Wednesday, May 1, 2024
spot_img
HomeChikballapurಸ್ವ-ಸಹಾಯ ಸಂಘದ ಸದಸ್ಯೆಯರ ಉತ್ಪನ್ನಗಳಿಗೆ ಮಧ್ಯರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಗ್ರಾಹಕರನ್ನು ತಲುಪಲು ಸಂಜೀವಿನಿ ಯೋಜನೆಯಡಿ

ಸ್ವ-ಸಹಾಯ ಸಂಘದ ಸದಸ್ಯೆಯರ ಉತ್ಪನ್ನಗಳಿಗೆ ಮಧ್ಯರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಗ್ರಾಹಕರನ್ನು ತಲುಪಲು ಸಂಜೀವಿನಿ ಯೋಜನೆಯಡಿ

ಪಾಲಾರ್ ಪತ್ರಿಕೆ | Palar Patrike

ಶಿಡ್ಲಘಟ್ಟ:  ಸ್ವ-ಸಹಾಯ ಸಂಘದ ಸದಸ್ಯೆಯರ ಉತ್ಪನ್ನಗಳಿಗೆ ಮಧ್ಯರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಗ್ರಾಹಕರನ್ನು ತಲುಪಲು ಸಂಜೀವಿನಿ ಯೋಜನೆಯಡಿ ಆರಂಭಗೊಂಡಿರುವ ಮಾಸಿಕ ಸಂತೆಯು ಅನುಕೂಲಕರವಾಗಿದೆ ಎಂದು ಕಾರ್ಯನಿರ್ವಹಣಾ ಅಧಿಕಾರಿ ಮುನಿರಾಜು ಹೇಳಿದರು.
ತಾಲೂಕಿನ ಮೇಲೂರು ಗ್ರಾಮದ ಸಂತೆ ಮೈದಾನದಲ್ಲಿ ಮಂಗಳವಾರ ಎನ್ ಆರ್ ಎಂ ಎಲ್ ಜಿಲ್ಲಾ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ‘ಸಂಜೀವಿನಿ ಮಾಸಿಕ ಸಂತೆ’ಗೆ ಚಾಲನೆ ನೀಡಿ ಅವರು ಮಾತನಾಡಿದರು.  ಮೇಲೂರು ವಲಯ ಒಕ್ಕೂಟದ ವತಿಯಿಂದ ಸ್ವಸಹಾಯ ಗುಂಪಿನ ಸದಸ್ಯರು ತಾವುಗಳು ಉತ್ಪಾದಿಸಿದ ಉತ್ಪನಗಳನ್ನು ಮಾರಾಟ ಮತ್ತು ಪ್ರದರ್ಶನಮೇಳವನ್ನು ಆಯೋಜಿಸಿದ್ದು, ಸುಮಾರು 30 ಜನ ಸ್ವಸಹಾಯ ಗುಂಪಿನ ಸದಸ್ಯರು ತಾವು ಉತ್ಪಾದನೆ ಮಾಡಿದ ಪದಾರ್ಥಗಳನ್ನು ಮಂಗಳವಾರ ಸಂತೆಯಲ್ಲಿ ಉತ್ತಮ ವ್ಯಾಪಾರ ವಹಿವಾಟು ಆಗುವ ಉದ್ದೇಶದಿಂದ ಹೆಚ್ಚು ಮಾರಾಟ ಮಾಡಬಹುದೆಂದು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಎನ್.ಆರ್. ಎಂ. ಎಲ್ ಜಿಲ್ಲಾ ವ್ಯವಸ್ಥಾಪಕ ಮುನಿರಾಜು ತಿಳಿಸಿದರು
 ಸ್ವಸಹಾಯ ಗುಂಪುಗಳು, ಉತ್ಪಾದಿಸಿದ್ದ ಆಹಾರ ವಸ್ತುಗಳನ್ನು ಸಂಜೀವಿನಿ ಸಂತೆಯಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಇರಿಸಿದ್ದರು. ಸಂತೆಗೆ ಬಂದ ಗ್ರಾಹಕರು ವಸ್ತುಗಳನ್ನು ಖರೀದಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಮೇಲ್ವಿಚಾರಕ ಬಾಲರಾಜು, ನರಸಿಂಹ, ಗ್ರಾಮಪಂಚಾಯಿತಿ ಅಧ್ಯಕ್ಷರಾದ ಉಮೇಶ್, ಗ್ರಾಮಪಂಚಾಯಿತಿ ಉಪಾಧ್ಯಕ್ಷರಾದ ವನಿತಾ, ಚೌಡಸಂದ್ರ ಗಜೇಂದ್ರ, ತಿರುಮಲೇಶ್, ಸದಸ್ಯರಾದ ಎನ್. ರವಿಪ್ರಸಾದ್, ಶಿವಕುಮಾರ್, ದೇವರಾಜ್, ಭಾಗ್ಯಮ್ಮ, ಶಿವಕುಮಾರ್,ಪಿಡಿಓ ಶಾರದಾ, ಸರ್ಕಾರಿ ಮಾದರಿ ಪ್ರೌಢಶಾಲೆಯ ಮುಖ್ಯ್ಯೋಪಾಧ್ಯಾಯರಾದ ಭಾಸ್ಕರ್ ಮತ್ತು ಸಹ ಶಿಕ್ಷಕರು ಹಾಗೂ ಮೇಲೂರು ವಲಯದ ಸರಸ್ವತಿ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಎಲ್ಲಾ ಸ್ತ್ರೀ ಶಕ್ತಿ ಸಂಘದವರು ಪಾಲ್ಗೊಂಡಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments