ಶಿಥಿಲಾವಸ್ಥೆಯಲ್ಲಿರುವ ಗೊರಮಡಗು ಅಂಗನವಾಡಿ ಶಾಲೆ

0
81

ರದಿ.ನಂದಿ ರಾಜೇಶ್ ಶಿಡ್ಲಘಟ್ಟ


ಶಿಡ್ಲಘಟ್ಟ: ತಾಲ್ಲೂಕಿನ ಕೊತ್ತನೂರು ಗ್ರಾಮ ಪಂಚಾಯಿತಿಯ ಗೊರಮಡಗು ಗ್ರಾಮದಲ್ಲಿ ಅಂಗನವಾಡಿ ಶಾಲೆಯಿದ್ದು ಸುಮಾರು ವರ್ಷಗಳಿಂದ ಮೂಲ ಭೂತ ಸೌಕರ್ಯಗಳಿಂದ ವಂಚಿತವಾಗಿದೆ ಎಂದು ಪೋಷಕರು ತಮ್ಮ ಅಳಲನ್ನು ವ್ಯಕ್ತಪಡಿಸಿದರು.


ಹೌದು ಇಲ್ಲಿನ ಅಂಗನವಾಡಿ ಶಾಲೆ ಹೆಸರಿಗೆ ಮಾತ್ರ ಇದೆ ಸುಮಾರು 20 ಮಕ್ಕಳು ಅಕ್ಷರ (ಶಿಕ್ಷಣ)ಕಲಿಯಲು ಬರುತ್ತಾರೆ. ಇಲ್ಲಿನ ವ್ಯವಸ್ಥೆ ನೋಡಿದರೆ ಆಶ್ಚರ್ಯ ಆಗುತ್ತಾದೆ. ಅದೇನೆಂದರೆ ಅಂಗನವಾಡಿ ಶಾಲೆಯ ಬಾಗಿಲಿನ ಮೇಲೆ ಸುಮಾರು ವರ್ಷಗಳಿಂದ ಆಲದ ಮರ ಬೆಳೆದು ದೊಡ್ಡ ಮರವಾಗಿ ಬೆಳೆಯುತ್ತಿದೆ. ಪಾಚಿಕಟ್ಟಿದ ಗೊಡೆಗಳು,ಮೇಲ್ಚಾವಣಿಯ ಮೊಲ್ಡಿಂಗ್ ಸಿಮೆಂಟ್ ಮಕ್ಕಳ ಮೇಲೆ ಬಿಳುತ್ತಿದೆ. ಹೊರಾಂಗಣ ಮೇಲ್ಚಾವಣೆ ಬಿರುಕು ಬಿಟ್ಟಿದ್ದು ಯಾವಾಗ ನೇಲಸಮವಾಗುತ್ತೊ ಗೊತ್ತಿಲ್ಲ! ಇಲ್ಲಿನ ಗೊಡೆಗಳು ನಿವು ಗಮನಿಸಿ ಸಂಪೂರ್ಣ ಬಿರುಕು ಬಿಟ್ಟಿದೆ ಹೊಳಾಂಗಣ ಅಂಗನವಾಡಿ ಒಳಗೆ  ಸತತ ಮಳೆಯಿಂದ ಮೇಲ್ಚಾವಣೆಯಿಂದ ಮಳೆಯ ನೀರು ಸೊರುತ್ತಿರುತ್ತಾದೆ.


 ಇಂತಹ ಕಟ್ಟಡಗಳಿಂದ ಚಿಕ್ಕಮಕ್ಕಳ ಜೀವ ಅಂಗೈಯಲ್ಲಿ ಇಡಿದು ಬರುವಂತಾಗಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು! ಈ ಸಂದರ್ಭದಲ್ಲಿ ಅಂಗನವಾಡಿ ಶಾಲೆಯ ದುಸ್ಥಿತಿ ವಿಕ್ಷಣೇ ಮಾಡಿದ ಪತ್ರಕರ್ತ ಗೊರಮಡಗು ಮೈತ್ರಿ ಲೋಕೇಶ್ ಇಲ್ಲಿನ ಶಾಲೆಯ ಕಟ್ಟಡ 30 ವರ್ಷಗಳ ಹಳೆಯದಾಗಿದ್ದು. ಅಂಗನವಾಡಿ ಮತ್ತು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳೇ ಈ ಶಾಲೆಯ ಕಟ್ಟಡಗಳ ಬಗ್ಗೆ ಅಸಂತೃಪ್ತಿ ವ್ಯಕ್ತಪಡಿಸಿದರು. ಶಾಲೆಯ ಸಂಪೂರ್ಣ ಕಟ್ಟಡ ಶಿತಿಲಾವ್ಯವಸ್ಥೆಯಲ್ಲಿ ಇದ್ದು, ಮುಂದಿನ ದಿನಗಳಲ್ಲಿ ಏನಾದರೂ ಅನಾವತ್ತು ಅದರೆ ಇಲ್ಲಿನ ಮಕ್ಕಳ ಜೀವಕ್ಕೆ ಯಾರು ವಣೆ ?  ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಅತೀಶಿಘ್ರದಲ್ಲೆ ಶಾಲೆಯನ್ನು ಸಂಪೂರ್ಣ ನೇಲಸಮ ಮಾಡಿ ಹೊಸದಾಗಿ ಶಾಲೆ ನಿರ್ಮಾಣ ಮಾಡಬೇಕು ಇಲ್ಲಿನ ಜನಪ್ರತಿನಿಧಿಗಳು ಇದರ ಸಂಪೂರ್ಣ ಜವಾಬ್ದಾರಿ ತೇಗೆದುಕೊಂಡು ಸರ್ಕಾರಿ ಶಾಲೆಗಳನ್ನು ಉಳಿಸಬೇಕು, ಹಾಗೂ ಕಾಪೊಂಡ್ ಕಟ್ಟಡಕ್ಕೆ ಗೇಟ್ ಸಹ ಇರುವುದಿಲ್ಲ, ಶೌಚಾಲಯಗಳು ಅನೈರ್ಮಲ್ಯದಿಂದ ಕೂಡಿರುವ ದುಸ್ಥಿತಿ ವಿಕ್ಷಣೇ ಮಾಡಬಹುದು  ಎಂದು ಮಾಧ್ಯಮಗಳ ಮುಖಾಂತರ ಅಧಿಕಾರಿಗಳಿಗೆ ಪೋಷಕರು ತಮ್ಮ ಅಳಲು ತೋಡಿಕೊಂಡರು.


 ಈಗಾಗಲೇ ಜಡಿಮಳೆ ಯಿಂದ ಮಕ್ಕಳನ್ನು ಮನೆಯಲ್ಲಿ ಇರಲು ಇಲ್ಲಿನ ಅಂಗನವಾಡಿ ಶಿಕ್ಷಕಿ ಹೇಳಿದ್ದಾರೆ. ಮಳೆ ನಿಂತರೂ ಈ ಶಾಲೆಗೆ ಕಳಿಸಲು ಭಯಭಿತರಾಗಿದ್ದಾರೆ.  ಕಟ್ಟಡ ನಿರ್ಮಾಣ ಆಗುವವರೆಗೂ ಬೇರೊಂದು ಜಾಗ ಸಮುದಾಯ ಭವನ ಅಥವಾ ಮನೆ,ಕಟ್ಟಡದಲ್ಲಿ, ಮಕ್ಕಳಿಗೆ ಶಿಕ್ಷಣ ನಿಡಬೇಕಾಗಿ ಗ್ರಾಮಸ್ಥರು ಮತ್ತು ಪೋಷಕರ ಮನವಿಯಾಗಿದೆ. 
ಈ ಸಂದರ್ಭದಲ್ಲಿ ಪತ್ರಕರ್ತ ಗೊರಮಡಗು ಮೈತ್ರಿ ಲೋಕೇಶ್, ವೆಂಕಟೇಶ್, ತಿರುಮಲೇಶ್,ಅಂಜೀ, ಹಾಗೂ ಶಾಲೆಯ ಸಿಬ್ಬಂದಿ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here