಯಮಟ್ಟದ ಅನ್ವೇಷಣಾ ಕಾರ್ಯಾಗಾರ

ಪಾಲಾರ್ ಪತ್ರಿಕೆ | Palar Patrike

ತುಮಕೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ನವ ಮನ್ವಂತರಕ್ಕೆ ನಾಂದಿಯಾಗಲಿದೆ: ಡಾ.ಎಂ.ಆರ್.ಹುಲಿನಾಯ್ಕರ್ ಕರೆ ದೇಶದಲ್ಲಿ ಜಾರಿಯಾಗುತ್ತಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಾಯೋಗಿಕ ಕಲಿಕೆ ಮತ್ತು ಅನ್ವಯಿಕ ತಾಂತ್ರಿಕ ವಿಧಾನಗಳಿಗೆ ಹೆಚ್ಚು ಒತ್ತು ನೀಡಿ ಕೇವಲ ಥಿಯರಿ ಅಥವಾ ಸೈದ್ಧಾಂತಿಕ ಜ್ಞಾನಕ್ಕೆ ಸೀಮಿತಗೊಳಿಸಿಕೊಳ್ಳದೆ ಮುನ್ನಡೆಯುತ್ತಿರುವುದರಿಂದ ಭವಿಷ್ಯದಲ್ಲಿ ವೈದ್ಯಕೀಯ ತಾಂತ್ರಿಕ ಮತ್ತು ಮೂಲವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಗೆ ಅವಕಾಶಗಳು ದೊರೆತು ನವ ಮನ್ವಂತರಕ್ಕೆ ನಾಂದಿಯಾಗಲಿದೆಯೆAಬ ಆಶಯವನ್ನು ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಮುಖ್ಯಸ್ಥರಾದ ಡಾ.ಎಂ.ಆರ್.ಹುಲಿನಾಯ್ಕರ್‌ರವರು ನುಡಿದರು.
ನಗರದ ಶ್ರೀದೇವಿ ಇಂಜಿನಿಯರಿAಗ್ ಕಾಲೇಜಿನಲ್ಲಿ ನವೆಂಬರ್ ೨೫ ರಂದು ಬೆಳಿಗ್ಗೆ ೧೧ ಗಂಟೆಗೆ ಆಯೋಜಿಸಿದ್ದ “ಶ್ರೀಅನ್ವೇಷಣಾ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಅಂತಿಮ ವರ್ಷದ ಪಿಯುಸಿ ವಿದ್ಯಾರ್ಥಿಗಳಿಗಾಗಿ ರೂಪಿಸಿದ್ದ ಕಥನಾ ನಿರೂಪಣೆ, ಕ್ವಿಜ್, ಪ್ರಾಯೋಗಿಕ ಮಾದರಿ ಮತ್ತು ಬಿತ್ತಿಪತ್ರಗಳ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನದ ವಿಷಯಗಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ಮತ್ತು ಇತರರು ಪ್ರಯೋಜನ ಪಡೆದುಕೊಳ್ಳಬೇಕೆಂದು ಉತ್ತೇಜಿಸಿದರು.
ಸಮಾರಂಭದ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದ ವಿದ್ಯಾವಾಹಿನಿ ವಿದ್ಯಾಸಂಸ್ಥೆಗಳ ಕಾರ್ಯದರ್ಶಿಯಾದ ಎನ್.ಬಿ.ಪ್ರದೀಪ್‌ಕುಮಾರ್‌ರವರು ವಿದ್ಯಾರ್ಥಿಗಳು ಪರೀಕ್ಷೆಗಳಲಿ,್ಲ ಸಿಇಟಿಗಳಲ್ಲಿ ಹೆಚ್ಚಿನ ಅಂಕ ಮತ್ತು ರ‍್ಯಾಕಿಂಗ್ ಗಳಿಸುತ್ತಿರುವುದು ಶ್ಲಾಘನೀಯವಾದರೂ ಕಲಿಕೆ ಮೂಲ ಜ್ಞಾನವನ್ನು ಅರ್ಥೈಸಿಕೊಳ್ಳುವಲ್ಲಿ ಕೊರತೆಯಿರುವುದನ್ನು ವಿಶಿಷ್ಟ ಗಣಿತ ಸಮೀಕರಣಗಳನ್ನು ಉಲ್ಲೇಖಿಸಿ ವಿವರಿಸಿ, ಹೊರದೇಶಗಳಲ್ಲಿ ಮೂಲಜ್ಞಾನದ ಅರಿವು ಹೆಚ್ಚಿನ ಮಟ್ಟದಲ್ಲಿ ಸಾಧ್ಯವಾಗುತ್ತಿರುವುದರಿಂದ ಉತ್ತಮ ಸಂಶೋಧನೆಗಳು ನಡೆಯುತ್ತಿವೆಯೆಂದರು. ಪಠ್ಯಕ್ರಮದಲ್ಲಿ ಅಧಿಕ ವಿಷಯಗಳನ್ನು ತುಂಬಿ ವಿದ್ಯಾರ್ಥಿಗಳು ಭಾರ ಹೊರುವುದೇ ಹೆಚ್ಚಾಗುತ್ತಿಯೆಂದು ಆತಂಕ ವ್ಯಕ್ತಪಡಿಸಿ, ಶ್ರೀದೇವಿ ಇಂಜಿನಿಯರಿAಗ್ ಕಾಲೇಜಿನವರು ಆಯೋಜಿಸಿರುವ ವಿಜ್ಞಾನ ಪ್ರತಿಭಾ ಪ್ರದರ್ಶನ ಮತ್ತು ಸ್ಪರ್ಧೆಗಳು ಹೆಚ್ಚಿನ ರೀತಿಯಲ್ಲಿ ನಡೆಯಬೇಕೆಂದು ತಿಳಿಸಿದರು.
ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶಕರಾದ ಎಂ.ಎಸ್.ಪಾಟೀಲ್‌ರವರು ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಜ್ಞಾನ ಮತ್ತು ಮಾನವೀಯ ಮೌಲ್ಯಗಳ ಸಂಬAಧ ಸಮಾಜದ ಆರೋಗ್ಯಕರ ಬೆಳವಣಿಗೆಗೆ ಮತ್ತು ಸಾಮರಸ್ಯಕ್ಕೆ ಅತಿಮುಖ್ಯವಾಗಿರುವುದರಿಂದ ವಿದ್ಯಾರ್ಥಿಗಳು ವಿಜ್ಞಾನದ ಪ್ರತಿಭೆಯನ್ನು ಸಂಶೋಧನೆಗೆ ಬಳಸುವಾಗ ಸಾಮಾನ್ಯ ಜನರಿಗೆ ಅವುಗಳ ಉಪಯುಕ್ತತೆಯನ್ನು ಸದಾ ಗಮನದಲ್ಲಿಟ್ಟು ಕೊಂಡಿರಬೇಕೆAದು ತಿಳಿಸಿ ಸಂಸ್ಥೆಯ ವತಿಯಿಂದ ಇಂತಹ ಸ್ಪರ್ಧಾ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹವಿದೆಯೆಂದು ಭರವಸೆ ನೀಡಿ ಹಾರೈಸಿದರು.
ಶ್ರೀದೇವಿ ಇಂಜಿನಿಯರಿAಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ನರೇಂದ್ರ ವಿಶ್ವನಾಥ್‌ರವರು ಸ್ಪರ್ಧೆಗಳ ಆಶಯ ಮತ್ತು ಸಂಸ್ಥೆಯ ಮಾಹಿತಿ ಮತ್ತು ವರದಿಯನ್ನು ಪ್ರಸ್ತುತ ಪಡಿಸಿದರು. ಪ್ರೊ.ಸಿ.ನಾಗರಾಜ್ ಸ್ವಾಗತಿಸಿ, ನಿರ್ವಹಿಸಿದರು. ಪ್ರಮೋದ್ ಮತ್ತು ಬಿಂದುಶ್ರೀ ಪ್ರಾರ್ಥಿಸಿದರು. ಪ್ರೊ.ಪ್ರವೀಣ್ ಕುಮಾರ್ ವಂದಿಸಿದರು. ಆಡಳಿತಾಧಿಕಾರಿ ಟಿ.ವಿ.ಬ್ರಹ್ಮದೇವಯ್ಯ, ಡಾ.ಕೆ.ಎಸ್.ರಾಮಕೃಷ್ಣ, ಡಾ.ಎನ್.ಚಂದ್ರಶೇಖರ್, ಡಾ.ಸದಾಶಿವಯ್ಯ, ಪ್ರೊ.ಪ್ರತಾಪ್, ಪ್ರೊ.ಎಲ್.ಗಿರೀಶ್, ಡಾ.ಡಿ.ಬಸವೇಶ್, ಪ್ರೊ.ವಿಜಯ್ ಎನ್.ರಾವ್, ಮಹಾಂತೇಶ್, ಡಾ.ಮಹೇಶ್‌ಕುಮಾರ್, ಪ್ರೊ.ಸಿ.ವಿ.ಷಣ್ಮುಖಸ್ವಾಮಿ, ಡಾ.ಸುಹಾಸ್, ಡಾ.ಕಿರಣ್, ಪ್ರೊ.ಇಜಾಜ್ ಅಹ್ಮಮದ್ ಷರೀಫ್, ಡಾ.ಕಿಶೋರ್‌ಕುಮಾರ್ ಮತ್ತು ಇತರೆ ಪಿ.ಯು. ಕಾಲೇಜುಗಳ ಪ್ರಾಂಶುಪಾಲರುಗಳು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ೧೮ ಕಾಲೇಜುಗಳಿಂದ ೫೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಗರದ ಶ್ರೀದೇವಿ ಇಂಜಿನಿಯರಿAಗ್ ಕಾಲೇಜಿನಲ್ಲಿ ನವೆಂಬರ್ ೨೫ ರಂದು ಬೆಳಿಗ್ಗೆ ೧೧ ಗಂಟೆಗೆ ಆಯೋಜಿಸಿದ್ದ “ಶ್ರೀಅನ್ವೇಷಣಾ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಚಿತ್ರದಲ್ಲಿ ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಮುಖ್ಯಸ್ಥರಾದ ಡಾ.ಎಂ.ಆರ್.ಹುಲಿನಾಯ್ಕರ್, ವಿದ್ಯಾವಾಹಿನಿ ವಿದ್ಯಾಸಂಸ್ಥೆಗಳ ಕಾರ್ಯದರ್ಶಿಯಾದ ಎನ್.ಬಿ.ಪ್ರದೀಪ್‌ಕುಮಾರ್, ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶಕರಾದ ಎಂ.ಎಸ್.ಪಾಟೀಲ್, ಶ್ರೀದೇವಿ ಇಂಜಿನಿಯರಿAಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ನರೇಂದ್ರ ವಿಶ್ವನಾಥ್ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments