Wednesday, March 29, 2023
spot_img
HomeChikballapurBagepalliಜಿ.ವಿ. ಶ್ರೀರಾಮ ರೆಡ್ಡಿರವರ ಆಶಯಗಳನ್ನು ಈಡೇರಿಸುವುದೇ ನನ್ನ ಮುಖ್ಯ ಗುರಿ ಪಕ್ಷೇತರ ಅಭ್ಯರ್ಥಿ ಆರ್ .ಮಿಥುನ್...

ಜಿ.ವಿ. ಶ್ರೀರಾಮ ರೆಡ್ಡಿರವರ ಆಶಯಗಳನ್ನು ಈಡೇರಿಸುವುದೇ ನನ್ನ ಮುಖ್ಯ ಗುರಿ ಪಕ್ಷೇತರ ಅಭ್ಯರ್ಥಿ ಆರ್ .ಮಿಥುನ್ ರೆಡ್ಡಿ ರವರ ಅಭಿಪ್ರಾಯ

ಪಾಲಾರ್ ಪತ್ರಿಕೆ | Palar Pathrike

ಬಾಗೇಪಲ್ಲಿ : ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹಾಗೂ ಸಮಾಜ ಸೇವಕರಾದ ಮಿಥುನ್ ರೆಡ್ಡಿರವರು ಪಟ್ಟಣದ ವಿಶ್ವೇಶ್ವರಯ್ಯ ಸ್ಟೇಡಿಯಮ್  ಆವರಣದಲ್ಲಿ ಅಪಾರ ಬೆಂಬಲಿಗರೊಂದಿಗೆ ಪತ್ರಿಕೆಯೊಂದಿಗೆ ಮಾತನಾಡಿದರು.ಅವರು ಮಾತನಾಡಿ ,ಬಾಗೇಪಲ್ಲಿ ಕ್ಷೇತ್ರದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ತುಂಬ ತುಳುಕುತ್ತಿದೆ. ಇದರಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ರಾಜಕೀಯ ನಾಯಕರು ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ. ನಂತರ ಬಾಗೇಪಲ್ಲಿ ಜನರ ಸಮಸ್ಯೆಗಳನ್ನು ಪರಿಹಾರಸುವವರೂ ಯಾರು ಇರುವುದಿಲ್ಲ . ಇದರಿಂದ ಬಾಗೇಪಲ್ಲಿ ಅಭಿವೃದ್ಧಿ ಸಂಪೂರ್ಣವಾಗಿ ಕುಂಠಿತವಾಗಿದೆ. ಆದ್ದರಿಂದ ನಾನು ಜಿ.ವಿ. ಶ್ರೀರಾಮರೆಡ್ಡಿರವರು ಈ ಕ್ಷೇತ್ರಕ್ಕೆ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಗಮನದಲ್ಲಿಟ್ಟುಕೊಂಡು ಅದರ ಜೊತೆಗೆ ಅವರಿಗಿದ್ದ ಮುಂದಿನ ಆಶಯಗಳನ್ನು ಬಾಗೇಪಲ್ಲಿ ಅಭಿವೃದ್ಧಿ ವಿಚಾರದಲ್ಲಿ ನಾನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಬಾಗೇಪಲ್ಲಿ ಜನತೆಗೆ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಬದ್ಧನಾಗಿರುತ್ತಾನೆ. ಈಗಾಗಲೇ ನಾನು ಪಕ್ಷೇತರ ಅಭ್ಯರ್ಥಿಯಾಗಿದ್ದು , ಯಾವುದೇ ಜಾತಿ ರಾಜಕೀಯ ಮಾಡೋದಿಲ್ಲ. ನನಗೆ ಯಾವುದೇ ಜಾತಿ ಬೇಧಭಾವ ಇರುವುದಿಲ್ಲ. ನನಗೆ ಎಲ್ಲಾ ಜಾತಿಯವರ, ಎಲ್ಲಾ ಜನಾಂಗದವರ ಜನರ ಆಶೀರ್ವಾದವನ್ನು  ಈ ಬಾರಿ ಪಕ್ಷೇತರ ಅಭ್ಯರ್ಥಿ ಆರ್. ಮಿಥುನ್ ರೆಡ್ಡಿ ಆದ ನನಗೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಅವಕಾಶವನ್ನು  ನೀಡಿದರೆ ಬಾಗೇಪಲ್ಲಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ.ಮುಖ್ಯವಾಗಿ ಜಿ.ವಿ. ಶ್ರೀರಾಮ ರೆಡ್ಡಿರವರ ಆಶಯಗಳನ್ನು ಈಡೇರಿಸುವುದೇ ನನ್ನ ಮುಖ್ಯ ಗುರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಜಾ ಸಂಘರ್ಷ ಸಮಿತಿಯ ಮುಖಂಡರಾದ ಚನ್ನರಾಯಪ್ಪ, ಜುಬೇರ್ ಮತ್ತು ಮುಖಂಡರಾದ ಭಾಸ್ಕರ್ ,ಇನಾಯತ್ತುಲ್ಲಾ, ಜಿ.ವಿ .ಪ್ರದೀಪ್ ಕುಮಾರ್, ಫ್ರೂಟ್ ಮುಜೀಬ್ ,ಕಿರಣ್ ಕುಮಾರ್,  ಪಿ.ಡಿ ವೆಂಕಟರಾಮ, ಶ್ರೀನಿವಾಸ ಮತ್ತು ಅಪಾರ ಪ್ರಮಾಣದಲ್ಲಿ ಬೆಂಬಲಿಗರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments