ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ಚಿಂತಾಮಣಿಗೆ ವರ್ಗಾವಣೆ

0
77

ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ನೌಕರರ ಸಂಘದಿಂದ ಗುರುವಾರ ಬೀಳ್ಕೊಡುಗೆ ಸಮಾರಂಭ.

ಪಾಲಾರ್ ಪತ್ರಿಕೆ –

ಗುಡಿಬಂಡೆ : ಪಟ್ಟಣದಲ್ಲಿ ಸುಮಾರು ಒಂದೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಾಗೂ ಇಂದಿನ ವಿದ್ಯಾರ್ಥಿಗಳಿಗೆ ಸದಾ ಶಿಕ್ಷಣದ ಜ್ಞಾನವನ್ನು ತುಂಬಿ ಪ್ರೋತ್ಸಾಹಿಸುತ್ತಿದ್ದ ಸೃಜನಶೀಲ ವ್ಯಕ್ತಿಯಾದ  ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ಅವರ ಸಾಧನೆ ಶ್ಲಾಘನೀಯ.


ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಹಾಗೂ ಕಾನುಮಾಕಲಹಳ್ಳಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಹಲವು ವರ್ಷ ಸೇವೆ ಸಲ್ಲಿಸಿ ನಂತರ ಬಾಗೇಪಲ್ಲಿ ತಾಲೂಕಿನ ಬಿಆರ್’ಸಿ( ಸಮನ್ವಯಾಧಿಕಾರಿ ) ಯಾಗಿ ಹಲವು ಸಾಧನೆಯನ್ನು ಮಾಡಿದ್ದಾರೆ. ಶಿಡ್ಲಘಟ್ಟ ತಾಲೂಕಿಗೆ ಅಕ್ಷರದಾಸೋಹ ಸಹಾಯಕ ನಿರ್ದೇಶಕರಾಗಿ ಹಕವು ಬದಲಾವಣೆಗಳನ್ನು ಮಾಡುವುದರ ಮೂಲಕ, ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಬಡ್ತಿ ಪಡೆದು ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಹಲವು ವರ್ಷಗಳು ಕೆಲಸ ಮಾಡಿದ ನಂತರ, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಗೆ ವರ್ಗಾವಣೆಯಾಗಿದ್ದರು.


 ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ವೆಂಕಟೇಶಪ್ಪ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮತ್ತು ಜಿಲ್ಲೆಗೆ  ಪ್ರಥಮ ಸ್ಥಾನ ಬರುವುದರಲ್ಲಿ ಶ್ರಮಿಸಿದ್ದಾರೆ ಹಾಗೂ ಕೋವಿಡ್ ಸಂದರ್ಭದಲ್ಲಿ ಮಕ್ಕಳಿಗೆ ಫೋನ್ ಇನ್ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ಮತ್ತು ಪೋಷಕರ ಸಂದೇಶಗಳನ್ನು ನಿವಾರಿಸುವ ಮೂಲಕ ಎಲ್ಲರ ಮನೆ ಮಾತಾಗಿ ಇವರ ಕಾರ್ಯ ವೈಖರಿ ಮೆಚ್ಚುಗೆ ಪಡೆದಿತ್ತು. ಶಿಕ್ಷಕರ ಸ್ನೇಹಿಯಾಗಿ, ಶಿಕ್ಷಕರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಷ್ಕರಿಸುತ್ತಿದ್ದರು.


ತಾಲೂಕಿನ ಹಂಪಸಂದ್ರ, ಬೀಚಗಾನಹಳ್ಳಿ ಹಾಗೂ ಆದರ್ಶ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಿರುವ ಕೀರ್ತಿಯನ್ನು ಹೊಂದಿದ್ದಾರೆ. ಹೀಗೆ ಗುಡಿಬಂಡೆಗೆ ವರ್ಗಾವಣೆ ಆಗಿ ಬಂದ ನಂತರ ಅನೇಕ ಸಾಧನೆಗಳನ್ನು ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಗುಡಿಬಂಡೆಯ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ನಮ್ಮ ಊರು, ನಮ್ಮ ಶಾಲೆ, ನಮ್ಮ ಮಕ್ಕಳು, ನಮ್ಮ ಕಚೇರಿ ಎಂಬ ಸೃಜನಶೀಲತೆಯ, ಸದಾ ವಿಭಿನ್ನವಾಗಿ ಯೋಚಿಸುವ ಹಾಗೂ ಯಾವುದೇ ಕಷ್ಟ ಕೆಲಸವಾದರೂ ಬಹಳ ಸರಳವಾಗಿ ಮಾಡುವ ಜ್ಞಾನ ಭಂಡಾರವೆಂಬ ಹೆಸರು ಹೊಂದಿರುವವರು ವರ್ಗಾವಣೆಯಾಗಿರುವುದು ತಾಲೂಕಿನ ಜನರಿಗೆ ದುಃಖದ ಸಂಗತಿಯಾಗಿದೆ ಎಂದು ಕೆಲವು ಶಿಕ್ಷಕರು ಬೇಸರ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ.ಎನ್ ರವರನ್ನು ಬಿಳ್ಕೊಟ್ಟು ಬಾಗೇಪಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಸಿದ್ದಪ್ಪ ರವರು ಪ್ರಬಾರಿಯಾಗಿ ಅಧಿಕಾರ ವಹಿಸಿಕೊಂಡರು.

LEAVE A REPLY

Please enter your comment!
Please enter your name here