Monday, April 29, 2024
spot_img
HomeChikballapur23ನ್ನು ರಾಷ್ಟ್ರೀಯ ರೈತರ ದಿನ

23ನ್ನು ರಾಷ್ಟ್ರೀಯ ರೈತರ ದಿನ

ಪಾಲಾರ್ ಪತ್ರಿಕೆ | Palar Pathrike

ಗುಡಿಬಂಡೆ : ದೇಶದಲ್ಲಿ ಪ್ರತಿವರ್ಷ ಡಿಸೆಂಬರ್ 23ನ್ನು ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿವಸ ಎಂದು ಆಚರಿಸಲಾಗುತ್ತದೆ. ಭಾರತದ 5ನೇ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಸ್ಮರಣಾರ್ಥ ಅವರ ಜನ್ಮದಿನವನ್ನು ಕಿಸಾನ್ ದಿವಸ ಎಂದು ಆಚರಿಸಲಾಗುತ್ತದೆಂದು  ಸಹಾಯಕ ಕೃಷಿ ಉಪನಿರ್ದೇಶಕ ಅಮರನಾರಾಯಣರೆಡ್ಡಿ   ತಿಳಿಸಿದರು.
ಶುಕ್ರವಾರ ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ  ಕೃಷಿ ಇಲಾಖೆ, ತಾಲೂಕು ಕೃಷಿಕ ಸಮಾಜ  ಸಹಯೋಗದಲ್ಲಿ ಆಯೋಜಿಸಿದ ರೈತರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಚೌಧರಿ ಚರಣ್ ಸಿಂಗ್ ಅವರು ಅಲ್ಪಾವಧಿಗೆ ಭಾರತದ ಪ್ರಧಾನ ಮಂತ್ರಿಯಾಗಿದ್ದವರು. ಜುಲೈ 1979ರಲ್ಲಿ ಪ್ರಧಾನಿಯಾಗಿ ಹುದ್ದೆ ವಹಿಸಿ 1980ರ ಜನವರಿಯವರಿಗೆ ಇದ್ದರು. ಈ ಅವಧಿಯಲ್ಲಿ ರೈತರ ಕಲ್ಯಾಣಕ್ಕೆ ಅವರು ತಂದ ಯೋಜನೆಗಳು ಇಂದಿಗೂ ಜನಪ್ರಿಯ. ರೈತರ ಪರವಾಗಿ ರೈತಸ್ನೇಹಿ ಯೋಜನೆಗಳನ್ನು ತಂದಿದ್ದಕ್ಕಾಗಿ ಅವರ ನೆನಪಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆಂದು ತಿಳಿಸಿದರು. 
ನಂತರ ರೈತ ಸಂಘದ ಜಿಲ್ಲಾಧ್ಯಕ್ಷ  ಹೆಚ್.ಪಿ.ರಾಮನಾಥ್ ಮಾತನಾಡಿ, ದೇಶದ ಬೆನ್ನೆಲುಬು ಆಗಿರುವ ರೈತ ಸಂಕಷ್ಟಕ್ಕೆ ಸಿಲುಕಿತ್ತದ್ದರು ಸಹ ಸರಕಾರ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಈಗಾಗಲೇ ಸರಕಾರ ೩ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯದೆ  ರೈತರನ್ನು ಸಂಕಷ್ಟಕ್ಕೆ ‌ಸಿಲುಕುವಂತೆ ಮಾಡುತ್ತಿವೆ, ರೈತರ ಕೃಷಿ ಭೂಮಿ ಬಂಡವಾಳ ಶಾಹಿಗಳ ಕೈ ಸೇರುತ್ತಿವೆ, ಇರುವ ಅಲ್ಪಸ್ವಲ್ಪ ಜಮೀನಿನಲ್ಲಿ ಬೆಳೆ ಇಡಲು ಕಳಪೆ ಬಿತ್ತನೆ ಬೀಜ, ಕಳಪೆ ಔಷಧಿಗಳು ವಿತರಣೆ ಸೇರಿ ಅನೇಕ ಕಳಪೆ ಮಟ್ಟದ ರಾಸಾಯನಿಕ ಗೊಬ್ಬರಗಳನ್ನು ನೀಡಿ ರೈತರನ್ನು ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಚುನಾವಣೆ ಸಮಯದಲ್ಲಿ ಮಾತ್ರ ಅನೇಕ ಅಶ್ವಾಸನೇಗಳನ್ನು ನೀಡುತ್ತಾರೆಂದು ಆರೋಪಿಸಿದರು.
ನಂತರ ರೈತ ಸಂಘದ ತಾಲೂಕು ಅಧ್ಯಕ್ಷ ಯರ್ರಹಳ್ಳಿ ನಾರಾಯಣಸ್ವಾಮಿ ಮಾತನಾಡಿ, ದೇಶದ ಜನತೆಗೆ ಅಣ್ಣ ನೀಡುವ ರೈತರಿಗೆ ಸರಕಾರ ಜಾತಿ ಆಧಾರದ ಮೇಲೆ ಯೋಜನೆಗಳನ್ನು ನೀಡುತ್ತಿದೆ ಹಾಗೂ ರಿಯಾಯಿತಿಗಳನ್ನು ಜಾತಿ ಆಧಾರದ ಮೇಲೆ ನೀಡುತ್ತಿರುವುದು ಸರಿಯಲ್ಲ ಹಾಗೂ ೧೦೦ ಜನ ರೈತರಿದ್ದರೇ ೧ ಫಲಾನುಭವಿಗಳಿಗೆ ಮಾತ್ರ ಲಾಟರಿ ಮೂಲಕ ಆಯ್ಕೆ ಮಾಡುವ ವಿಧಾನವನ್ನು ಸರಕಾರ ಮಾಡುತ್ತಿರುವುದು ರೈತ ವಿರೋಧ ನೀತಿಯಾಗಿದೆ ಕೂಡಲೇ ಹೆಚ್ಚು ಯೋಜನೆಗಳನ್ನು ಮಾಡಬೇಕೆಂದು‌ ಸರಕಾರಕ್ಕೆ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಬಿಹಾರ ಜಂಬಳಿ ಹುಳುವಿನ ಸಮಗ್ರ ಹತೋಟಿ ಕ್ರಮಗಳ ಕರ ಪತ್ರಗಳನ್ನು ಗಣ್ಯರು ಬಿಡುಗಡೆ ಮಾಡಿದರು.
ಈ ವೇಳೆ ಕೃಷಿಕ ಸಮಾಜದ ಅಧ್ಯಕ್ಷ ಜಿ.ಎಸ್. ನಾಗರಾಜು, ರೈತ ತಾಲೂಕು ಅಧ್ಯಕ್ಷ ಬಲರಾಮಪ್ಪ, ಸರಕಾರಿ ನೌಕರರ ಸಂಘದ ಅಧ್ಯಕ್ಷರ ಕೆ.ವಿ. ನಾರಾಯಣಸ್ವಾಮಿ, ಕೃಷಿಕ ಸಮಾಜದ ಉಪಾಧ್ಯಕ್ಷ ಚೌಡರೆಡ್ಡಿ, ಕಾರ್ಯದರ್ಶಿ ಜಿ ವಿ. ರಾಜಗೋಪಾಲ್, ಸದಸ್ಯರಾದ ಎಂ.ಎನ್.ಸುಶೀಲಾ, ಕೃಷಿ ಅಧಿಕಾರಿ   ಶಂಕರಯ್ಯ, ತೋಟಗಾರಿಕೆ ಇಲಾಖೆಯ ದಿವಾಕರ್, ರೇಷ್ಮೆ ಇಲಾಖೆಯ ಮುನಿಶ್ಯಾಮಿ, ಪಶು ಇಲಾಖೆ ವೈದ್ಯಾಧಿಕಾರಿ ಡಾ. ರವಿಚಂದ್ರ ಸೇರಿ ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments